ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ವಿಚಾರ ಚರ್ಚೆಯಲ್ಲಿದೆ. ಸಿದ್ದರಾಮಯ್ಯ ನಂತರ ಡಿಕೆಶಿ ಸಿಎಂ ಆಗ್ತಾರೆ ಎನ್ನುವಾಗಲೇ ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಅನೌನ್ಸ್ ಮಾಡಿದ್ದಾರೆ. ಇದು ಡಿಕೆಶಿ ಬೆಂಬಲಿಗರ ಕಣ್ಣು ಕೆಂಪಾಗಿಸಿದೆ. ಇದರ ಜೊತೆಗೆ ಮಾಜಿ ಸಿಎಂ ಕುಮಾರಸ್ವಾಮಿ ಡಿಕೆಶಿಗೆ ಬೆಂಬಲ ಸೂಚಿಸಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗುವುದಾದರೆ ನಮ್ಮ ಬೆಂಬಲ ಇರಲಿದೆ ಎಂದಿದ್ದರು. ಇದು ರಾಜಕೀಯ ತಂತ್ರ ಎನ್ನಲಾಗುತ್ತಿದೆ.
ಇದಕ್ಕೆಲ್ಲಾ ಕಾರಣ ಲೋಕಸಭಾ ಚುನಾವಣೆ. ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯವೇ ಹೆಚ್ಚು. ಇದೇ ಹಳೇ ಮೈಸೂರು ಭಾಗವನ್ನೇ ಜೆಡಿಎಸ್ ನಾಯಕರು ಟಾರ್ಗೆಟ್ ಮಾಡಿರುವುದು. ಜೊತೆಗೆ ಡಿಕೆಶಿ ಇಲ್ಲಿ ಪ್ರಭಾವಶಾಲಿಯಾಗಿದ್ದಾರೆ. ಮೊದಲೇ ಬಿಜೆಪಿ ಜೊತೆಗೆ ಸೇರಿಕೊಂಡು ಲೋಕಸಭೆ ಚುನಾವಣೆ ಎದುರಿಸಲು ಹೊರಟಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಡಿಕೆಶಿ ಅವರ ವಿರುದ್ಧವಾಗಿ ಮಾತನಾಡಿದರೆ ಡ್ಯಾಮೇಜ್ ಆಗುತ್ತೆ ಎಂಬ ಆತಂಕ ಕುಮಾರಸ್ವಾಮಿ ಅವರದ್ದು.
ಹಿರಿಯರ ನಾಯಕರ ಸಲಹೆಯನ್ನು ಈ ಬಾರಿ ಕುಮಾರಸ್ವಾಮಿ ಅವರು ಪಡೆದಿದ್ದಾರೆ. ಡಿಕೆ ಶಿವಕುಮಾರ್ ವಿಚಾರಕ್ಕೆ ಸಾಫ್ಟ್ ಆಗಿ ಮಾತನಾಡುವಂತೆ ಸಲಹೆ ನೀಡಿದ್ದರಂತೆ. ‘ನಿಮ್ಮ ಆಂತರಿಕ ಕಿತ್ತಾಟ ಏನೇ ಇರಲಿ. ಡಿಕೆ ಶಿವಕುಮಾರ್ ಪರ ಸಿಂಪತಿ ಮಾತನಾಡಿ. ಡಿಕೆಶಿ ಜೊತೆಗೆ ಸಮರ ಸಾರಿದಷ್ಟು ಅದನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾರೆ’ ಎಂದು ಸಲಹೆ ನೀಡಿದ್ದರಂತೆ. ಆ ಕಾರಣಕ್ಕಾಗಿಯೇ ಇದೀಗ ಮಾಜಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಡಿಕೆ ಶಿವಕುಮಾರ್ ಪರವಾಗಿ ನಿಂತಿದ್ದಾರೆ ಎನ್ನಲಾಗಿದೆ.