ಬೆಂಗಳೂರು: ಜಾತಿಗಣತಿ ವಿಚಾರದಲ್ಲಿ ಪರ – ವಿರೋಧಗಳು ಕೇಳಿ ಬರುತ್ತಲೆ ಇದೆ. ಅದರಲ್ಲೂ ಬಿಜೆಪಿ ನಾಯಕರು ಈ ಜಾತಿಗಣತಿ ಬಗ್ಗೆ ಸಾಕಷ್ಟು ಗರಂ ಆಗಿದ್ದಾರೆ. ಅದರಲ್ಲಿ ಬೇಕಾದವರ ಸಹಿಯೇ ಇಲ್ಲ. ಅದೊಂದು ಫೇಕ್ ಎಂದಿದ್ದಾರೆ. ಜಾತಿಗಣತಿ ವರದಿ ನೀಡಿದ ಆದರೆ ಇದೀಗ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
‘ನಾನು ಕೊಟ್ಟ ಜಾತಿ ಗಣತಿ ವರದಿ ನೈಜವಾಗಿದೆ. ವೈಜ್ಞಾನಿಕವಾಗಿಯೆ ಇದೆ. ವರದಿ ನೋಡದೆ, ಸುಮ್ಮನೆ ಅವೈಜ್ಞಾನಿಕವಾಗಿದೆ ಎನ್ನುವುದು ಸರಿಯಲ್ಲ. 40 ದಿನ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಾಗಿದೆ. ಜಾತಿ, ಲಿಂಗ, ಧರ್ಮ, ಆಸ್ತಿ – ಪಾಸ್ತಿ ಎಲ್ಲಾ ಸೇರಿ 55 ಪ್ರಶ್ನೆ ಕೇಳಿದ್ದೇವೆ. ಕುಲಂಕುಷವಾಗಿ ಅಂಕಿ – ಅಂಶಗಳ ಸಮೇತ ವರದಿ ಸಿದ್ಧ ಮಾಡಲಾಗಿದೆ. ರಾಜ್ಯ ಸರದಕಾರ ಈ ವರದಿಯನ್ನು ನೋಡಿದ ಬಳಿಕ ತೀರ್ಮಾನ ಮಾಡಲಿ. ಎರಡು ಸಮುದಾಯಗಳು ವಿರೋಧ ಮಾಡಬಹುದು. ಆದರೆ ವರದಿಯನ್ನು ಮೊದಲು ನೋಡಲಿ. ಆ ಬಳಿಕ ಅದು ಸರಿಯಿಲ್ಲ ಎಂದಾದರೇ ವಿರೋಧ ಮಾಡಲಿ.
ಜಾತಿಗಣತಿ ವರದಿಗೆ ಕಾರ್ಯದರ್ಶಿ ಸಹಿ ಇಲ್ಲ ಎನ್ನುವುದು ಸರಿಯಲ್ಲ. ವರದಿಯ ಒಂದು ವಾಲ್ಯೂಮ್ ಗೆ ಸಹಿ ಹಾಕಿಲ್ಲ ಅಷ್ಟೇ. ಮೂಲ ಪ್ರತಿ ಕಾಣೆಯಾಗಿರುವುದು ನಂಗೆ ಗೊತ್ತಿಲ್ಲ. 2019ರಲ್ಲಿ ನಾನು ವರದಿ ಕೊಟ್ಟಿದ್ದು, ನಾನು ಇದ್ದಾಗ ಮೂಲಪ್ರತಿ ಇತ್ತು. ಇದು ಜಾತಿ ಗಣತಿ ಅಲ್ಲ. ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ. ಕುಮಾರಸ್ವಾಮಿ ಅವರಿಗೆ ಸಮಯ ಕೆಳಿದ್ವಿ. ಆದರೆ ಅವರು ಸಮಯ ಕೊಡಲಿಲ್ಲ ಎಂದು ವರದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.