ಚಿತ್ರರಂಗದಲ್ಲೆ ಒಗ್ಗಟ್ಟಿಲ್ಲದ ಬಗ್ಗೆ ಜಗ್ಗೇಶ್ ಬೇಸರ ; ಡಿಕೆಶಿಗೆ ಕೊಟ್ಟ ರಿಯಾಕ್ಷನ್ ಏನು..?

suddionenews
1 Min Read

ಬೆಂಗಳೂರು; ಅಂತರಾಷ್ಟ್ರೀಯ ಚಲಚಿತ್ರೋವಕ್ಕೆ ನಿನ್ನೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಈ ವೇಳೆ ಕಲಾವಿದರೇ ಇಲ್ಲದ ಕಾರ್ಯಕ್ರಮದ ಬಗ್ಗೆ ಡಿಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಮಾಡ್ತಾ ಇರೋದೆ ಅವರ ಕಾರ್ಯಕ್ರಮ. ಈ ಹಬ್ಬಕ್ಕೆ ಸಿನಿಮಾ ತಾರೆಗಳೇ ಇಲ್ಲವೆಂದರೆ ಹೇಗೆ ಎಂಬ ಪ್ರಶ್ನೆಯನ್ನು ಹಾಕಿದ್ದರು. ಇದೀಗ ಈ ವಿಚಾರಕ್ಕೆ ನಟ ಜಗ್ಗೇಶ್ ಕುಇಡ ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ಯಕ್ರಮ 7ಘಂಟೆಗೆ ಆಹ್ವಾನ ಪತ್ರಿಕೆ ತಲುಪಿದ್ದು 6ಘಂಟೆಗೆ.. ಜೊತೆಗೆ ಒಗಟ್ಟಿಲ್ಲಾ ಸಂವಾದವಿಲ್ಲಾ ಒಟ್ಟಾರೆ ಕಲಾವಿದರ ಸಂಘವೆ ಕಣ್ಮರೆ. ಕನ್ನಡ ಚಿತ್ರರಂಗ ಅವಸಾನ ಕರ್ನಾಟಕದಲ್ಲಿ..ಯಾವ ಕಲಾವಿದರು ಏನಾಗಿದ್ದಾರೆ ಕಲಾವಿದರಾದ ನಮಗೆ ಮಾಹಿತಿಯಿಲ್ಲಾ!ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ ಇನ್ನು ಟೈಟ್ ಮಾಡಿ ಏನು ಪ್ರಯೋಜನ.

ಕಲಾವಿದರು ಒಟ್ಟುಗೂಡಲೆಂದೆ ಡಾ:ರಾಜಕುಮಾರ ರವರು ಕಲಾವಿದರ ಸಂಘ ಮಾಡಿದ್ದರು ದೌರ್ಭಾಗ್ಯ ಅದು ಇಂದು ನಿಷ್ಕ್ರಿಯಗೊಂಡಿದೆ ಕೂಡಲೆ ನಿಮ್ಮ ಅಧಿಕಾರಿಗಳಿಗೆ ಸೂಚಿಸಿ ಎಲೆಕ್ಷನ್ ಮಾಡಿಸಿ ಕಲಾವಿದರು ಒಂದೆಡೆ ಕೂರುವಂತೆ ಮಾಡಿ..ಒಗ್ಗಟ್ಟು ಇರುವ ಮನೆ ಹಾಳಾದ ನಿದರ್ಶನವಿಲ್ಲ.
ಚಿತ್ರರಂಗದ ಸಮಸ್ಯೆ ಅನೇಕ.ನಿಮ್ಮ ಗಮನಕ್ಕಾಗಿ ತಂದಿರುವೆ.

 

ಒಂದು ಕಮಿಟಿ ಮಾಡಿ ಅದರಲ್ಲಿ ಹಿರಿಯ ನಟರು ನಿರ್ಮಾಪಕರು ನಿರ್ದೇಶಕರು ಪತ್ರಕರ್ತರು ಇರುವಂತೆ ರಚಿಸಿ ಈಗಿನ ಚಿತ್ರರಂಗದ ವಾಸ್ತವ ಅರಿತು ಕನ್ನಡ ಚಿತ್ರರಂಗ ಉಳಿಯುವಂತೆ ಬೆಳೆಯುವಂತೆ ಒಗ್ಗಟ್ಟಿನಿಂದ ಒಟ್ಟುಗೂಡುವಂತೆ ಚಿಂತನೆಯ ಚಾವಡಿ ರಚನೆಯಾಗಲಿ. ನಿಮಗೆ ದಿನ ಸಿಗುವ ಕೆಲವರು ಮಾತ್ರ ಚಿತ್ರರಂಗವಲ್ಲಾ ಅನೇಕರಿದ್ದಾರೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಆದರೆ ಆ ಟ್ವೀಟ್ ನೋಡಿದಾಗ ಪ್ರತಿಯೊಂದು ಪದದಲ್ಲೂ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ ಎಂಬುದು ಎದ್ದು ಕಾಣಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *