Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಠದ ಸ್ವಾಮೀಜಿಗಳಾಗುವುದು ಕಷ್ಟವೇನಲ್ಲ, ಆದರೆ ಒಂದು ಮನೆಯ ಸೊಸೆಯಾಗುವುದು ತುಂಬಾ ಕಷ್ಟ : ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.28  : ಮಠದ ಸ್ವಾಮೀಜಿಗಳಾಗುವುದು ಕಷ್ಟವೇನಲ್ಲ. ಒಂದು ಮನೆಯ ಸೊಸೆಯಾಗುವುದು ತುಂಬಾ ಕಷ್ಟ. ಗಂಡನ ಮನೆಯಲ್ಲಿ ಎಲ್ಲಿರಿಗೂ ಹೊಂದಿಕೊಂಡು ಬಾಳುವುದು ಇನ್ನು ಕಠಿಣ ಎಂದು ಸಿರಿಗೆರೆಯ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಕಳೆದ 2 ರಂದು ನಿಧನರಾದ ಸಿರಿಗೆರೆ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ರಾ.ವೆಂಕಟೇಶಶೆಟ್ಟಿರವರ ಪತ್ನಿ ಶ್ರೀಮತಿ ಸುಕನ್ಯಾರವರ ಆತ್ಮಶಾಂತಿಗಾಗಿ ವಾಸವಿ ಮಹಲ್ ರಸ್ತೆಯಲ್ಲಿರುವ ಕನ್ಯಕಾ ಮಹಲ್‍ನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ವೈಕುಂಠ ಸಮಾರಾಧನೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ತಂದೆ-ತಾಯಿಯನ್ನು ಬಿಟ್ಟು ಹೆಣ್ಣು ಗಂಡನ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಸುಲಭವಲ್ಲ. ಮನುಷ್ಯನ ಜೀವನದಲ್ಲಿ ಜನನ-ಮರಣ ಸಾಮಾನ್ಯ. ಹೃದಯದ ಭಾವನೆಗಳನ್ನು ದುಡ್ಡಿನಲ್ಲಿ ಅಳೆಯಬಾರದು. ಆರ್ಯವೈಶ್ಯ ಸಮಾಜದವರು ಯಾರಾದರೂ ಮೃತಪಟ್ಟಾಗ ಅಂತ್ಯಕ್ರಿಯೇಯಾಗುವತನಕ ಎಲ್ಲವನ್ನು ನಿಭಾಯಿಸಿ ಮಾನವೀಯತೆ ಮೆರೆಯುತ್ತಾರೆ. ಸಮುದ್ರದ ಅಡಿಯಲ್ಲಿ ಕಪ್ಪೆಚಿಪ್ಪು, ಮುತ್ತುರತ್ನಗಳು ಸಿಗುತ್ತವೆ. ಅಕ್ಕಮಹಾದೇವಿ, ವಾಸವಿ ಜೀವನದಲ್ಲಿ ಒಂದು ತರನಾದ ಕಷ್ಟಗಳು ಎದುರಾಗುತ್ತವೆ. ಇವರಿಬ್ಬರ ಜೀವನದಲ್ಲಿಯೂ ಆಧ್ಯಾತ್ಮಿಕ ಸೆಳೆತವಿತ್ತು. ಆರ್ಯವೈಶ್ಯ ಸಮಾಜದವರಿಗೆ ಮತ್ತೊಬ್ಬರ ಕಷ್ಟಕ್ಕೆ ಮರುಗುವ ಗುಣವಿದೆ ಎಂದು ಶ್ಲಾಘಿಸಿದರು.

ಆರ್ಯವೈಶ್ಯ ಸಮಾಜಕ್ಕೂ ನಮ್ಮ ಮಠಕ್ಕೂ ಒಡನಾಟವಿದೆ. ಭಗವದ್ಗೀತೆಯನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳದ ಮೂರ್ಖರು. ನಾನಾ ರೀತಿಯ ವ್ಯಾಖ್ಯಾನಗಳನ್ನು ಮಾಡುತ್ತಾರೆಂದರು.

ಯಾವುದೇ ಕೆಲಸವನ್ನು ಮಾಡುವಾಗ ಫಲಾಪೇಕ್ಷೆಯನ್ನು ಬಯಸಬಾರದು. ರಾ.ವೆಂಕಟೇಶಶೆಟ್ಟಿಯವರು ತಮ್ಮ ಪತ್ನಿಯ ಸೇವೆಯನ್ನು ಪ್ರೀತಿಯಿಂದ ಮಾಡಿದ್ದಾರೆ. ಕರ್ತವ್ಯವೆಂದುಕೊಳ್ಳಲಿಲ್ಲ. ಎಲ್ಲರ ಜೀವನದಲ್ಲಿ ಬಾಲ್ಯ, ಯವೌನ, ಮುಪ್ಪು ಇದ್ದೆ ಇರುತ್ತದೆ. ಆತ್ಮಕ್ಕೂ ಶರೀರಕ್ಕೂ ಸಂಬಂಧವಿದೆ. ಮನುಷ್ಯನ ಜೀವನಕ್ಕೂ ಮರಗಿಡಗಳಿಗೂ ವ್ಯತ್ಯಾಸವಿದೆ. ಶ್ರೀಮತಿ ಸುಕನ್ಯಾ ವೆಂಕಟೇಶ್‍ರವರು ದೈಹಿಕವಾಗಿ ಅಗಲಿರಬಹುದು. ಆದರೆ ಮಾನಸಿಕವಾಗಿ ಅವರ ಪತಿ ಮತ್ತು ಕುಟುಂಬದವರ ಮನದಲ್ಲಿದ್ದಾರೆಂದು ಹೇಳಿದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ ಸನ್ಯಾಸ ಜೀವನಕ್ಕಿಂತ ದಾಂಪತ್ಯ ಜೀವನ ದೊಡ್ಡದು ಎಂದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಗಂಡನ ಆಗು-ಹೋಗುಗಳಿಗೆ ಹೆಂಡತಿ ಆಶ್ರಯ ಮುಖ್ಯ. 48 ವರ್ಷಗಳ ಕಾಲ ಸುಕನ್ಯಾರವರು ತಮ್ಮ ಪತಿ ರಾ.ವೆಂಕಟೇಶಶೆಟ್ಟಿರವರ ಜೊತೆ ಸಂಸಾರ ನಡೆಸಿದ್ದಾರೆ.
ಭಗವಂತ ಅವರಿಗೆ ದುಃಖ ನುಂಗಿಕೊಳ್ಳುವ ಧೈರ್ಯ, ಸ್ಥೈರ್ಯ ಕೊಡಲಿ ಎಂದು ಪ್ರಾರ್ಥಿಸಿದರು.

ರಾ.ವೆಂಕಟೇಶಶೆಟ್ಟಿ ಮಾತನಾಡಿ ನನ್ನ ಪತ್ನಿ ಸುಕನ್ಯಾ 48 ವರ್ಷಗಳ ಕಾಲ ನನ್ನ ಜೊತೆ ಸಂಸಾರ ನಡೆಸಿ ಈಗ ಅಗಲಿರುವ ನೋವು ಸಹಿಸಿಕೊಳ್ಳಲು ಆಗುತ್ತಿಲ್ಲ. ಮರಕ್ಕೆ ಬೇರಿನಂತಿದ್ದರು. ಗಂಡ-ಹೆಂಡತಿ ನಡುವೆ ಪರಸ್ಪರ ಪ್ರೀತಿಯಿರುತ್ತದೆ. ಅನಾರೋಗ್ಯಕ್ಕೆ ತುತ್ತಾದಾಗ ಸ್ವಲ್ಪವೂ ಬೇಸರಪಟ್ಟುಕೊಳ್ಳದೆ ಪ್ರೀತಿಯಿಂದ ನನ್ನ ಹೆಂಡತಿಯ ಸೇವೆ ಮಾಡಿದ್ದೇನೆ. ಕರ್ತವ್ಯ ಅಂದುಕೊಳ್ಳಲಿಲ್ಲ. ಈಗಲೂ ನನ್ನ ಜೊತೆಯಲ್ಲಿಯೇ ಇದ್ದಾರೆಂದುಕೊಂಡಿದ್ದೇನೆ. ನನಗೂ ಮತ್ತು ನನ್ನ ಕುಟುಂಬಕ್ಕೂ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಅನುಗ್ರಹವಿದೆ ಎಲ್ಲರನ್ನು ಕೈಹಿಡಿದು ಮೇಲಕ್ಕೆತ್ತಿದ್ದಾರೆ. ಈಗ ನನ್ನ ಕುಟುಂಬದ ಎಲ್ಲರೂ ಸುಖವಾಗಿದ್ದಾರೆಂದು ಭಾವುಕರಾದರು.

ಕಾಶಿವಿಶ್ವನಾಥಶೆಟ್ಟಿ, ಟಿ.ವಿ.ಸುರೇಶ್‍ಗುಪ್ತ ಇನ್ನು ಅನೇಕರು ಮಾತನಾಡಿದರು. ರಾ.ವೆಂಕಟೇಶಶೆಟ್ಟಿರವರ ಕುಟುಂಬದವರು, ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳು ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!