ಚಿತ್ರದುರ್ಗ : ಎಲ್ಲಾ ಜಿಲ್ಲೆಗಳಿಗೂ ಉಸ್ತುವಾರಿ ಸಚಿವರನ್ನು ನೇಮಿಸಿದ ಬೆನ್ನಲ್ಲೇ ಇದೀಗ ಸಚಿವ ಸಂಪುಟ ರಚನೆ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ. ಈ ಬೆನ್ನಲ್ಲೇ ಒಂದಷ್ಟು ಸಚಿವರು ಸಂಪುಟದಿಂದ ಹೊರ ಹೋಗಿ ಹೊಸಬರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಈ ವಿಚಾರವಾಗಿ ಈ ಬಾರಿ ಚಿತ್ರದುರ್ಗ ಜಿಲ್ಲೆಯ ಇಬ್ಬರು ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಕಳೆದ ಬಾರಿ ಸಂಪುಟ ರಚನೆ ಮಾಡುವಾಗಲೇ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಹಾಗೂ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಸಂಪುಟ ಸೇರ್ತಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದ್ರೆ ಕಡೆ ಗಳಿಗೆಯಲ್ಲಿ ಆ ಅವಕಾಶ ತಪ್ಪಿ ಹೋಗಿತ್ತು. ಇದೀಗ ಮತ್ತೆ ಸಂಪುಟ ವಿಸ್ತರಣೆ ವೇಳೆಯೂ ಇಬ್ಬರು ಶಾಸಕರು ಹೆಸರು ಚಾಲ್ತಿಯಲ್ಲಿದೆ.
ಸಚಿವ ಸಂಪುಟ ಪುನಾರಚನೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ಶಾಸಕ ಜಿಹೆಚ್. ತಿಪ್ಪಾರೆಡ್ಡಿ ಅವರು, ಸಂಪುಟ ಪುನಾರಚನೆ 2-3 ದಿನಗಳಿಂದ ಚರ್ಚೆ ನಡೆಯುತ್ತಿದೆ. ಸಂಕ್ರಾಂತಿ ಬಳಿಕ ಹೊಸ ಮುಖಗಳಿಗೆ ಅವಕಾಶ ನೀಡಿ, ಹಿರಿತನದ ಮೇಲೆ ಪುನಾರಚನೆ ವದಂತಿ ಇತ್ತು. ಆದರೆ ಇದೀಗ ಬಜೆಟ್ ಮತ್ತು ಉತ್ತರ ಪ್ರದೇಶದ ಚುನಾವಣೆ ಬಳಿಕ ಎಂಬ ಮಾಹಿತಿ ಬರುತ್ತಿದೆ.
ಏಪ್ರಿಲ್ ನಲ್ಲಿ ಸಚಿವ ಸಂಪುಟ ಪುನಾರಚನೆ ಮಾಡುವುದಾದರೆ ಯಾಕೆ ಮಾಡಬೇಕು ಮೇ ಜೂನ್ ತಿಂಗಳಲ್ಲಿ TP- ZP ಚುನಾವಣೆ ನೀತಿ ಸಂಹಿತೆ ಬರುತ್ತದೆ. ಏಪ್ರಿಲ್ ತಿಂಗಳಲ್ಲಿ ಮಂತ್ರಿ ಮಾಡಿದ್ರೆ ಹೊಸ ಮಂತ್ರಿಗಳ ಕೆಲಸ ಏನು ?. ಮಾಜಿ ಮಂತ್ರಿ ಆಗಿದ್ದೆ ಎಂದು ತೋರಿಸೋಕೆ ಮಾಡ್ತಾರಾ ಎಂದರು.
ಸಂಪುಟ ಪುನಾರಚನೆ ಉದ್ದೇಶ ಏನೆಂದರೆ ರಾಜ್ಯದಲ್ಲಿ ಆಡಳಿತಕ್ಕೆ ಹೊಸ ರೂಪ ನೀಡಲು ಸಹಕಾರಿಯಾಗುತ್ತದೆ. ಇತ್ತೀಚೆಗೆ ಎಲ್ಲಾ ವರ್ಗಗಳ ಬೆಂಬಲಗಳಿಸಲು ಕೊಂಚ ಮಟ್ಟಿಗೆ ಕೊರತೆ ಆಗಿತ್ತು. ಹೊಸ ವ್ಯವಸ್ಥೆಗೆ ಚಾಲನೆ ನೀಡಲು ರಾಜ್ಯ ಮತ್ತು ಕೇಂದ್ರ ನಾಯಕರು ಮಾಡುವ ಮಾಹಿತಿ ಇದೆ ಎಂದು ತಿಳಿಸಿದರು. ಮತ್ತೆ ಏಪ್ರಿಲ್ ನಲ್ಲಿ ಸಂಪುಟ ವಿಸ್ತರಣೆ ಮಾಡುವ ಮಾಹಿತಿ ಬರುತ್ತಿದೆ ಎಂದಿದ್ದಾರೆ.