ಅಲೋಕ್ ಕುಮಾರ್ ರಿಂದ ಮಾತ್ರ ಸಾಧ್ಯ ಜೈಲು ಸುಧಾರಣೆ : ಭಾಸ್ಕರ್ ರಾವ್

1 Min Read

ಬೆಂಗಳೂರು: ಸದ್ಯ ಜೈಲಿನಲ್ಲಿ ರಾಜಾತಿಥ್ಯ ನಡಿತಿದೆ ಅನ್ನೋದು ವಿಡಿಯೋ ಸಮೇತ ಪ್ರೂವ್ ಆಗಿದೆ‌‌. ಹೀಗಾಗಿ ಅಲೋಕ್ ಕುನಾರ್ ಅವರನ್ನ ಕಾರಾಗೃಹ ಇಲಾಖೆಯ ಡಿಜಿಪಿ ಆಗಿ ನೇಮಕ ಮಾಡಲಾಗಿದೆ. ಅಲೋಕ್ ಕುಮಾರ್ 1994ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಜೈಲಿಗೆ ಸರಿಯಾದ ಅಧಿಕಾರಿಯನ್ನೆ ಹಾಕಿದ್ದಾರೆ ಎಂಬುದನ್ನ ಮಾಜಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಭಾಸ್ಕರ್ ರಾವ್, ಡಿಜಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಹುದ್ದೆಗೆ ನೇಮಕ ಮಾಡಿದ್ದನ್ನು ಶ್ಲಾಘಿಸಿದ್ದು, ರಾಜ್ಯದ ಜೈಲು ವ್ಯವಸ್ಥೆಯನ್ನು ಸುಧಾರಿಸಲು ಅವರು ಸರಿಯಾದ ಆಯ್ಕೆ. ಕರ್ನಾಟಕ ಹೊಸದಾಗಿ ನೇಮಕಗೊಂಡು, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮುಖ್ಯಸ್ಥರಾಗಿರುವ ಅಲೋಕ್ ಕುಮಾರ್ ಅವರನ್ನು ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಪ್ರಶಂಸಿದ್ದಾರೆ.

ಅಲೋಕ್ ಕುನಾರ್ ಅವರು ರಾಜ್ಯದ ಜೈಲು ವ್ಯವಸ್ಥೆಯನ್ನು ನಿಜವಾಗಿಯೂ ಸುಧಾರಿಸುವ ಸಾಮರ್ಥ್ಯವಿರುವ ಏಕೈಕ ಅಧಿಕಾರಿ. ದುರುಪಯೋಗ ಮತ್ತು ಅಕ್ರಮಗಳ ಬಗ್ಗೆ ಪದೇ ಪದೇ ವಿವಾದಗಳನ್ನು ಎದುರಿಸುತ್ತಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ಇಡೀ ಜೈಲು ಜಾಲವನ್ನು ಸ್ವಚ್ಛಗೊಳಿಸುವ ಮತ್ತು ಕೂಲಂಕುಷವಾಗಿ ಪರಿಶೀಲಿಸುವ ಸಾಮರ್ಥ್ಯವನ್ನು ಅಲೋಕ್ ಕುಮಾರ್ ಹೊಂದಿದ್ದಾರೆ. ಜೈಲುಗಳ ಒಳಗೆ ಪಾರದರ್ಶಕತೆ ಮತ್ತು ಶಿಸ್ತು ದೀರ್ಘ ಕಾಲದಿಂದ ಬಾಕಿ ಇದ್ದು, ಅಲೋಕ್ ಕುಮಾರ್ ಅವರ ನಾಯಕತ್ವದಲ್ಲಿ ಮಾತ್ರ ಸಾಧಿಸಬಹುದಾಗಿದೆ. ಅಲೋಕ್ ಕುಮಾರ್ ಅವರ ಅಧಿಕಾರಾವಧಿಯೊಳಗೆ ಇಡೀ ಜೈಲು ಆಡಳಿತವನ್ನು ಸರಿಪಡಿಸಲಾಗುವುದು ಎಂದು ತಾವೂ ಆಶಿಸುವುದಾಗಿ ಭಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.

Share This Article