ಬೆಂಗಳೂರು: ಮಸೀದಿ ಧ್ವನಿವರ್ಧಕದ ಬಗ್ಗೆ ಮಾತನಾಡಿದ ಸಚಿವ ಸುಧಾಕರ್, ಇದು ಬಹಳ ವರ್ಷಗಳಿಂದ ಕೋರ್ಟ್ ನಲ್ಲಿಯೂ ವಾದ ಪ್ರತಿವಾದ ನಡೆಯುತ್ತಲೇ ಇದೆ. ವಾಯು ಮಾಲಿನ್ಯ ಯಾವ ರೀತಿ ಇತ್ತು, ಶಬ್ಧ ಮಾಲಿನ್ಯ ಕೂಡ ಬಗ್ಗೆ ಇದೆ. ಶಬ್ಧ ಮಾಲಿನ್ಯದ ಬಗ್ಗೆ ಇಷ್ಟೇ ಇರಬೇಕು ಎಂಬ ನಿಯಮಾವಳಿ ಇದೆ. ಅದು ಬಿಟ್ಟರೆ ಯಾವ ಧರ್ಮದ ಬಗ್ಗೆ ಹತ್ತಿಕ್ಕುವ ಕೆಲಸವಾಗಲೀ, ನೋವು ಕೊಡುವುದಾಗಲಿ ಸರ್ಕಾರದ ಉದ್ದೇಶವಲ್ಲ.
ಶ್ರೀಲಂಕಾ ಪರಿಸ್ಥಿತಿ ಏನು ಎಂಬುದನ್ನ ಮೊದಲು ಅವರು ಅರ್ಥ ಮಾಡಿಕೊಳ್ಳಬೇಕು. ಅಲ್ಲಿ ದುವಾಳಿಯಾಗಿ ಎಮರ್ಜೆನ್ಸಿ ಬಂದಿದೆ. ಈ ದೇಶಕ್ಕೆ ಎಮರ್ಜೆನ್ಸಿ ತಂದುಕೊಟ್ಟವರು ಕಾಂಗ್ರೆಸ್. ಹೀಗಾಗಿ ಇತಿಹಾಸ ತಿಳಿದುಕೊಳ್ಳಬೇಕಾಗಿದೆ ಎಂದು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ಅವರು ರಾಜ್ಯಕ್ಕೆ ಬಂದೋಗಿದ್ದು ಮುಂಬರುವ ಚುನಾವಣೆಯ ಪೂರ್ವಭಾವಿ ಅಂತಲೇ ಹೇಳಲಾಗುತ್ತಿದೆ ಅಲ್ವಾ ಎಂಬ ಪ್ರಶ್ನೆಗೆ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಚುನಾವಣೆ ಒಂದು ವರ್ಷವಿದೆ. ಅಮಿತ್ ಶಾ ಮಾತ್ರವಲ್ಲಮೊನ್ನೆ ರಾಹುಲ್ ಗಾಂಧಿಯವರು ಬಂದಿದ್ರಲ್ಲ ಅದಕ್ಕೇನು ಹೇಳಬೇಕು. ಆಯಾ ಪಕ್ಷದ ನಾಯಕರು ಆಯಾ ರಾಜ್ಯಕ್ಕೆ ಕಾರ್ಯಕ್ರಮದ ನಿಮಿತ್ತ ಬರ್ತಾರೆ. ಬಂದಾಗ ಹಾಗೇನೇ ಹೋಗೋದಿಲ್ಲ. ಎಲ್ಲರಲೂ ರಾಜಕಾರಣಿಗಳೇ. ರಾಜಕಾರಣವನ್ನೇ ಮಾಎಲ್ಲ ಅಂದಾಗ ಅದು ಸುಳ್ಳಾಗುತ್ತೆ ಎಂದಿದ್ದಾರೆ.
ಇನ್ನು ಬಿಜೆಪಿಯಲ್ಲಿ ನಿಮಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತೆ ಎಂಬ ಬಗ್ಗೆ ಮಾತನಾಡಿದ್ದು, ನಾನು ಬಿಜೆಪಿಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡು ಬಂದಿಲ್ಲ. ನನ್ನ ಕಾರ್ಯವೈಖರಿ ಮತ್ತು ಪಕ್ಷಕ್ಕೆ ನನ್ನಿಂದ ಒಳ್ಳೆಯದಾಗುತ್ತೆ ಎನ್ನುವುದಾದರೆ ಪಕ್ಷ ಯಾವುದೇ ಜವಬ್ದಾರಿ ಕೊಟ್ಟರು ಅದನ್ನು ಅತ್ಯಂತ ಪ್ರಾಮಾಣಿಕತರ ಮತ್ತು ದಕ್ಷತೆಯಿಂದ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದಿದ್ದಾರೆ.