ಕಾವೇರಿಗಾಗಿ ಇಂದು ಕರ್ನಾಟಕ ಬಂದ್ ಮಾಡಿ ರೈತರು, ಕನ್ನಡಪರ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದಾರೆ. ಈ ಮಧ್ಯೆ ತಮಿಳುನಾಡಿಗೆ ಪ್ರತಿದಿನವೂ ಕಾವೇರಿ ನೀರು ಹರಿಯುತ್ತಲೇ ಇದೆ. ಹೋರಾಟದ ನಡುವೆ ತಮಿಳು ನಟ ಸಿದ್ದಾರ್ಥ್ ಅವರಿಗೆ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಾಕಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕಾಶ್ ರಾಜ್ ಕ್ಷಮೆಯಾಚಿಸಿದ್ದಾರೆ.
#ಕಾವೇರಿನಮ್ಮದು .. ಹೌದು .. ನಮ್ಮದೇ.. ಆದರೆ .. ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು .. ನಾಯಕರನ್ನು ಪ್ರಶ್ನಿಸದೆ.. ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ.. ಹೀಗೆ ಅಸಹಾಯಕ ಜನಸಾಮಾನ್ಯರನ್ನು.. ಕಲಾವಿದರನ್ನು ಹಿಂಸಿಸುವುದು ತಪ್ಪು ..ಒಬ್ಬ ಕನ್ನಡಿಗನಾಗಿ… https://t.co/O2E2EW6Pd0
— Prakash Raj (@prakashraaj) September 28, 2023
ತಮ್ಮ ತಮಿಳಿನ ಸಿನಿಮಾದ ಪ್ರಚಾರಕ್ಕಾಗಿ ಸಿದ್ಧಾರ್ಥ್ ಬೆಂಗಳೂರಿಗೆ ಬಂದಿದ್ದರು. ಅದರ ಪ್ರೆಸ್ ಮೀಟ್ ಮಾಡುವಾಗಲೇ, ಕನ್ನಡಪರ ಸಂಘಟನೆಗಳು ಬಂದು, ಪ್ರೆಸ್ ಮೀಟ್ ತಡೆದರು. ಸಿದ್ಧಾರ್ಥ್ ಏನು ಹೇಳುವುದಕ್ಕೂ ಬಿಡಲಿಲ್ಲ. ಕಡೆಗೆ ಸಿದ್ಧಾರ್ಥ್ ಕೈ ಮುಗಿದು ಅಲ್ಲಿಂದ ಹೊರ ನಡೆದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೆಲ್ಲಾ ವೈರಲ್ ಆಗಿತ್ತು. ಇದೀಗ ಈ ವಿಡಿಯೋ ಶೇರ್ ಮಾಡಿರುವ ಪ್ರಕಾಶ್ ರಾಜ್, ಸಿದ್ದಾರ್ಥ್ ಗೆ ಕ್ಷಮೆ ಕೇಳಿದ್ದಾರೆ.
‘ಕಾವೇರಿನಮ್ಮದು .. ಹೌದು .. ನಮ್ಮದೇ.. ಆದರೆ .. ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು .. ನಾಯಕರನ್ನು ಪ್ರಶ್ನಿಸದೆ.. ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ.. ಹೀಗೆ ಅಸಹಾಯಕ ಜನಸಾಮಾನ್ಯರನ್ನು.. ಕಲಾವಿದರನ್ನು ಹಿಂಸಿಸುವುದು ತಪ್ಪು ..ಒಬ್ಬ ಕನ್ನಡಿಗನಾಗಿ ಸಹೃದಯ ಕನ್ನಡಿಗರ ಪರವಾಗಿ ಕ್ಷಮಿಸಿ’ ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಕಾವೇರಿಗಾಗಿ ಸ್ಯಾಂಡಲ್ ವುಡ್ ಕೂಡ ಕೈಜೋಡಿಸಿದೆ. ಶಿವಣ್ಣ ನೇತೃತ್ವದಲ್ಲಿ ಪ್ರತಿಭಟನೆಗೆ ಸಾಥ್ ನೀಡಲಿದ್ದಾರೆ. ಕರ್ನಾಟಕ ಫಿಲ್ಮ್ ಚೇಂಬರ್ ನಿಂದ ಪ್ರತಿಭಟನೆಯನ್ನು ಶುರು ಮಾಡಲಿದ್ದಾರೆ. ಈಗಾಗಲೇ ಎಲ್ಲಾ ಬಿಗ್ ಸ್ಟಾರ್ ಗಳು ಸೋಷಿಯಲ್ ಮೀಡಿಯಾ ಮೂಲಕ ಕಾವೇರಿಗಾಗಿ ತಮ್ಮ ಬೆಂಬಲ ಸೂಚಿಸಿದ್ದಾರೆ.