ಶಿವಮೊಗ್ಗ : ಜಿಲ್ಲಾಧಿಕಾರಿ ಕಚೇರಿಯಿಂದ ಬರೆದಿರುವ ಪತ್ರ ಎಂದು ಹೇಳಲಾದ ಆದೇಶ ಪ್ರತಿಯೊಂದು ಎಲ್ಲೆಡೆ ವೈರಲ್ ಆಗ್ತಾ ಇದೆ. ಈ ಪ್ರತಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ಮೇಲೆ ಎಫ್ಐಆರ್ ದಾಖಲಾದ ವಿಚಾರದ ಬಗ್ಗೆ ಉಲ್ಲೇಖಿಸಲಾಗಿದೆ.
ಆದೇಶ ಪ್ರತಿಯಲ್ಲಿ, ಷಡಕ್ಷರಿ ಅವರ ಮೇಲೆ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಇನ್ನು ಉಲ್ಲೇಖಿತ ಪತ್ರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ದ ಅಧ್ಯಕ್ಷರಾಗಿರುವ ಶ್ರೀ ಷಡಕ್ಷರಿ ರವರ ಮೇಲೆ ಸಾಗರ, ಪೇಟೆ ಪೊಲೀಸ್ ಠಾಣೆಯಲ್ಲಿ ಮಾನ್ಯ ನ್ಯಾಯಾಲಯ ಆದೇಶ ಮೇರೆಗೆ FIR ಆಗಿದ್ದೂ, ಷಡಕ್ಷರಿರವರು ತುಂಬಾ ಪ್ರಭಾವಶಾಲಿಯಾಗಿದ್ದಾರೆ.
ತನಿಖೆಯ ಸಮಯದಲ್ಲಿ ಪ್ರಭಾವ ಬೀರಿ ಸಾಕ್ಷಾ, ಪುರಾವೆಗಳನ್ನೂ ನಾಶ ಪಡಿಸಿ, ತನಿಖೆಯ ದಿಕ್ಕನ್ನೇ ತಪ್ಪಿಸುವ ಸಾಧ್ಯತೆ ಹೆಚ್ಚಿದ್ದೂ, ನ್ಯಾಯಯುತ ತನಿಖೆ ನಡೆಸಿ ನ್ಯಾಯ ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ ಹಾಗೂ ಷಡಾರಿಯನ್ನೂ ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸಿ, ಕರ್ತವ್ಯ ನಿರತ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುವಂತೆ ಹಾಗೂ ಅರ್ಜಿದಾರರಿಗೆ ಸೂಕ್ತ ನ್ಯಾಯ ಹಾಗೂ ಜೀವ ರಕ್ಷಣೆಗಾಗಿ ಕೋರಿರುತ್ತಾರೆ. ಅರ್ಜಿದಾರರು ಜೀವ ರಕ್ಷಣೆಗಾಗಿ ಹೋರಿರುವ ವಿಚಾರದಲ್ಲಿ ನಿಯಾಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ಕೋರಿದೆ ಎಂದು ಪತ್ರ ಬರೆಯಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಜಿಲ್ಲಾಧಿಕಾರಿ ಕಚೇರಿ ಆದೇಶ ಪ್ರತಿ ಈ ಕೆಳಗಿನಂತಿದೆ.