ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ಕೇಸ್ : 8 ಜನರ ಬಂಧನ..!

1 Min Read

ಬಳ್ಳಾರಿ: ಬ್ಯಾನರ್ ಗಲಾಟೆ ಮಾಸುವ ಮುನ್ನವೇ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸಂಬಂಧಪಟ್ಟ ಮಾಡೆಲ್ ಹೌಸ್ ಗೆ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದು, ಎಫ್ಎಸ್ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮತ್ತಷ್ಟು ಸಾಕ್ಷಿಗಳನ್ನ ಕಲೆ ಹಾಕುತ್ತಿದ್ದಾರೆ.

 

ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಅವರು ಇನ್ನು ದೂರು ನೀಡಿಲ್ಲ. ಇಂದು ಜನಾರ್ದನ ರೆಡ್ಡಿ ಅವರು ದೂರು ದಾಖಲಿಸುವ ಸಾಧ್ಯತೆ ಇದೆ. ಮಾಡೆಲ್ ಹೌಸ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಸಂಬಂಧ ಬಳ್ಳಾರಿ ಗ್ರಾಮೀಣ ಠಾಣೆಗೆ ರುಕ್ಮಿಣಿ ಅವೆನ್ಯೂ ಲೇಔಟ್ ನ ಸೈಟ್ ಇಂಜಿನಿಯರ್ ರಿಜ್ವಾನ್ ಎಂಬುವವರು ದೂರು ನೀಡಿದ್ದಾರೆ.

ನಿನ್ನೆ ಸಂಜೆ 5.30ರ ಸುಮಾರಿಗೆ ಇಪ್ಪತ್ತರಿಂದ ಇಪ್ಪತ್ತೈದು ವಯಸ್ಸಿನ ಎಂಟರಿಂದ ಹತ್ತು ಜನ ಕಿಡಿಗೇಡಿಗಳು ಬಂದು ಬೆಂಕಿ ಹಚ್ಚಿದ್ದಾರೆ. ಜನಾರ್ದನ ರೆಡ್ಡಿ ಅವರ ಪತ್ನಿ ಶ್ರೀಮತಿ ಜಿ.ಲಕ್ಷ್ಮೀ ಅವರಿಗೆ ಸೇರಿದ್ದ ಅಡೆಲ್ ಹೌಸ್ ಇದಾಗಿದೆ. ದುರುದ್ದೇಶದಿಂದಲೇ ಮಾಡೆಲ್ ಹೌಸ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಅಂತ ರಿಜ್ವಾನ್ ತಮ್ಮ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಘಟನೆಯಿಂದ ಅಂದಾಜು 1 ಕೋಟಿ 25 ಲಕ್ಷ ಮೊತ್ತದ ವಸ್ತುಗಳಿಗೆ ಹಾನಿ‌ಯಾಗಿದೆ. ಬ್ಯಾನರ್ ಗಲಾಟೆ ವೇಳೆ ಶಾಸಕ ಭರತ್ ರೆಡ್ಡಿ ಬಳ್ಳಾರಿಯನ್ನ ಭಷ್ಮ ಮಾಡುತ್ತೆವೆ ಅಂತಾ ಹೇಳಿಕೆ ಕೊಟ್ಟಿದ್ದರು, ಆ ಹಿನ್ನೆಲೆಯಲ್ಲೇ ಈ ಪ್ರಕರಣವನ್ನ ತನಿಖೆ ಮಾಡಿ ಅಂತ ರಿಜ್ವಾನ್ ಮನವಿ ಮಾಡಿದ್ದಾರೆ.

Share This Article