in ,

ಸಾಹಿತ್ಯದ ಮುಖೇನ ನೆಲದ ಋಣ ತೀರಿಸುವುದು ನಮ್ಮ ಕರ್ತವ್ಯ : ಕೆ.ಎಲ್.ನಟರಾಜ್

suddione whatsapp group join

ವರದಿ : ಕೆ.ಪಿ.ಎಂ.ಗಣೇಶಯ್ಯ, ಚಿತ್ರದುರ್ಗ.
ದೂ : 9448664878

ಚಿತ್ರದುರ್ಗ : ಸಾಹಿತ್ಯದ ಮುಖೇನ ನೆಲದ ಋಣ ತೀರಿಸುವುದು ನಮ್ಮ ಕರ್ತವ್ಯ. ಲೇಖನಗಳ ವಿಸ್ತಾರವನ್ನು ಚುಟುಕಾಗಿ ರಚಿಸಿರುವ ಮುಕ್ತಕಗಳು ಜೀವನಮೌಲ್ಯಗಳನ್ನು ಒಳಗೊಂಡಿವೆ. ಆಧ್ಯಾತ್ಮಿಕ, ವಿಡಂಬನೆ, ಇತಿಹಾಸ, ಆಡಂಬರ, ಅಲಂಕಾರ, ಪ್ರಾಸಬದ್ಧತೆ ಮುಂತಾದ ಅಂಶಗಳಿಂದ ಕೂಡಿದ ಮುಕ್ತಕಗಳು ಸಾಹಿತ್ಯ ಲೋಕದಲ್ಲಿ ಹಾಸುಹೊಕ್ಕಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನ ರಾಜ್ಯಧ್ಯಕ್ಷ ಕೆ.ಎಲ್.ನಟರಾಜ್ ಅಭಿಪ್ರಾಯಪಟ್ಟರು.

ನಗರದ ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘ, ಆರ್ಯವೈಶ್ಯ ವಿದ್ಯಾಭಿವೃದ್ಧಿ ಸಂಘ, ಆರ್ಯವೈಶ್ಯ ಸಾಹಿತ್ಯ ಪರಿಷತ್ತು ಹಾಗೂ ಟೀಕಾ ಸಾಹಿತ್ಯ ಮಾಲೆ ಇವರ ಸಂಯುಕ್ತ ಆಶ್ರಯದಲ್ಲಿ ವಾಸವಿ ವಿದ್ಯಾಸಂಸ್ಥೆಯ ಆರ್ಯವೈಶ್ಯ ವಿದ್ಯಾಭಿವೃದ್ಧಿ ಸಂಘದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರೊ.ಟಿ.ವಿ.ಸುರೇಶ್ ಗುಪ್ತ ವಿರಚಿತ ಮುಕ್ತಕ ಮಂದಾರ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಸಿಕೊಡಬೇಕು. ಓದುವ ಸಂಸ್ಕೃತಿಯನ್ನು ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಹಿರಿಯರನ್ನು ಅನುಸರಿಸುವ ಮಕ್ಕಳ ಬಗೆಗೆ ಪೋಷಕರಲ್ಲಿ ಅರಿವಿರಬೇಕು. ಸಾಹಿತ್ಯಗಳನ್ನು ಪ್ರಕಟಿಸುವ ಪತ್ರಿಕೆಗಳ ಬಗ್ಗೆಯೂ ಚಿಂತನೆ ನಡೆಸಬೇಕಿದೆ. ಪತ್ರಿಕೆಗಳನ್ನು ಉಳಿಸಿ ಬೆಳೆಸುವ ಓದುಗರು ಹೆಚ್ಚಾಗಬೇಕಿದೆ. ಸಾಮಾಜಿಕ ಚಿಂತನೆ, ಸತ್ಸಂಗ, ಧ್ಯಾನ, ಯೋಗ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಚಟುವಟಕೆಗಳನ್ನು ಪ್ರೋತ್ಸಾಹಿಸುವ ಶಾಂತಿ ನಿಕೇತನ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಶರೀರಕ್ಕೆ ವಯಸ್ಸಾದರೂ ಮಾನಸಿಕವಾಗಿ ಅನುಭವದ ಸಾಹಿತ್ಯ ರಚಿಸುವ ಆತ್ಮಸ್ಥೈರ್ಯದ ಪ್ರಸ್ತುತತೆಯನ್ನು ಲೇಖಕರಲ್ಲಿ ಕಾಣಬಹುದು ಎಂದರು.

ತಾ.ಕಸಾಪ ಅಧ್ಯಕ್ಷ ರಾಮಲಿಂಗಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾಹಿತ್ಯ ಬರೆಯುವುದು ಕಷ್ಟದ ಕೆಲಸ‌. ಜಾಲತಾಣಗಳಲ್ಲಿ ಮುಳುಗಿಹೋಗಿರುವ ಆಧುನಿಕ ಯುಗಕ್ಕೆ ಮುಕ್ತಕ ಮಂದಾರದ ಪುಸ್ತಕದಲ್ಲಿನ ನುಡಿಮುತ್ತುಗಳು ಜೀವನದಲ್ಲಿ ತಲೆಯೆತ್ತಿ ನಡೆಯುವಂತೆ ರಚಿಸಲಾಗಿದೆ. ಲೇಖಕ ಪ್ರೊ.ಟಿ.ವಿ.ಸುರೇಶ್ ಗುಪ್ತರವರು ತಮ್ಮ ಅಪಾರ ಅನುಭವದ ಸಾರವನ್ನು ಮುಕ್ತಕಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಆಳವಾದ ನೀತಿಭೋದೆಯನ್ನು ಮುಕ್ತಕಗಳು ಒಳಗೊಂಡಿವೆ ಎಂದರು.

ರಾಯಚೂರಿನ ಆವೋಪ ಫೆಡರೇಷನ್ನಿನ ಉಪಾಧ್ಯಕ್ಷ ಎಸ್.ಎಲ್.ಕೋರಾ ಮುಖ್ಯ ಅತಿಥಿಯಾಗಿ ಮಾತನಾಡಿ ಸಾಹಿತಿಗಳು ಸಾಹಿತ್ಯ ಲೋಕಕ್ಕೆ ಗಟ್ಟಿಮುಟ್ಟಾದ ಸಮಾಜ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. ಸಾಹಿತ್ಯದ ಮೂಲಕ ಸಮಾಜದ ಹಲವು ಮಜಲುಗಳನ್ನು ಒಳ ಆಂತರ್ಯದ ಸೌಂದರ್ಯದ ಅಂಶಗಳನ್ನು ಮುಕ್ತಕಗಳಲ್ಲಿ ಮೂಡಿಬಂದಿದೆ ಎಂದರು.

ಆರ್ಯವೈಶ್ಯ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಪಿ.ಎನ್.ಮೋಹನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಪರಮೇಶ್ವರಪ್ಪ ಮುಕ್ತಕ ಮಂದಾರ ಪುಸ್ತಕವನ್ನು ಅವಲೋಕಿಸಿ ಮಾತನಾಡಿದರು. ಆರ್ಯವೈಶ್ಯ ವಿದ್ಯಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜ್, ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಎನ್. ಅಜಯ್ ಕುಮಾರ್, ಲೇಖಕ ಪ್ರೊ.ಟಿ.ವಿ.ಸುರೇಶ್ ಗುಪ್ತ, ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಜಾತ ಪ್ರಾಣೇಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಆರ್ಯವೈಶ್ಯ ಸಾಹಿತಿಗಳಾದ ಮಂಜಮ್ಮ ತಿಮ್ಮಾಶೆಟ್ಟಿ, ವಿ.ಲಕ್ಷ್ಮಿವಾಸುದೇವಶೆಟ್ಟಿ, ಸತ್ಯಪ್ರಭ ವಸಂತಕುಮಾರ್, ರಾಜೇಶ್ವರಿ, ಕೆ.ಆರ್.ಮನೋಹರ್, ನಿಬಗೂರು ವೆಂಕಟೇಶ್, ಎಂ.ಕಾರ್ತಿಕ್, ಜಿ.ಆರ್. ಶಿವಕುಮಾರ್, ರಾಧಾಕೃಷ್ಣ ನಿಬಗೂರು, ನಾರಾಯಣ ದೊಂತಿ, ಕೆ.ಹೆಚ್.ಜಯಪ್ರಕಾಶ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಎಂ.ಆರ್.ಮಂಜುನಾಥಶೆಟ್ಟಿ ಮುಕ್ತಕ ವಾಚಿಸಿದರು.

ಸರ್ವದಾ ಸುರೇಶ್ ಗುಪ್ತ ಹಾಗೂ ಲಲಿತಾ ಶಿವಕುಮಾರ್ ಪ್ರಾರ್ಥಿಸಿದರು. ಆವೋಪ ಕಾರ್ಯದರ್ಶಿ ಡಿ.ಆರ್.ತಿಪ್ಪೇಸ್ವಾಮಿ ಸ್ವಾಗತಿಸಿದರು. ಟಿ.ಎಸ್.ನಂದಿನಿ ಸುಹಾಸ್ ಮತ್ತು ಜ್ಯೋತಿ ಲಕ್ಷ್ಮಣ್ ನಿರೂಪಿಸಿದರು.

ವರದಿ : ಕೆ.ಪಿ.ಎಂ.ಗಣೇಶಯ್ಯ, ಚಿತ್ರದುರ್ಗ.
ದೂ : 9448664878

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

Aadhar and Pan Card Link : ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೇ ದಿನ : ಲಿಂಕ್ ಮಾಡುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ…!

ಲಾಕರ್ ನಲ್ಲಿಟ್ಟಿದ್ದ ಚಿನ್ನ & ಡೈಮಂಡ್ ನಾಪತ್ತೆ : ಪೊಲೀಸ್ ಠಾಣೆ ಮೆಟ್ಟಿಲೇರಿದ ರಜನಿಕಾಂತ್ ಪುತ್ರಿ..!