ಕ್ರೀಡೆಯನ್ನು ಬೆಳಸುವುದು ಎಲ್ಲರ ಹೊಣೆ : ಮಾದಾರ ಚನ್ನಯ್ಯ ಸ್ವಾಮೀಜಿ

3 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜು. 12 : ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ನೀಡಿ, ಕ್ರೀಡೆಯನ್ನು ಬೆಳಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.

ಚಿತ್ರದುರ್ಗ ಸ್ಪೋಟ್ರ್ಸ್ ಕ್ಲಬ್, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಬೆಂಗಳೂರು ಹಾಗೂ ಚಿತ್ರದುರ್ಗ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 25 ವರ್ಷದೊಳಗಿನ ರಾಜ್ಯ ಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ-2025ರ ಪ್ರೀಮಿಯರ್ ಲೀಗ್ ಸೀಜನ್-4ರ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಚಿತ್ರದುರ್ಗ ನಗರ ಕ್ರೀಡೆಗೇ ಯಾವೂತ್ತು ಸಹಾ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಇದರ ಫಲವಾಗಿ ಇಲ್ಲಿ ಹಲವಾರು ರೀತಿಯ ಕ್ರೀಡೆಗಳು ನಡೆಯುತ್ತಿರುತ್ತವೆ, ಈಗಾಗಲೇ ಇದೇ ಮೈದಾನದಲ್ಲಿ ವಾಲಿಬಾಲ್, ಕ್ರೀಕೆಟ್, ಹಾಕಿ, ಕಬಡ್ಡಿಯಂತಹ ಕ್ರೀಡೆಗಳು ನಡೆಯುತ್ತಿವೆ, ಇದನ್ನು ಯುವ ಜನಾಂಗ ನೋಡಿ ಕಲಿಯವ ಕಾರ್ಯವನ್ನು ಮಾಡುತ್ತಿದೆ ಎಂದರು.

ಚಿತ್ರದುರ್ಗದಲ್ಲಿ ವಿವಿಧ ಕ್ರೀಡೆಗಳ ಹಲವರು ಕ್ರೀಡಾಪಟುಗಳು ಇದ್ದಾರೆ. ಅವರನ್ನು ಗುರುತಿಸಿ ಪ್ರೋತ್ಸಾಹ ಮಾಡುವ ಕಾರ್ಯ ಚಿತ್ರದುರ್ಗದ ನಾಗರೀಕರಾದ ನಮ್ಮೆಲ್ಲರ ಮೇಲಿದೆ. ಕ್ರೀಡಾ ಪಟುವಿಗೆ ಪ್ರೋತ್ಸಾಹ ನೀಡಿದಾಗ ಅತ ಉತ್ತಮ ಕ್ರೀಡಾಪಟುವಾಗಲು ಸಾಧ್ಯವಿದೆ. ನಮ್ಮ ನಗರದಲ್ಲಿ ಇಂತಹ ಕ್ರೀಡಾಕೂಟಗಳು ಆಗಾಗ ನಡೆಯುವುದರಿಂದ ಇದನ್ನು ನೋಡಲು ಬರುವವರಗೆ ತಾವು ಸಹಾ ಕ್ರೀಡಾಪಟುವಾಗಬೇಕೆಂದು ಅನಿಸುತ್ತದೆ. ಸತತವಾಗಿ ಅಭ್ಯಾಸವನ್ನು ಮಾಡಿದಾಗ ಮಾತ್ರ ಉತ್ತಮವಾದ ಕ್ರೀಡಾಪಟುವಾಗಲು ಸಾಧ್ಯವಿದೆ. ದಸರಾ ಸಮಯದಲ್ಲಿ ಶ್ರೀಮಠದಿಂದ ಶಾಲಾ-ಕಾಲೇಜಿನ ಮಕ್ಕಳಿಗಾಗಿ ಜಮುರ ಕಪ್ ಹೆಸರಿನಲ್ಲಿ ಹಲವಾರು ಕ್ರೀಡೆಗಳನ್ನು ಏರ್ಪಾಡು ಮಾಡುವುದರ ಮೂಲಕ ಕ್ರೀಡೆಗೆ ಪ್ರೋತ್ಸಾಹವನ್ನು ನೀಡಲಾಗಿದೆ ಎಂದರು.

ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ಜಾತಿ ಧರ್ಮ ಭೇಧ ಇಲ್ಲದೆ ತಂಡವನ್ನು ಗೆಲ್ಲಿಸುವವ ಗುರಿಯನ್ನು ಮಾತ್ರ ಹೊಂದಿರುತ್ತಾರೆ. ಕ್ರೀಡೆಯಲ್ಲಿ ತೊಡಗಿದ ವ್ಯಕ್ತಿ ಸೂಕ್ತವಾದ ಸಮಯದಲ್ಲಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗುತ್ತಾನೆ. ಇದರಿಂದ ಅವರನ್ನು ವಿವಿಧ ಕಂಪನಿಗಳು ಉನ್ನತವಾದ ದೀಢೀರ್ ನಿರ್ಧಾರವನ್ನು ತೆಗೆದುಕೊಳ್ಳುವಂತ ಕೆಲಸಕ್ಕೆ ನೇಮಿಸಿಕೊಳ್ಳುತ್ತಾರೆ ಪಾಠದ ಜೊತೆಗೆ ಕ್ರೀಡೆಗೂ ಸಹಾ ಅದ್ಯತೆಯನ್ನು ನೀಡಬೇಕಿದೆ ಇದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯವಿದೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.

ನಗರಾಭೀವೃದ್ದಿ ಪ್ರಾಧಿಕಾರ ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ಮಾತನಾಡಿ, ಕ್ರೀಡೆಯನ್ನು ಒಂದು ದಿನ ಮಾತ್ರ ಆಡಿ ಬಿಡುವುದು ಸರಿಯಲ್ಲಿ ನಿರಂತರವಾಗಿ ಅಭ್ಯಾಸವನ್ನು ಮಾಡುವುದರ ಮೂಲಕ ಈ ರೀತಿಯಾದ ಪಂದ್ಯಾವಳಿಯಲ್ಲಿ ಭಾಗವಹಿಸಿದಾಗ ಗೆಲುವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿ, ಶಾಲಾ-ಕಾಲೇಜುಗಳಲ್ಲಿ ಕ್ರೀಡೆಯನ್ನು ಮರೆತ್ತಿದ್ದಾರೆ ಅಲ್ಲಿನ ವಿದ್ಯಾರ್ಥಿಗಳು ಶಾಲೆಯ, ಕಾಲೇಜಿನ ಕ್ರೀಡಾ ಕೂಟ ಇದ್ದಾಗ ಮಾತ್ರ ಆಟವನ್ನು ಆಡುತ್ತಾರೆ ಆದರೆ ನಿರಂತರವಾಗಿ ತಮ್ಮನ್ನು ತಾವು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಈ ಮೈದಾನದಲ್ಲಿ ನಿರಂತರವಾಗಿ ಕ್ರೀಡೆಯಲ್ಲಿ ಅಭ್ಯಾಸವನ್ನು ಮಾಡುವುದು ನಡೆಯಬೇಕಿದೆ, ಕ್ರೀಡಾ ಪಟುಗಳಿಗೆ ಅನುಕೂಲಕ್ಕಾಗಿ ಈ ಮೈದಾನದಲ್ಲಿ ಸಿಮೆಂಟಿನ ಕುರ್ಚಿಗಳನ್ನು ಪ್ರಾಧಿಕಾರದವತಿಯಿಂದ ಮಾಡಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಟಿ.ಕೆ.ಬಸವರಾಜು ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಸಭೆಯ ಮಾಜಿ ಸದಸ್ಯರಾದ ಹೆಚ್.ಹನುಮಂತಪ್ಪ, ತಾ.ಪಂ.ಮಾಜಿ ಸದಸ್ಯರಾದ ಸುರೇಶ್ ನಾಯ್ಕ್, ನಾಗರಾಜ್, ಕಂದಾಯ ಅಧಿಕಾರಿ ಮಂಜುನಾಥ್, ಎಸ್.ಬಿ.ಐ.ನ ಡಿವಿಜಲ್ ಮ್ಯಾನೇಜರ್ ವೀರಯ್ಯ, ಶಿವಲಿಂಗಪ್ಪ, ಮಧು ಶ್ರೀನಿವಾಸ್ ಪರಶುರಾಮ್, 7 ಸ್ಟಾರ್ ಬಳ್ಳಾರಿ ತಂಡದ ಮಾಲಿಕರಾದ ಆಗ್ರಹಾರ ಗೋವಿಂದ, ಕೆಳಗೋಟೆ ಕಿಂಗ್ ಮಾಲಿಕರಾದ ದೇವರಾಜ್, ಎಸ್.ಬಿ.ಐ. ಲೈಫ್‍ನ ಚಂದ್ರಶೇಖರ್, ಸರ್ಕಲ್ ಅಡ್ಡದ ಪ್ರಜ್ವಲ್, ರಾಯರಸೇನೆಯ ಮಧು-ಶ್ರೀನಿವಾಸ್ ಹಾಗೂ ಚಿತ್ರದುರ್ಗ ಸ್ಪೋಟ್ಸ್ ಕ್ಲಬ್‍ನ ನಾಗಭೂಷಣ್ ಭಾಗವಹಿಸಿದ್ದರು.

ಉದ್ಘಾಟನೆಯ ಲೀಗ್ ಪಂದ್ಯಾವಳಿಯಲ್ಲಿ ಚಿತ್ರದುರ್ಗ ಸ್ಪೋಟ್ಸ್ ಕ್ಲಬ್ ತಂಡ (25) ರಾಯರಸೇನೆಯ (24) ವಿರುದ್ದ 01 ಅಂಕಗಳನ್ನುಗಳಿಸಿದೆ, ಕೆಳಗೋಟೆ ಕಿಂಗ್ ತಂಡ (38) ಅಂಕಗಳಿಗೆ 7 ಸ್ಟಾರ್ ಬಳ್ಳಾರಿ (24) ಅಂಕಗಳನ್ನು ಗಳಿಸಿದೆ, ಸರ್ಕಲ್ ಅಡ್ಡ ತಂಡವೂ (22) ಅಂಕಗಳನ್ನು ಗಳಿಸಿದರೆ ಎಸ್.ಬಿ.ಐ. ಲೈಫ್ 28 ಅಂಕಗಳನ್ನು ಗಳಿಸಿದೆ. ಗಂಗಾಧರ್ ಪ್ರಾರ್ಥಿಸಿದರೆ, ಮುರುಗೇಶ್ ಸ್ವಾಗತಿಸಿದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks