ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷವನ್ನು ಸ್ಥಾಪನೆ ಮಾಡಿ, ರಾಜಕೀಯ ಅಖಾಡಕ್ಕೆ ಧುಮುಕಲು ಸನ್ನದ್ಧರಾಗಿದ್ದಾರೆ. ಆಪ್ತರನ್ನು ಬಿಜೆಪಿಯಿಂದ ತನ್ನ ಪಕ್ಷಕ್ಕೆ ಸೆಳೆದುಕೊಳ್ಳುವ ಕೆಲಸವೂ ನಡೆಯುತ್ತಿದೆ. ಆದರೆ ಇದರ ನಡುವೆ ಜನಾರ್ದನ ರೆಡ್ಡಿ ಸಹೋದರರೇ ಬೇಸರ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೋಪದಿಂದಾನೆ ಮಾತನಾಡಿರುವ ಶಾಸಕ ಸೋಮಶೇಖರ ರೆಡ್ಡಿ, ಹೊಸ ಪಕ್ಷ ಆರಂಭಿಸುವುದು ಬೇಡ ಎಂದರೂ ಕೇಳಲಿಲ್ಲ. ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗಾಗಲೇ ತಪ್ಪಾಗಿದೆ. ಮತ್ತೆ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಅವತ್ತು ರೆಡ್ಡಿಗಾಗಿ ಚುನಾವಣೆಯಲ್ಲಿ ನ್ಯೂಟ್ರಲ್ ಆಗಿದ್ದೆ. ಆದರೆ ಈ ಬಾರಿ ಬಳ್ಳಾರಿಯಿಂದಾನೇ ಸ್ಪರ್ಧಿಸುತ್ತೇನೆ.
ರಾಜಕೀಯದಲ್ಲಿ ಯಾವತ್ತಿಗೂ ತಾಳ್ಮೆ ಇರಬೇಕು. ಇಲ್ಲಂದ್ರೆ ರೇಡ್ ಆಗುತ್ತೇವೆ. ಪಕ್ಷ ಸ್ಥಾಪನೆ ಮಾಡಿದ್ದಕ್ಕೆ ಆಸ್ತಿ ಜಪ್ತಿಯಾಗುತ್ತಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಇದೆ. ಅವು ಏನು ಹೇಳುತ್ತವೆಯೋ ಅದನ್ನೇ ಮಾಡುತ್ತಾರೆ ಎಂದಿದ್ದಾರೆ.