ಹೊಸದುರ್ಗ, (ಜೂ.05) : ಜಾಗತಿಕ ತಾಪಮಾನಕ್ಕೆ ಗಿಡ, ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯ ಮಾಡುವುದೆ ಮದ್ದು ಎಂದು ಡಾ.ಶ್ರೀ.ಶಾಂತವೀರ ಮಹಾಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಬೈಪಾಸ್ ರಸ್ತೆ ಮಠದ ರಸ್ತೆಯ ಅಕ್ಕಪಕ್ಕ ಸುಮಾರು 300 ಸಸಿ ತಾವೆ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು. ಪ್ರತಿಯೊಬ್ಬ ವ್ಯಕ್ತಿ ಹತ್ತು ಸಸಿ ನೆಟ್ಟು ಬೆಳೆಸುವ ಸಂಕಲ್ಪ ಮಾಡಿದಾಗ ನಮ್ಮ ಮುಂದಿನ ಪೀಳಿಗೆಯ ಉತ್ತಮ ಜೀವನಕ್ಕೆ ನಾವು ಕೊಡುವ ದೊಡ್ಡ ಕಾಣಿಕೆ ಎಂಬದನ್ನು ಅರಿಯಬೇಕು. ತನ್ನ ಸ್ವಾರ್ಥಕ್ಕೆ ಮರ ಗಿಡಗಳನ್ನು ಕಡಿಯುವ ಮನುಷ್ಯ ಸಮಾಜದ ಉನ್ನತಿಗಾಗಿ ಪರಿಸರ ಸಂರಕ್ಷಣೆ ಮಾಡದಿರುವುದು ದುಃಖದ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.
ಆರಣ್ಯ ಇಲಾಖೆ ಸಸಿ ನೆಡುವ ವ್ಯಕ್ತಿಗಳಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ಪರಿಸರ ಉಳಿವಿಗೆ ಸಹಕರಿಸಬೇಕು ಕೇವಲ ಅಂಖೆ ಸಂಖ್ಯೆಯಲ್ಲಿ ಪುಸ್ತಕದಲ್ಲಿ ಸಸಿ ಬೆಳೆಸುವ ಕೆಲಸ ದಶಮಾನಗಳಿಂದ ಸಾಗುತ್ತಿದೆ ಆದರೆ ಸುಧಾಸುತ್ತಿಲ್ಲ ಪ್ರತಿ ಶಾಲೆ ಕಟ್ಟಡ ಮನೆ ಕಚೇರಿ ಕಟ್ಟುವಾಗ ಕಡ್ಡಾಯ ಗಿಡ ನೆಡುವ ಕಾನೂನಿನ ಅವಶ್ಯಕತೆಯಿದೆ ಇತ್ತೀಚಿನ ದಿನಗಳಲ್ಲಿ ಹಳ್ಳಿಯಲ್ಲಿ ಸಸಿ ನೀಡುತ್ತಿಲ್ಲ ಬದುವಿನಲ್ಲಿದ್ದ ಮರಗಳನ್ನು ಕತ್ತರಿಸುವ ಕೆಲಸ ಸಾಗಿದೆ.
ಈ ಸಂದರ್ಭದಲ್ಲಿ ಶ್ರೀಮಠದ ಸಿಬ್ಬಂದಿ ಇದ್ದರು.