ಯಾದಗಿರಿ: ಕೆಲವೊಂದು ಸಲ ಈ ಪ್ರೀತಿ ಪ್ರೇಮ ಅನ್ನೋದು ಪ್ರಾಣಕ್ಕೆ ಕಂಟಕವಾಗಿರುವ ಸಾಕಷ್ಟು ಉದಾಹರಣೆಗಳನ್ನು ನೋಡಿದ್ದೇವೆ. ಈಗ ಯಾದಗಿರಿಯಲ್ಲೂ ನಡೆದ ಮರ್ಡರ್ ಮಿಸ್ಟ್ರಿಗೆ ಇದೆ ಪ್ರೀತಿ ಪ್ರೇಮ ಕಾರಣವಾಗಿದೆ.
ಇತ್ತಿಚೆಗೆ ಯಾದಗಿರಿ ಜನರನ್ನು ಬೆಚ್ಚಿ ಬೀಳಿಸುವಂತ ಕೊಲೆಯೊಂದು ನಡೆದಿತ್ತು. ಅದು ಟಿಕ್ ಟಾಕ್ ಸ್ಟಾರ್ ಅಂತಿಮಾ ವರ್ಮಾ. ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಶುರು ಮಾಡಿದಾಗ ಭಯಾನಕ ವಿಚಾರವೊಂದು ಹೊರ ಬಿದ್ದಿದೆ. ಕೊಲೆಗಡುಕ ಮಾರುತಿ ರಾಠೋಡ್ ತಗಲಾಕಿಕೊಂಡಿದ್ದಾರೆ.
ಮಾರುತಿ ರಾಥೋಡ್ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಅಂತಿಮಾ ವರ್ಮಾ ಪರಿಚಯವಾಗಿ, ಇಬ್ಬರು ಎರಡು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಅಂತಿಮಾ, ರೀಲ್ಸ್ ಮಾಡುತ್ತಾ ಇದ್ದಳು. ರೀಲ್ಸ್ ನಲ್ಲಿ ಬೇರೆ ಹುಡಿಗನ ಜೊತೆಗೆ ಕಾಣಿಸಿಕೊಂಡಿದ್ದಕ್ಕೆ ಮಾರುತಿ ಸಿಟ್ಟಾಗಿದ್ದ. ಮದುವೆಯಾಗಲು ಕೇಳಿದಾಗಲೂ, ನಿರಾಕರಣೆ ಮಾಡಿದ್ದಳು. ಹೀಗಾಗಿ ತನ್ನೂರು ಯಾದಗಿರಿಯ, ಪಂಚಶೀಲ ನಗರ ತಾಂಡಾದ ತನ್ನ ದೊಡ್ಡಪ್ಪನ ಮನೆಗೆ ಕರೆ ತಂದಿದ್ದ. ಜಮೀನಿನಲ್ಲೇ ಕೊಲೆ ಮಾಡಿ, ಅಲ್ಲಿಯೇ ಸುಟ್ಟು ಹಾಕಿದ್ದಾನೆ. ಈ ಕೊಲೆ ಪ್ರಕರಣವನ್ನು ಗುರುಕಲ್ ಮಠ ಪೊಲೀಸೆಉ ಬೇಧಿಸಿದ್ದು, ವಿಡಿಯೋವೊಂದರಲ್ಲಿ ಮಾರುತಿ ಆಡಿದ ನಾಟಕದಿಂದ ಸತ್ಯ ಬಯಲಾಗಿದೆ.





GIPHY App Key not set. Please check settings