ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಲು ನಿಜವಾಗಲೂ ಯಡಿಯೂರಪ್ಪ ಅವರೇ ಕಾರಣವಾ..? ಅಥವಾ ಆಗಿರೋದಾದರೂ ಏನು..?

1 Min Read

 

ಮೈಸೂರು: ಎರಡು ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧುಸಿದ್ದ ಪ್ರತಾಪ್ ಸಿಂಹ, ಮೂರನೇ ಬಾರಿಯೂ ಗೆದ್ದು ಹ್ಯಾಟ್ರಿಕ್ ಬಾರಿಸುವ ಕನಸು ಕಂಡಿದ್ದರು. ಆದರೆ ಆ ಕನಸಿಗೆ ಹೈಕಮಾಂಡ್ ನಾಯಕರು ತೆರೆ ಎಳೆದಿದ್ದಾರೆ. ಈ ಬಾರಿಯ ಟಿಕೆಟ್ ಜಸ್ಟ್ ಮಿಸ್ ಆಗಿದೆ. ಮೈಸೂರು-ಕೊಡಗು ಕ್ಷೇತ್ರಕ್ಕೆ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿದ್ದು, ಪ್ರತಾಪ್ ಸಿಂಹಗೆ ಟಿಕೆಟ್ ಕೈ ತಪ್ಪಲು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿವೈ ವಿಜಯೇಂದ್ರ ಅವರೇ ಕಾರಣ ಎಂಬ ಚರ್ಚೆಯಾಗುತ್ತಿದೆ. ಆದರೆ ಮೂಲಗಳ ಪ್ರಕಾರ ಆಗಿರುವುದೇ ಬೇರೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ಪ್ರತಾಪ್ ಸಿಂಹ ತಮ್ಮದೇ ತಪ್ಪಿಗೆ ಬೆಲೆ ಕಟ್ಟಿದ್ದಾರೆ ಎನ್ನಲಾಗುತ್ತಿದೆ. ಪ್ರತಾಪ್ ಸಿಂಹ ತಾವೂ ಮಾಡಿಕೊಂಡ ಸಾಲು ಸಾಲು ಯಡವಟ್ಟುಗಳಿಂದಾನೇ ಟಿಕೆಟ್ ಕೈತಪ್ಪಿದೆ ಎನ್ನಲಾಗಿದೆ. ಪ್ರತಾಪ್ ಸಿಂಹ ಅವರ ವಿರುದ್ಧ ಮೈಸೂರು-ಕೊಡಗು ಭಾಗದಲ್ಲಿ ಬಿಜೆಪಿಯಲ್ಲಿಯೇ ಅಸಮಾಧಾನವಿತ್ತು. ಇದು ಅಮಿತ್ ಶಾ ಅವರ ತನಕ ತಲುಪಿತ್ತು. ಹೀಗಾಗಿಯೇ ಈ ಬಾರಿ ಟಿಕೆಟ್ ಮಿಸ್ ಆಗಿದೆ ಎನ್ನಲಾಗಿದೆ.

ಜೊತೆಗೆ ಬಿಜೆಪಿ ಹೈಕಮಾಂಡ್ ಈ ಬಾರಿ ಅಭ್ಯರ್ಥಿಗಳ ಗ್ರೌಂಡ್ ರಿಪೋರ್ಟ್ ರೆಡಿ‌ ಮಾಡಿ, ಬಳಿಕ ನಿರ್ಧಾರ ಮಾಡಿ, ಅಭ್ಯರ್ಥಿಗಳ ಪಟ್ಟಿಯನ್ನು ಅನೌನ್ಸ್ ಮಾಡಿದೆ. ಪ್ರತಾಪ್ ಸಿಂಹ ಬಗ್ಗೆ ಜನ ಅಷ್ಟೇನು ಒಲವು ತೋರಿಲ್ಲ ಎಂಬುದು ರಿಪೋರ್ಟ್ ನಲ್ಲಿ ಕಂಡು ಬಂದಿದ್ದು ಅದಕ್ಕೆ ಟಿಕೆಟ್ ನೀಡಿಲ್ಲ ಎನ್ನಲಾಗುತ್ತಿದೆ. ಇದರ ಜೊತೆಗೆ ಒಡೆಯರ್ ಅವರಿಗೆ ಟಿಕೆಟ್ ನೀಡಿದರೆ ಉತ್ತರ ಭಾರತದಲ್ಲೂ ವರ್ಕೌಟ್ ಆಗಲಿದೆ ಎಂಬ ಲೆಕ್ಕಾಚಾರ ಇದೆ. ಹೀಗಾಗಿ ಎರಡು ಬಾರಿ ಗೆದ್ದು, ಟಿಕೆಟ್ ಸಿಗುವ ಆತ್ಮವಿಶ್ವಾಸದಲ್ಲಿದ್ದ ಪ್ರತಾಪ್ ಸಿಂಹ ಇಂದು ಟಿಕೆಟ್ ಇಲ್ಲದೆ ಬೇಸರದ ನಡೆ ತೋರುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *