ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರ ಕಡೆ ಸಿನಿಮಾ ಜೇಮ್ಸ್ ಇಂದು ರಿಲೀಸ್ ಆಗಿದೆ. ಅಬ್ಬಬ್ಬಾ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಅಪ್ಪು ಇಲ್ಲ ಅನ್ನೋ ನೋವಿನ ಜೊತೆಗೆ ಅವರ ಸಿನಿಮಾವನ್ನ ಸೆಲೆಬ್ರೇಟ್ ಮಾಡ್ತಿದ್ದಾರೆ.

ಹಲವು ವಿಚಾರಗಳಲ್ಲಿ ಹಲವು ದಾಖಲೆ ಬರೆದಿರುವ ಅಪ್ಪು ಸಿನಿಮಾ, ಇದೀಗ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ. ಸಿನಿಮಾ ರಿಲೀಸ್ ಗೂ ಮುನ್ನವೇ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಮೊದಲ ದಿನದ ಕಲೆಕ್ಷನ್ ಎಲ್ಲರನ್ನ ದಂಗಾಗಿಸುವಂತೆ ಮಾಡಿದೆ.

ಸುಮಾರು 4 ಸಾವಿರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. 376 ಸಿಂಗಲ್ ಸ್ಕ್ರೀನ್, 180 ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ತೆರೆಕಂಡಿದ್ದು, ಮೊದಲ ದಿನವೇ ಬರೋಬ್ಬರಿ 25-30 ಕೋಟಿ ಕಲೆಕ್ಷನ್ ಪಡೆದಿದೆ ಎನ್ನಲಾಗಿದೆ. ಒಂದೇ ವಾರದಲ್ಲಿ 100 ಕೋಟಿ ದಾಟುವ ನಿರೀಕ್ಷೆ ಚಿತ್ರತಂಡಕ್ಕಿದೆ.
ಈಗಾಗಲೇ ಸ್ಯಾಟಲೈಟ್ ರೈಟ್ಸ್ ಕೂಡ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. 13 ಕೋಟಿಗೂ ಹೆಚ್ಚು ಮೊತ್ತ ಪಡೆದಿದೆ ಎನ್ನಲಾಗಿದೆ. ಹೀಗೆ ಹಲವು ದಾಖಲೆಗಳನ್ನ ಅಪ್ಪು ಸಿನಿಮಾ ಸೃಷಗಟಿ ಮಾಡುತ್ತಿದೆ.


