ಜಮೀರ್ ಪುತ್ರ ಕೂಡ ರಾಜಕೀಯಕ್ಕೆ ಬರ್ತಾರಾ..?

suddionenews
1 Min Read

ಹಾಸನ : ರಾಜಕಾರಣಿಗಳ ಮಕ್ಕಳು ಹೆಚ್ಚಾಗಿ ರಾಜಕೀಯದಲ್ಲೇ ತೊಡಗಿಸಿಕೊಳ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ ಈಗಷ್ಟೇ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುತ್ತಿರುವ ಶಾಸಕ ಜಮೀರ್ ಪುತ್ರ ಕೂಡ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಅನ್ನೋ ಹಲವು ಪ್ರಶ್ನೆಗಳು ಹಲವರಲ್ಲಿದೆ. ಅದಕ್ಕೆ ಉತ್ತರವೆಂಬಂತೆ ಜಮೀರ್ ಪುತ್ರ ಝೈದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೇನೋ ಏನೋ. ನನ್ನ ನೋಡೋದಕ್ಕೆ ಜನ ಸಾಗರವೇ ಬಂದಿದೆ. ನನ್ನ ತಂದೆ ರಾಜಕೀಯದಲ್ಲಿ ಗುರುತಿಸಿಕೊಂಡವರು. ಆದ್ರೆ ನಾನು ಸಿನಿಮಾರಂಗವನ್ನೆ ಇಷ್ಟಪಡುವವನು. ನನಗೆ ರಾಜಕೀಯ ಕ್ಷೇತ್ರ ಇಷ್ಟವಿಲ್ಲ.

ನನ್ನ ತಂದೆ ರಾಜಕೀಯ ಕ್ಷೇತ್ರದಲ್ಲಿದ್ದುಕೊಂಡು ಜನಸೇವೆ ಮಾಡಿದ್ದಾರೆ. ಅವರನ್ನು ಗೌರವಿಸುವ ಜನ ನನ್ನನ್ನು ಗೌರವಿಸುತ್ತಾರೆ. ಅದರಿಂದ ನನಗೆ ತುಂಬಾ ಸಂತೋಷವಾಗಿದೆ. ನಾನು ಸಿನಿಮಾರಂಗದಲ್ಲೆ ತೊಡಗಿಸಿಕೊಳ್ತೇನೆ. ನಾನು ತುಂಬಾ ಅದೃಷ್ಟವಂತ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *