ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೂ ಟಫ್ ಕಾಂಪಿಟೇಷನ್ ಇದೆ. ಹೀಗಾಗಿ ಈ ಬಾರಿಯ ಗೆಲುವಿಗಾಗಿ ಬಿಜೆಪಿ ಹೈಕಮಾಂಡ್ ಅಳೆದು ತೂಕಿ ಟಿಕೆಟ್ ನೀಡುವತ್ತ ಚಿತ್ತ ಹರಿಸಿದೆ. ಗೆಲ್ಲುವ ಕುದುರೆಗಳಿಗಷ್ಟೇ ಮಣೆ ಹಾಕಲು ಹೊರಟಿದ್ದಾರೆ. ಹಳಬರಿಗೆ ಟಿಕೆಟ್ ನಿರಾಕರಿಸಲು ಹೊರಟಿದ್ದಾರೆ.
ಆದ್ರೆ ಹೈಕಮಾಂಡ್ ನ ಈ ನಿರ್ಧಾರ ಕೆಲ ಹಿರಿಯ ನಾಯಕರಿಗೆ ಬೇಸರ ತರಿಸಿದೆ. ಈಗಾಗಲೇ ಕೆಎಸ್ ಈಶ್ವರಪ್ಪ ಅವರು ರಾಜೀನಾಮೆ ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೈಕಮಾಂಡ್ ನಿರ್ಧಾರಕ್ಕೆ ಬೇಸರ ಮಾಡಿಕೊಂಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವರಿಷ್ಠರಿಂದ ನನಗೂ ಫೋನ್ ಬಂದಿತ್ತು. ಈ ಬಾರಿ ಬೇರೆಯವರಿಗೆ ಅವಕಾಶ ನೀಡುವಂತೆ ಕೇಳಿದ್ದಾರೆ. ನಾನು ಒಂದು ಪ್ರಶ್ನೆ ಕೇಳಿದ್ದೀನಿ. ಪ್ರತಿ ಸಾರಿ 25 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದೇನೆ. ಸರ್ವೇ ಮಾಡಿದಾಗಲೂ ನನ್ನ ಪರವೇ ಅಭಿಪ್ರಾಯ ಬಂದಿದೆ. ನನ್ನ ರಾಜಕೀಯದಲ್ಲಿ ಕಪ್ಪು ಚುಕ್ಕೆಗಳಿಲ್ಲ, ಭ್ರಷ್ಟಾಚಾರ ಆರೋಪಗಳಿಲ್ಲ. ಹೈಕಮಾಂಡ್ ಮಾತಿನಿಂದ ನನಗೆ ಬೇಸರವಾಗಿದೆ ಎಂದಿದ್ದಾರೆ.