ದಾವಣಗೆರೆ: ರಾಜಕೀಯದಲ್ಲಿ ಗುರುತಿಸಿಕೊಂಡವರಿಗೆ ಮುಂದಿನ ದಿನಗಳಲ್ಲಿ ಸಚಿವರಾಗಬೇಕು, ಮುಖ್ಯಮಂತ್ರಿಯಾಗಬೇಕು ಹೀಗೆ ದೊಡ್ಡ ದೊಡ್ಡ ಆಸೆಗಳೇ ಇರುತ್ತವೆ. ಎಷ್ಟೋ ಮಂದಿ ಸಚಿವ ಸ್ಥಾನ ಸಿಗದೆ ಇದ್ದ ಕಾರಣಕ್ಕೆ ಪಕ್ಷ ಬಿಟ್ಟಿದ್ದಾರೆ. ಇದೀಗ ಶಾಸಕ ಜಮೀರ್ ಅಹ್ಮದ್, ತಾನೂ ಉಪಮುಖ್ಯಮಂತ್ರಿಯಾಗಬೇಕೆಂಬ ಬಯಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾತನಾಡಿದ ಜಮೀರ್, ಈ ಬಾರಿ ಕಾಂಗ್ರೆಸ್ ಗೆ ಬಾರೀ ಡಿಮ್ಯಾಂಡ್ ಇದೆ. ಸುಮಾರು ಜನ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಹಾಸನ, ಮಂಡ್ಯ, ಕೋಲಾರ ಸೇರಿದಂತೆ ಹಲವು ಕಡೆಗಳಿಂದ ಜೆಡಿಎಸ್ ನಾಯಕರು ಕಾಂಗ್ರೆಸ್ ಗೆ ಬರಲಿದ್ದಾರೆ. ಈ ಬಾರಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದು ಬಹಳ ಮುಖ್ಯ. ಹಾಲಿ ಶಾಸಕ ಎಸ್ ರಾಮಪ್ಪನಿಗೆ ಟಿಕೆಟ್ ಫಿಕ್ಸ್ ಇದೆ. ರಾಮಪ್ಪ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನನ್ನ ಪ್ರಕಾರ ಅವರಿಗೆ ಟಿಕೆಟ್ ಗ್ಯಾರಂಟಿ.
ನನಗೆ ಉಪಮುಖ್ಯಮಂತ್ರಿಯಾಗಬೇಕೆಂಬ ಆಸೆ ಏನು ಇಲ್ಲ. ಆದರೆ ಅದು ಜನರ ಆಸೆಯಾಗಿದೆ. ಅಲ್ಪಸಂಖ್ಯಾತರಿಗೆ ಈ ಬಾರಿ 20 ಟಿಕೆಟ್ ನೀಡಬೇಕೆಂದು ಕೇಳಿಕೊಂಡಿದ್ದೇವೆ. ಆದ್ರೆ ಟಿಕೆಟ್ ಗಿಂತ ನಮಗೆ ಪಕ್ಷದ ಗೆಲುವು ಮುಖ್ಯ. ಕಾಂಗ್ರೆಸ್ ಗೆಲ್ಲಬೇಕು ಅಂತಾನೇ ನಾನು ರಾಜ್ಯಪ್ರವಾಸ ಕೈಗೊಂಡಿದ್ದೇನೆ ಎಂದಿದ್ದಾರೆ.