Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಮೊದಲನೇ ಬಾರಿಗೆ ವಿಜೃಂಭಣೆಯಿಂದ ನಡೆದ ಜಗನ್ನಾಥ ರಥಯಾತ್ರೆ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜೂ.23) : ಇಸ್ಕಾನ್ ವತಿಯಿಂದ ಪ್ರಪ್ರಥಮ ಬಾರಿ ಚಿತ್ರದುರ್ಗದಲ್ಲಿ ಶುಕ್ರವಾರ ಜಗನ್ನಾಥ ರಥಯಾತ್ರೆ ವಿಜೃಂಭಣೆಯಿಂದ ನಡೆಯಿತು.

ಒರಿಸ್ಸಾದಲ್ಲಿ ನಡೆಯುವ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆಯ ಮಾದರಿಯಲ್ಲಿಯೇ ಜೆ.ಸಿ.ಆರ್. ಸರ್ಕಲ್‍ನಿಂದ ಹೊರಟ ಜಗನ್ನಾಥ ರಥಯಾತ್ರೆಯಲ್ಲಿ ಭಗವಂತ ಜಗನ್ನಾಥ, ಬಲದೇವ ಹಾಗೂ ಸುಭದ್ರದೇವಿಯ ಮೂರ್ತಿಯಿರಿಸಿ ಬಗೆಬಗೆಯ ಹೂವು ಹಾರಗಳಿಂದ ಅಲಂಕರಿಸಲಾಗಿತ್ತು. ಪುರುಷ ಮಹಿಳೆ ಎನ್ನುವ ತಾರತಮ್ಯವಿಲ್ಲದೆ ಸಾವಿರಾರು ಭಕ್ತರು ನೆರೆದಿದ್ದು, ಕುಣಿದು ಜಗನ್ನಾಥನಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಯಾತ್ರೆಯ ರಥ ಹೊರಡುತ್ತಿದ್ದಂತೆ ಒಂದು ಕಡೆ ಮಹಿಳೆಯರು ಮತ್ತೊಂದು ಕಡೆ ಪುರುಷರು ಹಗ್ಗವನ್ನು ಹಿಡಿದು ರಥಯಾತ್ರೆಯನ್ನು ಎಳೆದುಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದರು.

ಜೆ.ಸಿ.ಆರ್.ವೃತ್ತದಲ್ಲಿ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಲಾಗಿತ್ತು.
ನೆರೆದಿದ್ದ ಭಕ್ತರು ಹರೆ ಕೃಷ್ಣ, ಹರೆ ಕೃಷ್ಣ, ಕೃಷ್ಣ, ಕೃಷ್ಣ ಹರೆ ಹರೆ. ಹರೆ ರಾಮ ಹರೆ ರಾಮ ರಾಮ ರಾಮ ಹರೆ ಹರೆ ಎನ್ನುವ ನಾಮಸ್ಮರಣೆಗೆ ಹೆಜ್ಜೆ ಹಾಕುತ್ತ ರಥಯಾತ್ರೆಯಲ್ಲಿ ಭಾವಪರವಶವಾದರು.
ತಾಳ, ತಂಬೂರಿ, ತಬಲ ಹಾಗೂ ವಿವಿಧ ಬಗೆಯ ವೇಷ ಭೂಷಣಗಳನ್ನು ಧರಿಸಿದ್ದ ಪುಟಾಣಿ ಮಕ್ಕಳು ರಥಯಾತ್ರೆಯಲ್ಲಿ ಎಲ್ಲರ ಗಮನ ಸೆಳೆದರು.

ಜೆ.ಸಿ.ಆರ್.ಸರ್ಕಲ್‍ನಿಂದ ಹೊರಟ ಜಗನ್ನಾಥ ರಥಯಾತ್ರೆ, ಡಿ.ಸಿ.ಸರ್ಕಲ್, ಮದಕರಿವೃತ್ತ, ರಂಗಯ್ಯನಬಾಗಿಲು, ಉಚ್ಚಂಗಿಯಲ್ಲಮ್ಮ ದೇವಸ್ಥಾನ, ಗಾಂಧಿ ಸರ್ಕಲ್, ಎಸ್.ಬಿ.ಎಂ.ಸರ್ಕಲ್ ಮೂಲಕ ಕಾಟಮ್ಮ ವೀರನಾಗಪ್ಪ ಕಲ್ಯಾಣ ಮಂಟಪ ತಲುಪಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!