ಹಾವೇರಿ: ಚುನಾವಣೆ ಪ್ರಚಾರ ಜೋರಾಗ್ತಾ ಇದೆ. ಜನರನ್ನು ಸೆಳೆಯುವುದಕ್ಕೆ ಗಿಫ್ಟ್ ಪಾಲಿಟಿಕ್ಸ್ ಪ್ರಯೋಗ ಮಾಡ್ತಾ ಇದ್ದಾರೆ. ಕೆಲ ರಾಜಕಾರಣಿಗಳ ಮನೆಯಲ್ಲೆಲ್ಲಾ ಗಿಫ್ಟ್ ಗಳೇ ತುಂಬಿ ಹೋಗಿದೆ. ಇದೀಗ ವಿಧಾನಪರಿಷತ್ ಸದಸ್ಯ ಆರ್ ಶಂಕರ್ ಮನೆಯಲ್ಲೂ ಗಿಫ್ಟ್ ಗಳು ಪತ್ತೆಯಾಗಿದ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 30-40ಲಕ್ಷ ಮೌಲ್ಯದ ಉಡುಗೊರೆಯಾಗಿದೆ.
ರಾಣೆಬೆನ್ನೂರು ಪಟ್ಟಣದ ಬೀರೇಶ್ವರ ನಗರದಲ್ಲಿರುವ ಆರ್ ಶಂಕರ್ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸೀರೆ ಬಾಕ್ಸ್, ತಟ್ಟೆ ಲೋಡ, ಬ್ಯಾಗ್ ಗಳು ಪತ್ತೆಯಾಗಿದೆ. ಈ ಎಲ್ಲಾ ಗಿಫ್ಟ್ ಗಳ ಮೇಲೆ ಆರ್ ಶಂಕರ್ ಅವರ ಭಾವಚಿತ್ರವನ್ನು ಮುದ್ರಿಸಲಾಗಿದೆ. ಎಲ್ ಕೆಜಿ ಯಿಂದ ಹಿಡಿದು ಡಿಗ್ರಿ ವಿದ್ಯಾರ್ಥಿಗಳ ತನಕ ನೀಡುವ ಬ್ಯಾಗ್ ಗಳು ಪತ್ತೆಯಾಗಿದೆ.
ಐಟಿ ಅಧಿಕಾರಿಗಳು 6 ಸಾವಿರ ಸೀರೆಗಳು, 9 ಸಾವಿರ ಬ್ಯಾಗ್ ಗಳು ಸೇರಿದಂತೆ 30-40 ಲಕ್ಷ ಬೆಲೆಬಾಳುವ ಗೃಹಪಯೋಗಿ ವಸ್ತುಗಲಕನ್ನು ವಶಕ್ಕೆ ಪಡೆದಿದ್ದಾರೆ. ಇದೆಲ್ಲದರ ಬಿಲ್, ಸ್ಟಾಕ್ ಚೆಕ್ ಮಾಡಿದ್ದಾರೆ.





GIPHY App Key not set. Please check settings