ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸದ್ಯ ಜೈಲಿನಲ್ಲಿದ್ದಾರೆ. ಕಳೆದ 35 ವರ್ಷದ ಹಿಂದಿನ ಕೇಸ್ ನಲ್ಲಿ ಜೈಲುಪಾಲಾಗಿದ್ದು, ಸದ್ಯ ಅನಾರೋಗ್ಯದ ಕಾರಣ ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ.
ವೇಯ್ಟ್ ಅಲರ್ಜಿಯಿಂದ ಬಳಲುತ್ತಿರುವ ನವಜೋತ್ ಸಿಂಗ್ ಸಿಧು, ಪಟಿಯಾಲ ಸೆಂಟ್ರಲ್ ಜೈಲಿನಿಂದ ರಾಜೇಂದ್ರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಸಿಧು ಪರ ವಕೀಲರು ಮಾಹಿತಿ ನೀಡಿದ್ದಾರೆ.
ನವಜೋತ್ ಸಿಂಗ್ ಸಿಧು, 1988ರಲ್ಲಿ ರಸ್ತೆ ಮಧ್ಯೆ ನಿಲ್ಲಿಸಲಾಗಿದ್ದ ಜಿಪ್ಸಿಯಲ್ಲಿ ಕುಳಿತಿದ್ದರು. ಅಲ್ಲಿ 65 ವರ್ಷದ ಗುರ್ನಾಮ್ ಸಿಂಗ್ ಬಂದು ಕಾರು ತೆಗೆಯಲು ಹೇಳಿದ್ದರು. ಆದರೆ ಕಾರು ತೆಗೆಯದೆ ಮಾತಿಗೆ ಮಾತು ಬೆಳೆದು, ಗುರ್ನಾಮ್ ಮೇಲೆ ಹಲ್ಲೆ ನಡೆಸಿದ್ದರು, ಆಸ್ಪತ್ರೆಗೆ ಸೇರಿದ್ದ ಗುರ್ನಾಮ್ ಸಾವನ್ನಪ್ಪಿದ್ದರು. ಇದೇ ಪ್ರಕರಣಕ್ಕೆ ಸಮಭಂಧಿಸಿದಂತೆ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.