ಮುಂಬೈ: ಇಂಧನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಜನ ಸಾಮಾನ್ಯರಂತೂ ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿ ಹೋಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು, ಬಿಜೆಪಿಯೇತರ ರಾಜ್ಯಗಳಿಗೆ ವ್ಯಾಟ್ ಕಡಿತಗೊಳಿಸಲು ಮನವಿ ಮಾಡಿದ್ದರು. ಇದಕ್ಕೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ತಿರುಗೇಟು ನೀಡಿದ್ದಾರೆ.

ಇಂಧನ ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಜವಬ್ದಾರಿಯಲ್ಲ. ನೀವೂ ಕೇಂದ್ರದಲ್ಲಿ ಮಾಡಿದ ತಪ್ಪಿಗೆ ನಮ್ಮನ್ನು ದೂಷಿಸಬೇಡಿ. ರಾಜ್ಯದಲ್ಲಿ ನಾವೂ ಈಗಾಗಲೇ ನ್ಯಾಚುರಲ್ ಗ್ಯಾಸ್ ಮೇಲಿನ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದೇವೆ. ಕೇಂದ್ರ ಸರ್ಕಾರ ಹೆಚ್ಚಿನ ತೆರಿಗೆ ಹಾಕಿ ಈಗ ರಾಜ್ಯದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಮುಂಬೈನಲ್ಲಿ ಡಿಸೇಲ್ 24.38 ರೂಪಾಯಿ, ಪೆಟ್ರೋಲ್ 31.58 ಇದೆ. ಆದರೆ ಕೇಂದ್ರ ಮತ್ತು ರಾಜ್ಯ ತೆರಿಗೆ 32.55 ಇರುವುದರಿಂದ ಇಂಧನ ದರ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಮೊದಲು ಇನ್ನಷ್ಟು ತೆರಿಗೆ ಕಡಿತಗೊಳಿಸಲಿ. ಆ ಬಳಿಕ ರಾಜ್ಯದಲ್ಲೂ ಕಡಿತಗೊಳಿಸಬಹುದು ಎಂದಿದ್ದಾರೆ.

