ಮೈಸೂರು: ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಬಿಜೆಪಿಯ ಜನ ಸಂಕಲ್ಪ ಯಾತ್ರೆ ಕೂಡ ಜೋರಾಗಿ ನಡೆಯುತ್ತಿದೆ. ಇಂದು ಪಾಂಡವಪುರದಲ್ಲಿ ಜನಸಂಕಲ್ಪ ಯಾತ್ರೆ ನಡೆಯಲಿದೆ. ಬೃಹತ್ ವೇದಿಕೆಯಲ್ಲಿ ಬಿಜೆಪಿ ನಾಯಕರು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.
ಮಂಡ್ಯ, ಮೈಸೂರು ಅದರಲ್ಲೂ ಮೈಸೂರಿನ ಹಳೆ ಭಾಗದಲ್ಲಿ ಜೆಡಿಎಸ್ ತಮ್ಮ ಸ್ಥಾನವನ್ನು ಭದ್ರವಾಗಿ ಕಾಪಾಡಿಕೊಂಡಿದೆ. ಇಲ್ಲಿನ ಜನ ಕುಮಾರಸ್ವಾಮಿಗೆ ಬಿಟ್ಟರೆ ಬೇರೆಯವರಿಗೆ ಸ್ಥಾನ ಕೊಡುವುದು ತುಂಬಾನೇ ಕಷ್ಟ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಸಾರಥ್ಯದಲ್ಲಿ ಪ್ರಯತ್ನ ಪಟ್ಟರೆ ಕಮಲ ಅರಳಿಸಬಹುದೇನೋ. ಹೇಗಾದರೂ ಮಾಡಿ ಇಲ್ಲಿ ಕಮಲ ಅರಳಿಸಲೇಬೇಕೆಂದು ಬಿಜೆಪಿ ನಾಯಕರು ಪಣ ತೊಟ್ಟಿದ್ದಾರೆ. ಇದೇ ಕಾರಣಕ್ಕೆ ಇಂದು ಬಿಜೆಪಿ ಡಲ್ ಇರುವ ಭಾಗದಲ್ಲಿ ಜನಸಂಕಲ್ಪ ಯಾತ್ರೆಯನ್ನು ಕೈಗೊಂಡಿದ್ದಾರೆ.
ನಡ್ಡಾ ಅವರ ಕಾರ್ಯಕ್ರಮದಕ್ಕೆ ಯಡಿಯೂರಪ್ಪ ಅವರನ್ನೇ ಮರೆತಿದ್ದ ಬಿಜೆಪಿ ಮೇಲೆ ಬಿಎಸ್ವೈ ಬೇಸರ ಮಾಡಿಕೊಂಡಿದ್ದರು. ಅದನ್ನು ತುಂಬಾ ದೊಡ್ಡಮಟ್ಟದಲ್ಲೇನು ಹೊರಗೆ ಹಾಕಿರಲಿಲ್ಲ. ಆದರೂ ಮನಸಿನ ಬೇಸರ ಎಲ್ಲರೆದುರು ಕಾಣುತ್ತಿತ್ತು. ಅಂದೇ ಅದನ್ನು ಸರಿಪಡಿಸುವ ಯತ್ನ ಬಿಜೆಪಿಯಿಂದ ಆಗಿದೆ. ಇದೀಗ ಇಂದು ಪಾಂಡವಪುರಕ್ಕೆ ಅವರನ್ನು ಕರೆದೊಯ್ಯಲು ಸಿಎಂ ಬೊಮ್ಮಾಯಿ ಅವರೇ ಬೆಳಗ್ಗೆನೆ ಅವರ ಮನೆಗೆ ಹೋಗಿದ್ದಾರೆ. ಅವರ ಮನಸ್ಸನ್ನು ತಿಳಿಗೊಳಿಸಿ, ತಮ್ಮ ಕಾರಿನಲ್ಲಿಯೇ ಕರೆದುಕೊಂಡು ಹೊರಟಿದ್ದಾರೆ.