ಬಳ್ಳಾರಿ ಮೃತ ಕುಟುಂಬಕ್ಕೆ ಜಮೀರ್ ಪರಿಹಾರ : ಲೆಕ್ಕ ಕೇಳಿದ ಕುಮಾರಸ್ವಾಮಿಗೆ ಡಿಕೆಶಿ ಹೇಳಿದ್ದೇನು..?

1 Min Read

ಬೆಂಗಳೂರು: ಇತ್ತೀಚೆಗೆ ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ದೊಡ್ಡ ಮಟ್ಟದ ಗಲಾಟೆಯೇ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತನ ಪ್ರಾಣವೂ ಹೋಗಿದೆ. ಮೃತ ರಾಜಶೇಖರ್ ರೆಡ್ಡಿ‌ ಕುಟುಂಬಕ್ಕೆ ಆತನೇ ಆಶ್ರಯವಾಗಿದ್ದ. ಆ ಕಾರಣಕ್ಕೆ ಸಚಿವ ಜಮೀರ್ ಅಹ್ಮದ್ ಅವರ ಮನೆಗೆ ತೆರಳಿ ಸಾಂತ್ವಾನ ಹೇಳಿ, 25 ಲಕ್ಷ ರೂಪಾಯಿ ಹಣವನ್ನ ಪರಿಹಾರವಾಗಿ ನೀಡಿದ್ದರು. ಈ ಸಂಬಂಧ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಲೆಕ್ಕ ಕೇಳಿದ್ದರು.

ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಳ್ಳಾರಿಗೆ ನಾನು ಹೋಗ್ತಾ ಇದ್ದೀನಿ. ಏನಿದೆ ಅಲ್ಲಿನ ಪರಿಸ್ಥಿತಿ ಎಂಬುದನ್ನ ನೋಡಿಕೊಂಡು ಬರ್ತೀನಿ. ನಮಗೆ ರಾಜ್ಯದಲ್ಲಿ ಶಾಂತಿ ಇರಬೇಕು. ಬಳ್ಳಾರಿಯಲ್ಲೂ ಶಾಂತವಾಗಿರಬೇಕು. ಎಲ್ಲಾ ಕಡೆಯಲ್ಲೂ ಶಾಂತಿ ಇರಬೇಕು. ಬಿಜೆಪಿಯವರಿಗೆ ಪಾಪ ವಿಶ್ರಾಂತಿಹೀನರಾಗ್ತಿದ್ದಾರೆ. ಅದಕ್ಕೆ ಎಲ್ಲಾ ಕಡೆನೂ ಈ ರೀತಿ ಮಾಡ್ತಾ ಇದ್ದಾರೆ ಎಂದಿದ್ದಾರೆ.

ಇದೆ ವೇಳೆ ಕುಮಾರಸ್ವಾಮಿ ಅವರು ಕೇಳಿದ ಲೆಕ್ಕದ ಬಗ್ಗೆ ಮಾತನ್ನಾಡಿದ್ದು, ಜಮೀರ್ ಅವರ ಹತ್ತಿರ ಈ ಬಗ್ಗೆ ಮಾತನ್ನಾಡ್ತೀನಿ. ಐಟಿ ಇಲಾಖೆಯೆಲ್ಲಾ ಅವ್ರತ್ರಾನೇ ಇದ್ದಾರಲ್ಲ. ಕುಮಾರಸ್ವಾಮಿ ಜೇಬಲ್ಲಿಯೇ ಉದ್ದಾರಲ್ವಾ ಎಂದು ಖಾರವಾಗಿಯೇ ಉತ್ತರ ನೀಡಿದ್ದಾರೆ. ಬಳ್ಳಾರಿಯಲ್ಲಿ ವಾತಾವರಣ ಸ್ವಲ್ವ ತಣ್ಣಗಾಗಿದೆ. ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬಳ್ಳಾರಿಯಲ್ಲಿ ಬೀಡು ಬಿಟ್ಟಿದ್ದಾರೆ. ಈ ಕೇಸ್ ಗೆ ಸಂಬಂಧಿಸಿದಂತೆ 26 ಜನರ ಬಂಧನವೂ ಆಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೂ ಶಿಫ್ಟ್ ಮಾಡಲಾಗಿದೆ. 14 ದಿನಗಳ ನ್ಯಾಯಾಂಗ ಬಂಧನ ಮುಗಿದ ಮೇಲೆ ತೀರ್ಮಾನವಾಗಲಿದೆ.

Share This Article