ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.15 : ದೇವಾಲಯಗಳ ಪ್ರವೇಶಕ್ಕಾಗಿ ಚಳುವಳಿ, ಹೋರಾಟ ಮಾಡುವುದನ್ನು ನಿಲ್ಲಿಸಿ ಶಿಕ್ಷಣವಂತರಾಗಿ ಎಂದು ದಲಿತರು, ಅಸ್ಪೃಶ್ಯರಿಗೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು ಎಂದು ಚಳ್ಳೆಕೆರೆಯ ಶ್ರೀಮತಿ ಕೋಟೆ ಬೋರಮ್ಮ ಪ್ರಥಮ ದರ್ಜೆ ಕಾಲೇಜು ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಸಂಜೀವಕುಮಾರ್ ಪೋತೆ ತಿಳಿಸಿದರು.
ಜೈಭೀಮ್ ಕಾರ್ಯಕಾರಿ ಸಮಿತಿ, ನವಯಾನ ಬುದ್ದ ಧಮ್ಮ ಪಥ ವತಿಯಿಂದ ಸ್ಟೇಡಿಯಂ ರಸ್ತೆಯಲ್ಲಿರುವ ಬುದ್ದನ ಪ್ರತಿಮೆ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಬುದ್ದ ಧಮಕ್ಕೆ ಸೇರ್ಪಡೆಗೊಂಡ ದಿನದ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅಸ್ಪೃಶ್ಯತೆ, ಅಸಮಾನತೆ, ಜಾತಿ ಪದ್ದತಿ ನಿವಾರಣೆಯಾಗಬೇಕೆಂದು ಬುದ್ದ, ಅಂಬೇಡ್ಕರ್ ಬಯಸಿದ್ದರು, ಏಸುಕ್ರಿಸ್ತ, ಮಹಮದ್ ಪೈಗಂಬರ್, ಗುರುನಾನಕ್ ಇವರುಗಳು ಕೂಡ ಸಮಾನತೆಯ ಸಂದೇಶ ಸಾರಿದ ಮಹಾತ್ಮರು ಎನ್ನುವುದನ್ನು ಮರೆಯಬಾರದು. ಸರ್ಕಾರದಿಂದ ಸಿಗುವ ಸೌಲಭ್ಯಕ್ಕಾಗಿ ಅಸ್ಪೃಶ್ಯರಾಗುವುದು ತಪ್ಪು, ಆದರೆ ಹುಟ್ಟಿನಿಂದಲೆ ದಲಿತರಾಗಿರುವವರನ್ನು ಜಾತಿ ಸಂಕೋಲೆಯಿಂದ ವಿಮೋಚನೆಗೊಳಿಸುವುದಕ್ಕಾಗಿ ಹೋರಾಡಿದರು. ಬುದ್ದ ಧಮ್ಮ ಪ್ರಜ್ಞೆ, ಸಮಾನತೆ, ಸಹೋದರತ್ವವನ್ನು ಕಲಿಸುತ್ತದೆ. ಬುದ್ದನಲ್ಲಿ ಪಂಚಶೀಲ ತತ್ವ, ಅಷ್ಟಾಂಗ ಮಾರ್ಗಗಳಿದ್ದವು. ಅಭಿವ್ಯಕ್ತಿ ಸ್ವಾತಂತ್ರ್ಯ, ವೈಯಕ್ತಿಕ ಸ್ವಾತಂತ್ರದ ಮಹತ್ವವನ್ನು ಬುದ್ದ ಎತ್ತಿ ತೋರಿಸಿದ್ದರು.
ಬುದ್ದ ಎಂದರೆ ಜ್ಞಾನದ ಆಧಾರ. ಅವಲೋಕನೆ, ಚಿಂತನೆ, ಪುನರ್ ಪರಿಶೀಲನೆಗೆ ಒಳಪಡುತ್ತಿದ್ದರು. ಬುದ್ದ ತನ್ನ ವಿರೋಧಿಗಳಿಗೂ ಹಿಂಸೆಯನ್ನು ಬಯಸಲಿಲ್ಲ. ಅಸ್ಪøಶ್ಯತೆಯನ್ನು ತೊಡೆದು ಹಾಕುವ ಶಕ್ತಿ ಬುದ್ದ ಆಲೋಚನೆಗಳಿಲ್ಲದೆ ಎನ್ನುವುದನ್ನು ಅರ್ಥಮಾಡಿಕೊಂಡಿದ್ದ ಕಾರಣಕ್ಕಾಗಿಯೇ ಡಾ.ಬಿ.ಆರ್.ಅಂಬೇಡ್ಕರ್ ಅ.14 1956 ರಂದು ಹಿಂದೂ ಧರ್ಮವನ್ನು ತೊರೆದು ಭೌದ್ದ ಧರ್ಮಕ್ಕೆ ಸೇರ್ಪಡೆಯಾದರು ಎಂದು ಹೇಳಿದರು.
ಶಿಕ್ಷಕ ಕಸವನಹಳ್ಳಿ ಶಿವಣ್ಣ ಮಾತನಾಡಿ ಅಸ್ಪøಶ್ಯತೆಯನ್ನು ಆಚರಿಸುವ ವೈದ್ದಿಕ ಹಿಂದೂ ಧರ್ಮದಲ್ಲಿ ಯಾರು ಇರಬಾರದೆನ್ನುವ ಕಾರಣಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಬೌದ್ದ ಧರ್ಮಕ್ಕೆ ಹೋದರು. ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ. ಆದರೆ ಹಿಂದೂ ಧರ್ಮದಲ್ಲಿ ಸಾಯುವುದಿಲ್ಲ ಎನ್ನುವ ತೀರ್ಮಾನ ತೆಗೆದುಕೊಂಡು ಬುದ್ದ ತತ್ವವನ್ನು ಮೆಚ್ಚಿ ಮಹಾರಾಷ್ಟ್ರದ ನಾಗಪುರದಲ್ಲಿ ಲಕ್ಷಾಂತರ ಅಭಿಮಾನಿಗಳೊಂದಿಗೆ ಬುದ್ದ ಧರ್ಮಕ್ಕೆ ಸೇರ್ಪಡೆಯಾದರು. ಪೂರ್ವಜರು ಬುದ್ದ ಧರ್ಮವನ್ನು ಅನುಸರಿಸುತ್ತಿದ್ದರು. ಬುದ್ದ ಧರ್ಮ ಭಾರತೀಯರ ಮೂಲ ಧರ್ಮ. ಅಂಬೇಡ್ಕರ್ ಹೇಳಿದಂತೆ ಮೊದಲು ದಲಿತರು, ಅಸ್ಪøಶ್ಯರು ವಿದ್ಯಾವಂತರಾಗಬೇಕಿದೆ ಎಂದು ಮನವಿ ಮಾಡಿದರು.
ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯರಾದ ಬಿ.ಟಿ.ತಿಪ್ಪೇಸ್ವಾಮಿ ಮಾತನಾಡಿ ಬುದ್ದನ ತತ್ವ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗದಲ್ಲಿ ದಲಿತರು, ಅಸ್ಪøಶ್ಯರು ಸಾಗಬೇಕಿದೆ ಎಂದು ಕರೆ ನೀಡಿದರು.
ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಎಸ್.ನಾಗರಾಜ್ ಮಾತನಾಡುತ್ತ ದೇಶಕ್ಕೆ ಭದ್ರವಾದ ಸಂವಿಧಾನ ಇರದಿದ್ದರೆ ದಲಿತರ ಸ್ಥಿತಿ ಇನ್ನು ಕಷ್ಟವಾಗಿರುತ್ತಿತ್ತು. ಶಿಕ್ಷಣ, ಸಂಘಟನೆ, ಹೋರಾಟದಿಂದ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎನ್ನುವುದನ್ನು ಮನಗಂಡಿದ್ದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವನ್ನು ಬರೆಯುವಾಗ ಸಾಕಷ್ಟು ಸಮಸ್ಯೆ ಸವಾಲುಗಳನ್ನು ಎದುರಿಸಿದರು. ಹಾಗಾಗಿ ಎಲ್ಲರೂ ಅಂಬೇಡ್ಕರ್, ಬುದ್ದನ ಮಾರ್ಗ ಅನುಸರಿಸೋಣ ಎಂದರು.
ಲೇಖಕ ಹೆಚ್.ಆನಂದ್‍ಕುಮಾರ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗಷ್ಠೆ ಸಂವಿಧಾನವನ್ನು ನೀಡಿಲ್ಲ. ಎಲ್ಲಾ ಜಾತಿ ಧರ್ಮದವರಿಗೂ ಸಮಾತನೆಯನ್ನು ಕೊಟ್ಟಂತ ಪುಣ್ಯ ಪುರುಷ. ಆದ್ದರಿಂದ ಅವರೊಬ್ಬ ಜಾತಿಯನ್ನು ಮೀರಿದ ಮಹಾನ್ ನಾಯಕ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ಅಸಮಾನತೆ ಇನ್ನು ಜೀವಂತವಾಗಿದೆ ಎಂದು ವಿಷಾಧಿಸಿದರು.
ನಗರಸಭೆ ಮಾಜಿ ಸದಸ್ಯೆ ಶಾಂತಕುಮಾರಿ, ವಾಣಿಶ್ರೀ ಇವರುಗಳು ಮಾತನಾಡಿದರು.
ತಮ್ಮಣ್ಣ, ಮುರುಗನ್, ಯಲ್ಲಪ್ಪ, ಮಲ್ಲೇಶಣ್ಣ, ಶ್ರೀನಿವಾಸ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.