ಚಿತ್ರದುರ್ಗ, (ಮಾ.24) : ಕಳೆದು ಹೋಗುತ್ತಿರುವ ನಮ್ಮ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಯವರಿಗೆ ಪರಿಚಯಿಸುವ ಜವಾಬ್ದಾರಿ ಯುವಜನತೆಯದ್ದಾಗಿದೆ ಎಂದು ಪ್ರಾಂಶುಪಾಲರಾದ ಡಾ.ಭರತ್ ಪಿ ಬಿ ಹೇಳಿದರು.
ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ-2023 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಸ್ಫೂರ್ತಿ-2023ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅದೇ ಉತ್ಸಾಹವನ್ನು ತೋರಿಸುತ್ತಿರುವುದು ಸಂತಸದ ವಿಚಾರ.
ಆಧುನಿಕ, ಪಾಶ್ಚಾತ್ಯ ಸಂಸ್ಕøತಿಗೆ ಮಾರು ಹೋಗದೆ ನಮ್ಮ ನುಡಿ, ನೆಲ, ಜಲ, ಸಂಸ್ಕøತಿಯನ್ನು ಇತರರಿಗೆ ಪರಿಚಯಿಸಬೇಕು. ಈ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳ ಈ ಪ್ರಯತ್ನ ಶ್ಲಾಘನೀಯ ಎಂದು ನುಡಿದರು.
ಈ ಸಂದರ್ಭದಲ್ಲಿ ಸ್ಫೂರ್ತಿ-2023 ಮುಖ್ಯಸಂಚಾಲಕರಾದ ಡಾ. ಶ್ರೀಶೈಲ ಜೆ ಎಂ, ವಿವಿಧ ಇಲಾಖಾ ಮುಖ್ಯಸ್ಥರುಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ಫೂರ್ತಿ-2023ರ ಅಂಗವಾಗಿ ಸಾಂಪ್ರದಾಯಿಕ ದಿನಾಚರಣೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿವಿದ ರೀತಿಯ ದೇಸೀಯ ವೇಷಭೂಷಣ, ಉಡುಗೆತೊಡುಗೆ ಧರಿಸಿ ಸಂಭ್ರಮಿಸಿದರು.
ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಗಳಾದ ಪಂಚೆ, ಶಲ್ಯ, ಪೇಟ, ಜುಬ್ಬಾ, ಪೈಜಾಮು ಧರಿಸಿ ಗಮನ ಸೆಳೆದರೆ, ರೇಷ್ಮೆ ಸೀರೆ, ಮೊಗ್ಗಿನ ಜಡೆ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಭಾರತೀಯ ಸಂಸ್ಕøತಿಯನ್ನು ಬಿಂಬಿಸುವ ನಾರಿಯರಂತೆ ಕಾಲೇಜಿನ ಆವರಣದಲ್ಲಿ ಸಂಭ್ರಮದಿಂದ ಕುಣಿದು ಕುಪ್ಪಳಸಿ ಕ್ಯಾಂಪಸ್‍ನಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದರು. ಸಂಗೀತಕ್ಕೆ ಹೆಜ್ಜೆ ಹಾಕಿ ನೃತ್ಯ ಮಾಡಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಹರ್ಷಿತಾ ಪ್ರಾರ್ಥಿಸಿ, ಶ್ವೇತಾ ತಿಗಡಿ, ವಾಸುದೇವ ಎಂ ಎನ್ ನಿರೂಪಿಸಿ ಅಲಿಮಾ ಮಿಸ್ಬಾ ವಂದಿಸಿದರು.