2023ಕ್ಕೆ ನಮ್ಮ ಮನೆ ಬಾಗಿಲಿಗೆ ಬರಲೇಬೇಕು : ಸಮ್ಮಿಶ್ರ ಸರ್ಕಾರದ ಸುಳಿವು ಕೊಟ್ಟರಾ ಕುಮಾರಸ್ವಾಮಿ..?

suddionenews
1 Min Read

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಬಾರಿ ಮಾಡಿಕೊಂಡಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಒಂದಷ್ಟು ಶಾಸಕರು ಆಪರೇಷನ್ ಎಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಗೊತ್ತೇ ಇದೆ. ಆದರೆ ಅದು ಹಲಕೆಯ ವಿಚಾರವಾಗಿದೆ. ಈಗ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರುಗೆ ಸವಾಲು ಹಾಕಿ, ಮುಂದೆಯೂ ಸಮ್ಮಿಶ್ರ ಸರ್ಕಾರ ಬರಲಿದೆ ಎಂದಬ ಸುಳಿವು ನೀಡಿದ್ದಾರೆ.

ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹಾಗೂ ಕಂದಾಯ ಸಚಿವ ಆರ್ ಅಶೋಕ್ ವಿರುದ್ಧ ಏನವಚನದಲ್ಲಿಯೇ ರೈಸ್ ಆಗಿರುವ ಕುಮಾರಸ್ವಾಮಿ, ಅವಬ್ಯಾರೋ ಜೋಳಿಗೆ ಹಿಡಿದುಕಿಂಡು ಓಡಾಡೋನು ಏನೋ ಹೇಳಿದ್ದಾನೆ‌. ಕರ್ನಾಟಕಕ್ಕೂ ನಿನಗೂ ಏನು ಸಂಬಂಧ..? ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು..? ಮಿಸ್ಟರ್ ಸಂತೋಷ್ ಕರ್ನಾಟಕದ ಹಣವನ್ನು ಲೂಟಿ ಹೊಡೆದು ಕೊಂಡೊಯ್ದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ನಿಮ್ಮ ಪ್ರಧಾನಿಗೆ ಕೇಳಿ ನಮ್ಮ ಕುಟುಂಬದ ಬಗ್ಗೆ ಏನು ಅಂತ ಹೇಳುತ್ತಾರೆ. ನರೇಂದ್ರ ಮೋದಿಯವರ ಹೆಸರೇಳಿಕೊಂಡು ಹೊಟ್ಟೆಪಾಡು ಮಾಡಿಕೊಂಡು ಇರುವುದು ನೀನು. ನಾವೂ ಗೆಲ್ಲಲಿ ಅಥವಾ ಸೋಲಲಿ ಜನಗಳ ಜೊತೆಗೆ ಹೋರಾಟ‌ ಮಾಡಿಕೊಂಡು ಬಂದಿದ್ದೇವೆ. ಲಘುವಾಗಿ ನಮ್ಮ ಪಕ್ಷದ ಬಗ್ಗೆ ಮಾತನಾಡಬೇಡಿ. 2023ಕ್ಕೆ ಮಿಸ್ಟರ್ ಸಂತೋಷ್, ಮಿಸ್ಟರ್ ಅಶೋಕ್ ಜನತಾದಳದ ಹತ್ತಿರಕ್ಕೆ ಬರಲೇಬೇಕು, ನಮ್ಮ ಮನೆ ಬಾಗಿಲನ್ನು ಬಡಿಯಲೇಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *