Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕುಮಾರ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹೋಗಿದ್ದು ನಿಜ : ಸೂರಪ್ಪ ಬಾಬು ಹೇಳಿದ್ದೇನು..?

Facebook
Twitter
Telegram
WhatsApp

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಕಳೆದ ಕೆಲ ದಿನಗಳಿಂದ ಸುದೀಪ್ ಹಾಗೂ ಕುಮಾರ್ ಗಲಾಟೆಯ ಸದ್ದು ಕಡಿಮೆಯಾಗುವಂತೆ ಕಾಣುತ್ತಿಲ್ಲ. ರವಿಚಂದ್ರನ್, ಶಿವಣ್ಣ ಇದರ ಬಗ್ಗೆ ಚರ್ಚೆ ನಡೆಸಿದರೂ ಸಮಸ್ಯೆಗೆ ಇನ್ನು ಪರಿಹಾರ ಸಿಕ್ಕಂತೆ ಕಾಣುತ್ತಿಲ್ಲ. ಇದರ ಹಿಂದೆ ಸೂರಪ್ಪ ಬಾಬು ಇದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಇದೀಗ ಸೂರಪ್ಪ ಬಾಬು ಈ ಬಗ್ಗೆ ಮಾತನಾಡಿದ್ದಾರೆ.

ಕೆಸಿಎನ್ ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಳ್ಳೋಕೆ ಹೋಗಿದ್ದು ನಿಜ. ಅವರನ್ನ ನಾನು ತಡೆದಿದ್ದೆ. ಅವರು ನನ್ನ ಸ್ನೇಹಿತರು. ಆದ್ರೆ ನಾನು ಸಪೋರ್ಟ್ ಮಾಡಿದೆ ಅಂತ ಹೇಳಿದ್ದಾರೆ. ವಾಣಿಜ್ಯ ಮಂಡಳಿ ಯಾರಪ್ಪದು..? ನಾನು ಮೆಂಬರ್ ಅದಕ್ಕೆ. ಕಾರ್ಯಕಾರಿ ಸಮಿತಿ ಸದಸ್ಯ ಆಗಿದ್ದೆ.

ಇದೇ ವೇಳೆ ಚಂದ್ರಚೂಡ್ ಗೆ ಸೂರಪ್ಪ ಬಾಬು ವಾರ್ನಿಂಗ್ ನೀಡಿದ್ದು, ಯಾವಾಗ ನನ್ನ ಹೆಂಡ್ತಿ ಮಕ್ಕಳ ವಿಷ್ಯಕ್ಕೆ ಬಂದ್ರಿ ಕೋಪ ನೆತ್ತಿಗೆ ಏರಿತು. ಅದಕ್ಕೆ ಈಗ ಉತ್ತರಿಸುವ ಸಮಯ ಬಂದಿದೆ. ನನ್ನ ಸಿನಿಮಾದಲ್ಲಿ ನಟಿಸಿರುವುದು ಎಲ್ಲಾ ದೊಡ್ಡ ದೊಡ್ಡ ಹೀರೋಗಳೇ. ಸುದೀಪ್ ಸರ್ ನನ್ನ ಬಗ್ಗೆ ಎಲ್ಲೂ ಕಂಪ್ಲೇಂಟ್ ಮಾಡಿಲ್ಲ. ಇವತ್ತು 3 ಸಿನಿಮಾಗಳನ್ನ ದೊಡ್ಡ ಸ್ಟಾರ್ ಗಳ ಜೊತೆ ಮಾಡ್ತಿದೀನಿ.

ಕುಮಾರ್ ಏನೋ ಮಾತಾಡಿದ್ದಕ್ಕೆ ನಾನ್ ಜವಾಬ್ದಾರಿನಾ..?. ಆತನಿಗೆ ನ್ಯಾಯ ಕೊಡಿಸೋಕೆ ನಾಲ್ಕು ಜನ್ರ ಹತ್ರ ಹೋಗಿದ್ದೆ. ಸರಿ ಮಾಡಿ ಕೊಡಿ ಅಂತ. ಆದ್ರೆ ಒಳ್ಳೆ ಕೆಲಸ ಮಾಡಿ ಇಲ್ಲಾಂದ್ರೆ ಬಿಡಿ.
ಸಾಲ ಮಾಡಿ ಬಡ್ಡಿ ಕಟ್ಟೋ ಅವಶ್ಯಕತೆ ನನಗಿಲ್ಲ. ನನ್ನ ಮಗಳು ಮೆರಿಟ್ ಮೇಲೆ ಓದ್ತಾಯಿರೋದು. ನಾನು ಮನೆ ಖರೀದಿ ಮಾಡಿರೋದನ್ನ ಮಾರಿದಿನಿ. ಎರಡು ಮೂರು ವರ್ಷಗಳ ಹಿಂದೆ ಮಾತನಾಡಿರೋದನ್ನ ಈಗ ಬಿಟ್ಟಿದ್ದಾರೆ.

ನನ್ನ ಮನೆ ವಿಷಯ ಬಂದಿದ್ದಕೆ ನಾನು ಸುದ್ದಿಗೋಷ್ಠಿ ಮಾಡ್ತಿರೋದು. ನಾನು ದುರಹಂಕಾರಿ ಮನುಷ್ಯ ಅಲ್ಲ. ನನಗೆ 56 ವರ್ಷ. ಯಾವಾಗ ಸಾಯ್ತಿನೋ ಗೊತ್ತಿಲ್ಲ. ಚಂದ್ರಚೂಡ್ ಅವರೇ ಮನೆ ಒಡೆಯೋ ಕೆಲಸ ಮಾಡಬೇಡಿ. ನಂಬಿಕೆ ಇಲ್ಲ ಅಂದ್ರೆ ಅಗ್ರಿಮೆಂಟ್ ಮಾಡ್ಕೊಳಿ. ಚಂದ್ರಚೂಡ್ ಎದುರು ಬಂದ್ರು ಅವನ ಜೊತೆ ನಾನು ಮಾತಾಡಲ್ಲ. ನನ್ನ ಒಬ್ಬನ ಬಗ್ಗೆ ತೇಜೋವದೆ ಮಾಡಿಲ್ಲ ಅವರು. ಆತ ನನಗೆ ಸಂಬಂಧ ಇಲ್ಲದೆ ಇರೋ ವ್ಯಕ್ತಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಏನೇ ಪ್ರಯತ್ನಿಸಿದರೂ ಬರೀ ಧನ ಹಾನಿ ಏಕೆ?

ಈ ರಾಶಿಯವರು ಏನೇ ಪ್ರಯತ್ನಿಸಿದರೂ ಬರೀ ಧನ ಹಾನಿ ಏಕೆ? ಈ ರಾಶಿಯವರಿಗೆ ಉತ್ತರ ದಿಕ್ಕಿನಿಂದ ಕಂಕಣ ಬಲ ಕೂಡಿ ಬರಲಿದೆ : ಶುಕ್ರವಾರ-ಡಿಸೆಂಬರ್-6,2024 ವಿವಾಹ ಪಂಚಮಿ ಸೂರ್ಯೋದಯ: 06:37, ಸೂರ್ಯಾಸ್: 05:37 ಶಾಲಿವಾಹನ

ಐವರು ಬಾಣಂತಿಯರ ಸಾವಿನ ಬೆನ್ನಲ್ಲೇ ಬ್ರಿಮ್ಸ್ ನಲ್ಲಿ ಶಿಶು ಸಾವು..!

ಬಳ್ಳಾರಿ: ಬೀಮ್ಸ್ ನಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಐವರು ಬಾಣಂತಿಯರು ಸಾವನ್ನಪ್ಪಿದ ಪ್ರಕರಣ ಮಾಸುವ ಮುನ್ನವೇ ಇದೀಗ ಶಿಶು ಒಂದು ಸಾವನ್ನಪ್ಪಿದೆ. ಬೀಮ್ಸ್ ಗೆ ನಾರ್ಮಲ್ ಡೆಲಿವರಿಗೆಂದು ಗರ್ಭಿಣಿ ಅಡ್ಮಿಟ್ ಆಗಿದ್ದರು. ಆದರೆ ಇದ್ದಕ್ಕಿದ್ದ ಹಾಗೇ

ಚಿತ್ರದುರ್ಗ ನಗರಸಭೆಯ ಗೋಪಾಲಕೃಷ್ಣ ಇನ್ನಿಲ್ಲ…!

  ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 05 : ನಗರಸಭೆ ನೌಕರ ಹಾಗೂ ಪೌರ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಗೋಪಾಲಕೃಷ್ಣ (55) ಗುರುವಾರ ನಿಧನರಾದರು. ಹೃದಯಸಂಬಂಧಿ ರೋಗದಿಂದ ಇತ್ತೀಚೆಗೆ ಚೇತರಿಸಿಕೊಂಡಿದ್ದ ಅವರು, ಬುಧವಾರ ರಾತ್ರಿ

error: Content is protected !!