ನವದೆಹಲಿ: ರಾಜ್ಯದಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ಬಹಳ ಜೋರಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳು ಅಲ್ಲಾ ಹು ಅಕ್ಬರ್ ಎಂದು ಜೋರಾಗಿ ಕೂಗಿಕೊಂಡು ಹೋದ ವಿಡಿಯೋ. ಆ ವಿದ್ಯಾರ್ಥಿನಿ ಹಿಂದೆಯೇ ಹುಡುಗರ ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಹೋಗಿದ್ದರು. ಇದೀಗ ಜಮಾತ್ ಉಲೇಮಾ ಎ ಹಿಂದ್ ಆ ವಿದ್ಯಾರ್ಥಿನಿಗೆ 5 ಲಕ್ಷ ರೂ ಬಹುಮಾನ ಘೋಷಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಮಾತ್ ಉಲೇಮಾ ಎ ಹಿಂದ್, 5 ಲಕ್ಷ ಬಹುಮಾನ ನೀಡೋದಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಆ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಕೂಡ ಮಾತನಾಡಿದ್ದು, ನಾನು ಎಂದಿನಂತೆ ಕಾಲೇಜಿಗೆ ಹೋಗುತ್ತಿದ್ದೆ. ಈ ವೇಳೆ ಅಲ್ಲಿಂದ ಗುಂಪು ಜೈ ಶ್ರೀರಾಮ್ ಎಂದು ಕೂಗಿದರು. ಅದಕ್ಕೆ ನಾನು ಅಲ್ಲಾಹು ಅಕ್ಬರ್ ಎಂದೇ. ಅಲ್ಲಿದ್ದವರಲ್ಲಿ ನಮ್ಮ ಕಾಲೇಜಿನ ಹುಡುಗರು ಇದ್ದದ್ದು 10 ಪರ್ಸೆಂಟ್ ಮಾತ್ರ. ಇನ್ನುಳಿದವರು ಬೇರೆಯವರು ಎಂದಿದ್ದಾರೆ.
ಇನ್ನು ಒಂದು ತುಂಡು ಬಟ್ಟೆ ವಿಚಾರಕ್ಕೆ ಅವರು ನಮ್ಮ ಶಿಕ್ಷಣವನ್ನು ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ. ನಮಗೆ ಶಿಕ್ಷಣವೇ ಮೊದಲ ಆದ್ಯತೆ. ಬುರ್ಖಾ ಮತ್ತು ಹಿಜಬ್ ಧರಿಸಿ ಕಾಲೇಜಿಗೆ ಬರುತ್ತಿದ್ದೆವು. ಆದ್ರೆ ಕಾಲೇಜಿನ ಒಳಗೆ ಬುರ್ಖಾ ತೆಗೆದು ಹಿಜಬ್ ಮಾತ್ರ ಉಳಿಸಿಕೊಳ್ಳುತ್ತಿದ್ದೆವು. ಇದು ಮುಂಚೆಯಿಂದಲೂ ನಡೆದುಕೊಂಡು ಬಂದಿದೆ ಎಂದು ಆ ವಿದ್ಯಾರ್ಥಿನಿ ಹೇಳಿದ್ದಾರೆ.