Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಮಕಾಲೀನ ವೈರುಧ್ಯಗಳಿಗೆ ಪ್ರತಿಕ್ರಿಯಿಸುವ ಗುಣ ಸೃಜನಶೀಲ ಲೇಖಕನ ಕರ್ತವ್ಯ : ಡಾ.ಮೀರಾಸಾಬಿಹಳ್ಳಿ ಶಿವಲಿಂಗಪ್ಪ ಅಭಿಮತ

Facebook
Twitter
Telegram
WhatsApp

ಚಿತ್ರದುರ್ಗ, (ಮೇ.15) : ಸಮಕಾಲೀನ ವೈರುಧ್ಯಗಳಿಗೆ ಸ್ಪಂದಿಸುವ ಗುಣವನ್ನು ಸೃಜನಶೀಲ ಲೇಖಕರು ರೂಢಿಸಿಕೊಂಡಿರಬೇಕು ಎಂದು ನಿವೃತ್ತ ಪ್ರಾಂಶುಪಾಲ ಹಾಗು ಸಾಹಿತಿ ಡಾ.ಮೀರಾಸಾಬಿಹಳ್ಳಿ ಸಿ.ಶಿವಲಿಂಗಪ್ಪ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಹೇಮರಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಚೈತ್ರದ ಚಿಗುರು’ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕವಿ, ಲೇಖಕನಾದವನು ಸಮಕಾಲೀನ ಸಂಘರ್ಷವನ್ನು ದಾಖಲಿಸುತ್ತಾ ಹೋಗುತ್ತಾನೆ. ಇದಕ್ಕೆ ಧೀಮಂತ ಧೃಷ್ಟಾಂತವೆಂದರೆ ಪಂಪ, ಮನುಷ್ಯ ಜಾತಿ ತಾನೊಂದೆ ವೊಲಂ ಎಂದು ಹೇಳಿರುವುದು ನಮಗೆ ತಿಳಿದ ವಿಷಯ. ಅಂದರೆ ಆಗಲೂ ಭಿನ್ನತೆ, ಅಸಮಾನತೆ, ಸಂಘರ್ಷವಿತ್ತೆನ್ನುವುದು ಗೊತ್ತಾಗುತ್ತದೆ. ಈಗಲೂ ಸೃಜನಶೀಲ ಬರಹಗಾರನಿಗೆ ಸಾಮಾಜಿಕ, ನೈತಿಕ ಜವಾಬ್ದಾರಿ ಇದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಪದ್ಯ ಬರೆಯಬೇಕೆನ್ನುವ ಉದಯೋನ್ಮುಖ ಕವಿಗಳು ಅವರಲ್ಲಿನ ವಿಚಾರ, ಕಲ್ಪನೆ ಹಾಗು ಭಾವನೆಗಳಿಗೆ ಮೂರ್ತ ಸ್ವರೂಪ ನೀಡಿ ಸಂಯೋಜನೆ ಮಾಡುತ್ತಾರೆ. ಶಬ್ದಗಳ ಮೂಲಕ ಕಾವ್ಯಕ್ಕೆ ಒಂದು ಹೊದಿಕೆ ಕೊಡುತ್ತಾರೆ. ಕವಿಯ ಆಲೋಚನೆ ಮತ್ತು ಚಿಂತನೆ ಕಾವ್ಯದ ಆತ್ಮವಾಗಿರುತ್ತದೆ. ಈ ರೀತಿಯ ಅಭಿವ್ಯಕ್ತಿಯ ವಸ್ತು ಹೊಸದಾಗಿರಬೇಕು. ಇದಕ್ಕೆ ಶೂದ್ರತಪಸ್ವಿಯನ್ನು ಉದಾಹರಣೆಯಾಗಿ ನೀಡಿದರು.

ಈಗ ಕವಿತೆ ವಾಚಿಸಿರುವ ಕೆಲವು ಕವಿತೆಗಳನ್ನು ಸೂಕ್ಷ್ಮವಾಗಿ ಇಲ್ಲಿ ಅವಲೋಕಿಸುತ್ತೇನೆ. ಇದನ್ನು ವಿಮರ್ಶೆ ಅಂತ ತಿಳಿಯಬೇಡಿ ಒಬ್ಬ ಹಿರಿಯನ ಸಲಹೆ ಅಂತ ಸ್ವೀಕರಿಸಿ. ಕಾವ್ಯಾಸಕ್ತರ ಮನದಲ್ಲಿ ಒಂದು ಕವಿತೆ ಬಹುಕಾಲ ಮನೆ ಮಾಡಬೇಕಾದರೆ ಕವನಗಳಲ್ಲಿ ಶಬ್ದಾಡಂಭರವಿದ್ದರೆ ಆ ಕವಿತೆ ಬಹುಕಾಲ ಉಳಿಯುವುದಿಲ್ಲ ಎಂದು ಕವಿಗಳಿಗೆ ಸಲಹೆ ನೀಡಿದರು.

ಮಾನವೀಯ ಕಾಳಜಿ ಮತ್ತು ಪ್ರಗತಿ ಪರ ಚಿಂತನೆಯನ್ನು ಸರಳವಾಗಿ ವೈಚಾರಿಕತೆ ಎನ್ನಬಹುದು. ಸಮಾಜದಲ್ಲಿ ಅರಾಜಕತೆ, ಸುತ್ತಮುತ್ತಲಿನ ಸಮಸ್ಯೆಗಳನ್ನು ಗ್ರಹಿಸುವ ಸೂಕ್ಷ್ಮಗ್ರಾಹಿಶಕ್ತಿ ಕವಿಮನಸ್ಸುಗಳಿಗೆ ಇರಬೇಕು. ಇಂತಹ ವೈಚಾರಿಕ ಪ್ರಶ್ನೆಗಳನ್ನು ನಿಮ್ಮಲ್ಲಿ ಹಾಕಿಕೊಳ್ಳದಿದ್ದರೆ ಸೃಜನಶೀಲ ಬರಹಗಾರರಾಗುವುದಕ್ಕೆ ಸಾಧ್ಯವಿಲ್ಲ.
ಹಾಗು ಸಾಹಿತ್ಯಾಸಕ್ತರ ಮನಸ್ಸಿನಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ.

ಪದ್ಯಗಳನ್ನು ರಚಿಸುವ ಸಂದರ್ಭದಲ್ಲಿ ಅರ್ಥ ಮತ್ತು ಭಾವನೆಗಳಿಗೆ ಸಂವಹನವಾಗುವ ರೀತಿಯಲ್ಲಿ ಪದಗಳ ಜೋಡಣೆ ಮಾಡಬೇಕು ಆಗ ಆ ಕಾವ್ಯಕ್ಕೆ ಮಹತ್ವ ಬರುತ್ತದೆ. ಉದಾಹರಣೆಗೆ  ದೇವರು ರುಜು ಮಾಡಿದನು ರಸವಶನಾಗುತ ಕವಿ ಅದ ನೋಡಿದನು ಎಂದು ಕುವೆಂಪು ಕವಿತೆಯ ಸಾಲುಗಳನ್ನು ಉದಾಹರಣೆ ನೀಡಿದರು.

ಬರೀ ಪದಗಳ ಜೋಡಣೆಯ ಚಮತ್ಕಾರವೇ ಪದ್ಯವಾಗುವುದಿಲ್ಲ ಎಂದು ತಿಳಿಸಿದರು. ಹಾಗೆಯೇ ಕವಿಗಳು ವಾಚಿಸಿದ ಕವನ ಸೂಕ್ಷ್ಮತೆಗಳನ್ನು ಒಂದೊಂದಾಗಿ ವಿವರಿಸಿದರು.
ಪದ್ಯ ನೀತಿಬೋಧನೆಯ ಅಂಶವುಳ್ಳವಾಗಿರದೇ ಅನುಭವವನ್ನು ಅನಾವರಣಗೊಳಸುವಂತಹುವುಗಳಾಗಿರಬೇಕು. ಮನಸ್ಸಿನಲ್ಲಿ ಇಬ್ಬನಿಯ ಹಾಗೆ ಸ್ವಲ್ಪ ಕಾಲವಾದರೂ ತೇವದ ಅನುಭವವನ್ನು ಪಂಚೇಂದ್ರಿಯಗಳಿಗೆ ತಟ್ಟುತ್ತದೆಯಲ್ಲ  ಆರೀತಿ ಭಾವನೆಗಳು ಪಸರಿಸಬೇಕು.

ಜನಪದ ಸಾಹಿತ್ಯದಲ್ಲಿಯೂ ಸಾತ್ವಿಕವಾಗಿ ಪ್ರತಿಭಟಿಸುವ ಅಂಶಗಳಿರುತ್ತವೆ. ಅಂತಹ ಪ್ರಸ್ತುತ ಸಮಾಜದಲ್ಲಿನ ಮೌಢ್ಯತೆಗಳನ್ನು ಪ್ರತಿಭಟಿಸುವ ಗುಣ ನಿಮ್ಮ ಬರವಣಿಗೆಯಲ್ಲಿರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ, ಚಿತ್ರದುರ್ಗ ಬರದ ನಾಡು ಎಂದು ಹೆಸರಾಗಿದೆಯೇ ಹೊರತು, ಸಾಹಿತ್ಯಕವಾಗಿ ಬಹು ಶ್ರೀಮಂತಿಕೆಯನ್ನು ಹೊಂದಿದೆ. ಇಲ್ಲಿನ ಜಾನಪದ, ಶಿಷ್ಟ ಹಾಗು ಬುಡಕಟ್ಟು ಸಂಸ್ಕೃತಿ ನಾಡಿಗೆ ಪರಿಚಿತ ಆ ವಿಷಯದಲ್ಲಿ ನಾವು ಹೆಮ್ಮೆ ಪಡಬೇಕು. ಅಂತಹ ಸಾಹಿತ್ಯ ಸಂಸ್ಕøತಿಯನ್ನು ಉಳಿಸಿಕೊಂಡು ಹೋಗುವ ಸಾಮಾಜಿಕ ಹೊಣೆಗಾರಿಕೆ ಜಿಲ್ಲೆಯ ಲೇಖಕರು ಮಾಡಬೇಕಿದೆ. ಆ ನಿಟ್ಟಿನಲ್ಲಿ ಸಾಕಷ್ಟು ಬರಹಗಾರರು ಸಾಹಿತ್ಯ ಕೃಷಿಯನ್ನು ಮಾಡುತ್ತಿದ್ದಾರೆ. ಆದರೆ ಈಗಿನ ಯುವ ಜನತೆ ಅಂಕಗಳ ಬೆನ್ನತ್ತಿ ಹೊರಟಿದೆ.

ಅಂಕಗಳೊಂದಿಗೆ ಹೋರಾಟ ನಡೆಸಬೇಕಿದೆ. ಆದರೆ ಅಂಕಗಳೇ ಜೀವನವಲ್ಲ ಎಂಬ ಸತ್ಯವನ್ನು ಸಾಹಿತ್ಯ ತೋರಿಸುತ್ತಿದೆ. ಈ ಕವಿಗೋಷ್ಠಿಯಲ್ಲಿ ಸಾಕಷ್ಟು ಜನ ಕವನ ವಾಚಿಸಲು ಬಂದಿರುವುದು ನೊಡಿದರೆ ನಮ್ಮ ಜಿಲ್ಲೆ ಸಾಹಿತ್ಯ ಪರಂಪರೆ ಸಮೃದ್ಧಿಯಿಂದ ಕೂಡಿದೆ ಎನ್ನಬಹುದು.

ಜೀವನದ ಅನುಭವದ ಸಾರವೇ ಕವಿತೆಗಳಾಗಿ ದಾಖಲಾಗಬೇಕು. ಅಂತಹ ಕವಿತೆಗಳು ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯನ್ನು ಪರಿಚಯಿಸುತ್ತವೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಕಾರ್ಯಕ್ರಮಗಳ ಆಯೋಜನೆ ಮೂಲಕ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಜಿಲ್ಲಾ ಕನ್ನಡ ಭವನ ನಿರ್ಮಾಣದತ್ತ ಜಿಲ್ಲಾಧ್ಯಕ್ಷರು ಕಾರ್ಯಪ್ರವೃತ್ತರಾಗಬೇಕು. ಅದಕ್ಕೆ ನಮ್ಮ ಸಂಪೂರ್ಣ ಸಹಕಾರವಿರುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಅಧ್ಯಕ್ಷೀಯ ನುಡಿಗಳಲ್ಲಿ, ಕಸಾಪ ಸದಾ ಕ್ರೀಯಾಶೀಲವಾಗಿ ಕೆಲಸ ಮಾಡಲು ಜಿಲ್ಲೆಯ ಹಿರಿಯ, ಕಿರಿಯ ಸಾಹಿತಿಗಳ, ಕಸಾಪ ಹಿಂದಿನ ಅಧ್ಯಕ್ಷರುಗಳ ಸಲಹೆ ಸಹಕಾರ ಬಹಳ ಮುಖ್ಯ. ಹಾಗೆಯೇ ಈಗ ಕನ್ನಡ ಸಾಹಿತ್ಯ ಪರಿಷತ್ ಗಣಕೀಕೃತವಾಗುತ್ತಿದೆ. ಆನ್‍ಲೈನ್ ಮೂಲಕವೇ ಸಾಹಿತ್ಯ ಪರಿಷತ್ತಿನ ಸದಸ್ಯರಾಗಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕಸಾಪ ಶ್ರಮಿಸುತ್ತಿದೆ. ಆಗ ಹೆಚ್ಚಿನ ಕನ್ನಡಿಗರು ಕಸಾಪ ಸದಸ್ಯರಾಗಿ ಪರಿಷತ್ತನ್ನು ಬಲಪಡಿಸಬೇಕು ಎಂದು ತಿಳಿಸಿದರು.

ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 15 ಕ್ಕೂ ಹೆಚ್ಚು ಕವಿಗಳ ತಮ್ಮ ಕವನ ವಾಚನವನ್ನು ಮಾಡಿದರು. ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಚೌಳೂರು ಲೋಕೇಶ್, ಗೌರವ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ, ಸಂಘಟನಾ ಕಾರ್ಯದರ್ಶಿ ವಿ.ಧನುಂಜಯ ಮತ್ತಿತರರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ಚಿನ ಶುಲ್ಕ ವಸೂಲಿ – ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಟಿ.ವೆಂಕಟೇಶ್

ಚಿತ್ರದುರ್ಗ : ಮೇ 21: ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಹಲವು ಶಿಕ್ಷಣ ಸಂಸ್ಥೆಗಳು ಮಕ್ಕಳ ದಾಖಲಾತಿಗಾಗಿ ಮಾನವೀಯತೆ ಮರೆತು ಸರ್ಕಾರ ನಿಗಧಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು

ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಮತ ಎಣಿಕೆಕಾರ್ಯ ನಿರ್ವಹಿಸಲು ಸೂಚನೆ : ಟಿ.ವೆಂಕಟೇಶ್

ಚಿತ್ರದುರ್ಗ : ಮೇ 21 : ಏಪ್ರಿಲ್ 26ರಂದು ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯವು ಜೂನ್ 04ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದ್ದು, ಚುನಾವಣೆಯ

ಬರ್ತ್ ಡೇ ಮುಗಿದು ವಾರವಾದರೂ ಬರ್ತಿವೆ ಗಿಫ್ಟ್ : ಅಷ್ಟೊಂದು ಸೀರೆಗಳನ್ನು ಸಂಗೀತಾಗೆ ಗಿಫ್ಟ್ ಮಾಡಿದ್ದು ಯಾರು..?

ಸಂಗೀತಾ ಶೃಂಗೇರಿ ಈಗ ಯಾರನ್ನೇ ಕೇಳಿದರೂ ಹೇಳುತ್ತಾರೆ. ಬಿಗ್ ಬಾಸ್ ನಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡವರು. ಎದುರಾಳಿಗಳಿಗೆ ತಿರುಗೇಟು ಕೊಟ್ಟವರು. ಗೆದ್ದೆ ಗೆಲ್ಲುತ್ತಾರೆ ಎಂದುಕೊಂಡಿದ್ದಾಗಲೇ ಕೊನೆಯ ಮೆಟ್ಟಿಲಿನ ತನಕ ಹೋಗಿ ವಾಪಾಸ್ ಬಂದವರು.

error: Content is protected !!