ಬೆಂಗಳೂರು: ಹಿಜಾಬ್ ಆಯ್ತು, ಹಲಾಲ್ ಆಯ್ತು, ವ್ಯಾಪಾರ ನಿಷೇಧವಾಯ್ತು ಇದೀಗ ಧ್ವನಿವರ್ಧಕದ ಸದ್ದು ಶುರಯವಾಗಿದೆ. ಈ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಮಾತನಾಡಿದ್ದು, ಸರ್ಕಾರ ಕಡಿವಾಣ ಹಾಕಬೇಕು ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಏನು ತೀರ್ಮಾನ ನೀಡಿದೆ ಅದು ಮಸೀದಿ ಇರಲಿ, ಚರ್ಚ್ ಇರಲಿ ಮಂದಿರ ಇರಲಿ, ಗುರುದ್ವಾರ ಇರಲಿ ಇಷ್ಡು ಇರಬೇಕು ಎಂಬುದು ಆದೇಶವಾಗಿದೆ. ಶಬ್ದ ಮಾಲಿನ್ಯ ಮಂಡಳಿ ಕೂಡ ಬಂದು ಆದೇಶ ಮಾಡಿದೆ. ಆ ಮೂಲಕವೇ ನಡೆಯುತ್ತಾ ಇದೆ. ಅದು ಹೆಚ್ಚಾಗಬಾರದು ಆ ಮೂಲಕವೇ ನಡೆಯುತ್ತಾ ಇದೆ. ಅದು ಹೆಚ್ಚಾಗಲೂ ಬಾರದು. ಸದ್ಯಕ್ಕೆ ಅದರಿಂದ ಯಾರಿಗೂ ತೊಂದರೆಯಾಗುತ್ತಿಲ್ಲ. ರಾಜಕೀಯ ಪ್ರೇರಿತವಾಗಿ ಸ್ಟೇಟ್ಮೆಂಟ್ ಕೊಟ್ಟರೆ ಪ್ರತಿಯೊಂದಕ್ಕೂ ನಾವೂ ಉತ್ತರ ಕೊಡೋದಕ್ಕೆ ಆಗಲ್ಲ.

ಈಗಾಗಲೇ ಯಾರಿಗೂ ತೊಂದರೆಯಾಗದ ರೀತಿ ಮಸೀದಿ, ದೇವಸ್ಥಾನ, ಚರ್ಚ್ ಗಳು ಪಾಲನೆ ಮಾಡುತ್ತಿವೆ. ಅದಕ್ಕೆ ಒಂದು ಸಂಘಟನೆ ಟೀಕೆ ಮಾಡಿದ್ರೆ ಸರ್ಕಾರ ಅದಕ್ಕೆ ಉತ್ತರ ನೀಡಬೇಕು. ಇಂಥದ್ದಕ್ಕೆಲ್ಲಾ ಸರ್ಕಾರ ಅವಕಾಶ ಮಾಡಿಕೊಡಬಾರದು. ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಹಬಾಳ್ವೆ ನೆಲೆಸುವ ರೀತಿ ಮಾಡುವುದರಲ್ಲಿ ಸರ್ಕಾರಕ್ಕೆ ಜವಬ್ದಾರಿ ಇದೆ.
ನಿನ್ನೆ ಮಂಡ್ಯದಲ್ಲಿ ಯುಗಾದಿಯನ್ನ ಸಹಬಾಳ್ವೆಯಿಂದ ಆಚರಿಸಿದ ಉದಾಹರಣೆಯನ್ನು ನೋಡಿದ್ವಿ. ಇದಕ್ಕೆಲ್ಲಾ ಕಡಿವಾಣ ಹಾಕೋದಕ್ಕೆ ಸರ್ಕಾರಕ್ಕೆ ಒತ್ತಾಯ ಹಾಕುತ್ತೇನೆ ಎಂದಿದ್ದಾರೆ.

