ಮೈಸೂರು: ನಾಳೆಯಿಂದ ದೇವಸ್ಥಾನಗಳಲ್ಲಿ ಸುಪ್ರಭಾತ ಹಾಕಲು ಶ್ರೀರಾಮಸೇನೆ ನಿರ್ಧಾರ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಬಲ ನೀಡಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, ಇಸ್ಲಾಂನಲ್ಲಿ ಎಲ್ಲವೂ ನಮ್ಮ ಧರ್ಮದ ಪ್ರಕಾರವೇ ಎಂದು ಹೇಳುತ್ತಾರಲ್ಲ, ಇಸ್ಲಾಂ ಹುಟ್ಟಿದ ಸಂದರ್ಭದಲ್ಲಿ ಲೋಡ್ ಸ್ಪೀಕರ್ ಇತ್ತಾ..?. ಇದೇ ರೀತಿ ಆಜಾನ್ ಎನ್ನುವುದು ಲೋಡ್ ಸ್ಪೀಕರ್ ನಲ್ಲಿ ಮೊಳಗುತ್ತಾ ಇತ್ತಾ..?. ಇದನ್ನು ಅರ್ಥ ಮಾಡಿಕೊಳ್ಳಬೇಕು. ಉದಯಗಿರಿ, ಗಾಯತ್ರಿಪುರಂ, ಗೌಸಿಯಾ ನಗರ ಇರಬಹುದು ಅನ್ಯ ಸಮಾಜದವರು ಬಂದು ಮನವಿ ಕೊಡುತ್ತಿದ್ದಾರೆ.
ಎಷ್ಟು ಜೋರಾಗಿ ಶಬ್ದವನ್ನು ಮಾಡುತ್ತಾರೆ ಎಂದರೆ ನಮಗೆ ಅಲ್ಲಿ ವಾಸ ಮಾಡಲು ಹೆದರಿಕೆಯಾಗುತ್ತೆ ಸರ್ ಎನ್ನುತ್ತಾರೆ. ಅಂದರೆ ವಾಸ ಮಾಡಲು ಹೆದರುವಂತ ವಾತಾವರಣ ಸೃಷ್ಟಿ ಮಾಡಿದ್ದಾರೆ. ಇದನ್ನು ನಾವೂ ಸರಿಪಡಿಸಲೇಬೇಕು. ಅದಕ್ಕೋಸ್ಕರ ನಾನು ಕರ್ನಾಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ.
ಈ ರೀತಿಯ ಪ್ರತಿರೋಧಗಳು ಕಂಡು ಬರುತ್ತದೆ. ಅದಕ್ಕಾಗಿ ಸರ್ಕಾರ ಇದನ್ನೆಲ್ಲಾ ಬಹಳ ಗಂಭೀರವಾಗಿ ಪರಿಗಣಿಸಬೇಕು. ಸುಪ್ರೀಂ ಕೋರ್ಟ್ ಶಬ್ಧ ಎಷ್ಟು ಡೆಸಿಬಲ್ ಇರಬೇಕು ಎಂಬುದನ್ನು ಸೂಚನೆ ನೀಡಿದೆ. ಯುಪಿಯಲ್ಲಿ ಆದಿತ್ಯನಾಥ್ ಸರ್ಕಾರ ಸುಮಾರು 50 ಸಾವಿರಕ್ಕೂ ಹೆಚ್ಚು ಮೈಕ್ ಗಳನ್ನು ಮಸೀದಿ, ದೇವಸ್ಥಾನದಲ್ಲಿ ಕಿತ್ತು ಹಾಕಿ ಅದಕ್ಕೊಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ. ಅದೇ ಹಾದಿಯಲ್ಲಿ ಕರ್ನಾಟಕ ಸರ್ಕಾರ ಕೂಡ ನಡೆಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಸುಪ್ರಭಾತವನ್ನು ಹಾಕುತ್ತೇವೆ ಎಂದು ಹೇಳಿರುವುದನ್ನು ವಿರೋಧ ಎನ್ನದೆ, ಅವರ ಮನವಿ ಏನಿದೆ, ಪರಿಸ್ಥಿತಿ ಅಗತ್ಯತೆ ಏನಿದೆ ಅದನ್ನು ಮನಗಂಡು ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಬೇಕೆಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ