ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಪ್ರತಿ ತಿಂಗಳು 100 ರೂಪಾಯಿ ದೇಣಿಗೆ ನೀಡಬೇಕು ಎಂದು ಪೋಷಕರಿಗೆ ಸುತ್ತೋಲೆ ಹೊರಡಿಲಾಗಿದೆ. ಶಿಕ್ಷಣ ಇಲಾಖೆ ಹೊರಡಿಸಿದ ಈ ಸುತ್ತೋಲೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಡ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು ಓದುತ್ತಿರುತ್ತಾರೆ. ಪ್ರತಿ ತಿಂಗಳು 100 ರೂಪಾಯಿ ದೇಣಿಗೆ ನೀಡಬೇಕು ಎಂದರೆ ಹೇಗೆ ಸಾಧ್ಯ ಎಂಬ ಚರ್ಚೆಗಳು ಹುಟ್ಟು ಹಾಕಿದೆ.
ಈ ವಿಚಾರಕ್ಕೆ ಮೈಸೂರಿನಲ್ಲಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಪ್ರತಿಕ್ರಿಯೆ ನೀಡಿದ್ದು, ಸುತ್ತೋಲೆಯನ್ನು ಸರಿಯಾಗಿ ಓದದೆ ಈ ರೀತಿ ಮಾತನಾಡುತ್ತಿದ್ದಾರೆ. ಸುತ್ತೋಲೆಯಲ್ಲಿಯೇ ಹೊರಡಿಸಿಲಾಗಿದೆ. ಇದು ಕಡ್ಡಾಯವಲ್ಲ. ಪೋಷಕರು ದೇಣಿಗೆ ಕೊಟ್ಟರೆ ಅದಕ್ಕೆ ರಶೀದಿ ಪಡೆಯಬಹುದು ಎಂದಿದ್ದಾರೆ.
ಇನ್ನು ಈ ಸುತ್ತೋಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ಮುಖ್ಯಮಂತ್ರಿಗಳಿಗೂ ಕೂಡ ಇದು ಸಂಬಂಧಿಸಿಲ್ಲ. ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ. ಶಾಲೆಗಳಲ್ಲಿರುವ ಎಸ್ಡಿಎಂಸಿ ಸಮಿತಿ ಸಲಹೆ ಮೇರೆಗೆ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ. ಆರ್ಟಿಇ ಕಾಯ್ದೆಯಡಿ ಇದಕ್ಕೆ ಸಂಪೂರ್ಣವಾಗಿ ಅಧಿಕಾರವಿದೆ. ಆದರೆ ಈ ಬಗ್ಗೆ ನಾನು ಆಯುಕ್ತರ ಬಳಿ ಮಾತನಾಡಿದ್ದೇನೆ ಎಂದಿದ್ದಾರೆ.
ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಪ್ರತಿ ತಿಂಗಳು ಪೋಷಕರು 100 ರೂಪಾಯಿ ದೇಣಿಗೆ ಕೊಡಬೇಕು. ದೇಣಿಗೆಯನ್ನು ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಅನಿವಾರ್ಯತೆ ಇದ್ದರೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡು, ದೇಣಿಗೆ ಹಣದಲ್ಲಿ ಸಂಬಳವನ್ನು ನೀಡಬಹುದು. ಹೀಗೆ ಶಾಲೆಯ ಅಭಿವೃದ್ಧಿಗೆ ದೇಣಿಗೆ ಬಳಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.