ಇತ್ತಿಚಿನ ದಿನಗಳಲ್ಲಿ ಕೆಲವೊಂದಿಷ್ಟು ಕಾಯಿಲೆಗಳು ಕಾಮನ್ ಆಗಿ ಹೋಗಿದೆ. ಜೀವನ ಶೈಲಿ ಅಂತದ್ದು. ಹೆಚ್ಚಿನ ಸಮಯ ನಿದ್ದೆ ಮಾಡದೆ ಇರುವುದು, ಕೆಲಸದ ಒತ್ತಡ ಹೀಗೆ ನಾನಾ ಕಾರಣಗಳಿಂದ ಮೈಗ್ರೇನ್ ಬರುತ್ತದೆ. ಮೈಗ್ರೇನ್ ಕಾಡುವುದಕ್ಕೆ ಶುರು ಮಾಡಿದರೆ, ಆ ತಲೆನೋವನ್ನು ಸಹಿಸಿಕೊಳ್ಳುವ ಶಕ್ತಿ ಹೆಚ್ಚಾಗಿರಬೇಕಾಗುತ್ತದೆ. ಅದಕ್ಕೂ ಮುನ್ನ ತಲೆ ನೋವು ಬರದಂತೆ ನೋಡಿಕೊಳ್ಳಲು ಒಂದಷ್ಟು ಟಿಪ್ಸ್ ಇಲ್ಲಿದೆ.
* ಮುಖ್ಯವಾಗಿ ಜೀವನದ ಒತ್ತಡದಿಂದಾಗಿ ಮೈಗ್ರೇನ್ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪ್ರತಿದಿನ ಆದಷ್ಟು 20 ನಿಮಿಷವಾದರೂ ಯೋಗಭ್ಯಾಸ ಮಾಡಿ. ಬಳಿಕ ಮೈಗ್ರೇನ್ ಕಡಿಮೆಯಾಗುತ್ತ ಬರುತ್ತದೆ.
* ಕೆಲವೊಬ್ಬರಿಗೆ ಹವಮಾನ ಬದಲಾವಣೆಯಿಂದಾಗಿಯೂ ಮೈಗ್ರೇನ್ ಸಮಸ್ಯೆ ಕಾಡುತ್ತದೆ. ಹೀಗಾಗಿ ಹೊರಗಡೆ ಓಡಾಡುವುದನ್ನು ಕಡಿಮೆ ಮಾಡಿ
* ಮೊದಲನೆಯದಾಗಿ ಒತ್ತಡದಿಂದಾನೇ ನಮ್ಮ ದೇಹಕ್ಕೆ ಹಲವು ಕಾಯಿಲೆಗಳು ಅಂಟುವುದು. ಆದಷ್ಟು ಒತ್ತಡದಿಂದ ದೂರವಿದ್ದು, ಜೀವನವನ್ನು ಖುಷಿಯಾಗಿ ಜೀವಿಸಿ. ಆಗ ಮೈಗ್ರೇನ್ ತನ್ನಿಂತಾನೇ ದೂರಾಗುತ್ತದೆ.
* ಪ್ರತಿ ದಿನ ಉತ್ತಮವಾದ ನಿದ್ದೆ ಮಾಡಿ. ಕಣ್ಣಿಗೆ, ದೇಹಕ್ಕೆ ಆರಾಮು ನೀಡಿದರೆ ಮೈಗ್ರೇನ್ ಸಮಸ್ಯೆಗೊಂದು ಪರಿಹಾರ ಸಿಗುತ್ತದೆ.