Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕನ್ನಡ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ : ಕೆ.ಪಿ.ಎಂ.ಗಣೇಶಯ್ಯ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ : ಕನ್ನಡದ ಸುಭದ್ರತೆಗೆ ಅಡಿಪಾಯ ಹಾಕಿಕೊಟ್ಟ ಹಿರಿಯರ ಮಾರ್ಗದರ್ಶನ ಭವಿಷ್ಯದ ಪೀಳಿಗೆ ಅನುಸರಿಸಬೇಕು. ಆಚಾರ, ಸಂಸ್ಕೃತಿ ಮತ್ತು ಸಂಪ್ರದಾಯಗಳು ಮನುಷ್ಯನ ಜೀವನೋಪಾಯಕ್ಕೆ ಬುನಾದಿಗಳಾಗಿವೆ. ಕನ್ನಡ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ರಂಗನಿರ್ದೇಶಕ ಹಾಗೂ ಜಿಲ್ಲಾ ಕ.ಸಾ.ಪ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ ಅಭಿಪ್ರಾಯಪಟ್ಟರು.

ವಾಸವಿ ಮಹಲ್ ರಸ್ತೆಯಲ್ಲಿರುವ ಕನ್ಯಕಾ ಮಹಲ್ ಸಭಾಂಗಣದಲ್ಲಿ ಶನಿವಾರ ಆರ್ಯವೈಶ್ಯ ಸಂಘ, ಆರ್ಯವೈಶ್ಯ ಸಾಹಿತ್ಯ ಪರಿಷತ್ತು ಮತ್ತು ವಾಸವಿ ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕನ್ನಡದ ಹಬ್ಬ -2023 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.

ಅಟ, ಪಾಠಗಳೊಂದಿಗೆ ಬದುಕಿನುದ್ದಕ್ಕೂ ಕನ್ನಡ ಭಾಷೆ ಮನೆಮನಗಳಲ್ಲಿ ಬೆಳಗಬೇಕು. ಜೀವನಮೌಲ್ಯಗಳ ಸಿರಿಯಾದ ಕನ್ನಡ ಸಾಹಿತ್ಯವನ್ನು ನಿರಂತರವಾಗಿ ಓದುವ ಮತ್ತು ಬರೆಯುವ ಸಾಮರ್ಥವನ್ನು ಮಕ್ಕಳಲ್ಲಿ ಬೆಳೆಸಬೇಕು. ಆಗ ಮಾತ್ರ ಕನ್ನಡ ಭಾಷೆಯ ಅಗಾಧತೆಯನ್ನು ಪರಿಚಯಿಸಿದಂತಾಗುತ್ತದೆ.

ಎಲ್ಲವನ್ನೂ, ಎಲ್ಲಾ ಕಾಲಕ್ಕೂ ಒಟ್ಟಿಗೆ ತಿಳಿಸುವ ಬದಲು ಹಂತ ಹಂತವಾಗಿ ತಿಳಿಸಿದರೆ ಅದು ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ. ಕನ್ನಡ ವರ್ಣಮಾಲೆಯಲ್ಲಿ ಜೀವದ ಮತ್ತು ಜೀವನದ ಆರೋಗ್ಯ, ಸಂಪತ್ತು, ಸ್ಥೈರ್ಯ ಮತ್ತು ಆಯಸ್ಸು ವೃದ್ಧಿಸುವ ಔಷಧದ ಗುಣಗಳಿವೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ವಾತಾವರಣ ಮೂಡಿಸುವಲ್ಲಿ ಕನ್ನಡ ಭಾಷೆ ಶ್ರೀಮಂತಿಕೆಯಿಂದ ಕೂಡಿದೆ ಎಂದರು.

ಹಚ್ಚೇವು ಕನ್ನಡದ ದೀಪ ನೃತ್ಯದ ಹಿನ್ನೆಲೆಯಲ್ಲಿ ದೀಪ ಪ್ರಜ್ವಲನೆ ಮಾಡಿ ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಎಲ್.ಇ. ಶ್ರೀನಿವಾಸ ಬಾಬುರವರು ಮನೆ ಹಾಗೂ ವ್ಯವಹಾರಿಕ ಜಗತ್ತಿನಲ್ಲಿ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸಲು ಕರೆ ನೀಡಿದರು.  ವ್ಯಾಪಾರಿ ಕ್ಷೇತ್ರದಲ್ಲಿ ಕೆಲವೊಮ್ಮೆ ಇತರ ಭಾಷೆಗಳ ಬಳಕೆ ಅನಿವಾರ್ಯ ಎನಿಸಿದರು ಅದನ್ನೇ ಗೀಳಾಗಿಮಾಡಿಕೊಳ್ಳುವುದು ತರವಲ್ಲವೆಂದು ಹೇಳಿದರು.

ಪ್ರೊ. ಟಿ.ವಿ. ಸುರೇಶಗುಪ್ತರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕೋಟೆ ನಾಡು ಚಿತ್ರದುರ್ಗದ ಪ್ರಧಾನ ಅಸ್ಮಿತೆಗಳಲ್ಲಿ ಒಂದಾದ ಒನಕೆ ಓಬವ್ವ ಜಯಂತಿಯ ಈ ದಿನ ನಾವೆಲ್ಲರೂ ಧೈರ್ಯ, ಸಾಹಸಗಳ ಕಥೆಯನ್ನು ಹೆಮ್ಮೆಯಿಂದ ಸ್ಮರಣೆ ಮಾಡಲು ಕರೆ ನೀಡಿದರು.  ಜೊತೆಗೆ ಸಾಹಸಿ ಓಬವ್ವೆಯ ಗುಣಗಾಥೆಯನ್ನು ಎಲ್ಲರಲ್ಲಿ ಹಂಚಿಕೊಳ್ಳಲು ಕರೆ ನೀಡಿದರು.  ಕನ್ನಡದ ಹಬ್ಬ ನಡೆದು ಬಂದ ದಾರಿಯನ್ನು ಸಾಧ್ಯಂತವಾಗಿ ವಿವರಿಸಿದರು.

ಕನ್ನಡ ಹಬ್ಬದ ನಿಮಿತ್ತ ಅಯೋಜಿಸಲಾಗಿದ್ದ ವಿವಿಧ ಸ್ಫರ್ದೆಗಳಲ್ಲಿ ವಿಜೇತರಾದವರಿಗೆ ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜ್ ಅವರು ಬಹುಮಾನ ವಿತರಣೆ ಮಾಡಿದರು.  ಸಭಾಧ್ಯಕ್ಷತೆ ವಹಿಸಿದ್ದ ಆರ್ಯವೈಶ್ಯ ಸಾಹಿತ್ಯ ಪರಿಷತ್ ಅಧ್ಯಕ್ಷಿಣಿ ಸುಜಾತ ಪ್ರಾಣೇಶ್ ಅವರು ನಾವು ನಡೆಸಿದ ಸ್ಫರ್ಧೆಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಹಿತಿಗಳ ನೆನಪು ಮಾಡಿಕೊಂಡು ಅವರ ದಾರಿಯಲ್ಲಿ ನಾವೆಲ್ಲ ಸಾಗೋಣ ಎಂದು ಆಶಿಸಿ, ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಆರ್ಯವೈಶ್ಯ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜೆ.ಆರ್. ಶಿವಕುಮಾರ್ ವಂದಿಸಿದರು.  ನಾಡ ಗೀತೆಯ ಗಾಯನದೊಂದಿಗೆ ಕಾರ್ಯಕ್ರಮದ ಆರಂಭವು ಶೋಭಾ ಶ್ರೀನಿವಾಸ್ ಅವರಿಂದ ಆಯಿತು.  ವೇದಿಕೆಯಲ್ಲಿ ವಾಸವಿ ಮಹಿಳಾ ಸಂಘದ ಅಧ್ಯಕ್ಷಿಣಿ ಸುಮಾ ಅನಂತ್ ಹಾಗೂ ಕಾರ್ಯದರ್ಶಿ ಲಕ್ಷ್ಮಿ ರಮಾಕಾಂತ್ ಉಪಸ್ಥಿತರಿದ್ದರು, ಪ್ರತಿಭಾ ವಿಶ್ವನಾಥ್ ಮತ್ತು ವರಲಕ್ಷ್ಮಿ ರತ್ನಾಕರ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ವರದಿ :
ಟಿ.ವಿ. ಸುರೇಶಗುಪ್ತ
ಸಾರ್ವಜನಿಕ ಸಂಪರ್ಕಾಧಿಕಾರಿಗಳು
ಆರ್ಯವೈಶ್ಯ ಸಂಘ, ಚಿತ್ರದುರ್ಗ
ಮೊ : 9945461834

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!