Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

RSS ಹೋರಾಟದಲ್ಲಿ ಒಬ್ಬಂಟಿಯಾದ್ರಾ ಪ್ರಿಯಾಂಕ್ ಖರ್ಗೆ..?

---Advertisement---

ಬೆಂಗಳೂರು: ಸರ್ಕಾರಿ ಜಾಗದಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮಗಳು ನಡೆಯಬೇಕು ಅಂದ್ರೆ ಸರ್ಕಾರದಿಂದ ಅನುಮತಿ ಪಡೆಯಲೇಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಪತ್ರವನ್ನ ಬರೆದಿದ್ದರು. ಸಚಿವ ಸಂಪುಟದಲ್ಲಿಯೂ ಇದಕ್ಕೆ ಪರೋಕ್ಷವಾಗಿ ಅನುಮತಿ ಸಿಕ್ಕಿದೆ. ಆದರೆ ರಾಜ್ಯಾದ್ಯಂತ ನಡೆಯುತ್ತಿರುವ ಬೆಳವಣಿಗೆಯನ್ನ ನೋಡಿದ್ರೆ, RSS ಹೋರಾಟದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಒಂಟಿಯಾದ್ರಾ ಎಂಬ ಪ್ರಶ್ನೆ ಕಾಡುತ್ತಿದೆ.

ಯಾಕಂದ್ರೆ ರಾಜ್ಯಾದ್ಯಂತ ಆರ್ ಎಸ್ ಎಸ್ ಪಥ ಸಂಚಲನ ಆರಾಮವಾಗಿ ನಡೆಯುತ್ತಿದೆ. ಯಾವುದೇ ರೀತಿಯ ತೊಂದರೆಗಳು ಆಗುತ್ತಿಲ್ಲ. ಅಂದ್ರೆ ಆರ್ ಎಸ್ ಎಸ್ ವಿಚಾರದಲ್ಲಿ ನಮ್ಮ ನಿರ್ಧಾರವೇ ಬೇರೆ, ಪ್ರಿಯಾಂಕ್ ಖರ್ಗೆ ನಿರ್ಧಾರವೇ ಬೇರೆ ಎಂಬಂತ ನಡೆಗಳು ಕಂಡು ಬರುತ್ತಿದೆ. ಹೀಗಾಗಿಯೇ ಉಳಿದ ಜಿಲ್ಲೆಗಳಲ್ಲಿ ಸಚಿವರಿಂದ, ಶಾಸಕರಿಂದ ಯಾವುದೇ ರೀತಿಯ ವಿರೋಧ ವ್ಯಕ್ಯವಾಗುತ್ತಿಲ್ಲ. ಪ್ರಿಯಾಂಕ್ ಖರ್ಗೆ ಬರೆದ ಪತ್ರಕ್ಕೆ ಡಿನ್ನರ್ ಸಭೆಯಲ್ಲಿಯೇ ವಿರೋಧ ಕೇಳಿ ಬಂದಿದೆ ಎನ್ನಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದರೆ ಕೋರ್ಟ್ ಗೆ ಹೋದರೆ ಮತ್ತಷ್ಟು ಪ್ರಚಾರ ಸಿಗಲಿದೆ. ಮತ್ತಷ್ಟು ಭದ್ರತೆಯನ್ನ ಒದಗಿಸಿಕೊಡಬೇಕಾಗುತ್ತದೆ. ಈಗ ಆರ್ ಎಸ್ ಎಸ್ ಕಾರ್ಯಕ್ರಮಗಳಿಗೆ ವಿರೋಧಿಸಿದರೆ ಬೇರೆ ಧರ್ಮ, ಸಂಘಟನೆಯ ಕಾರ್ಯಕ್ರಮಗಳಿಗೆ ಅನುಮತಿ ನೀಡಿದರೆ, ಆಗ ಪ್ರಶ್ನೆಗಳು ಕೇಳಿ ಬರುತ್ತವೆ. ಹೀಗಾಗಿ ಇಲ್ಲಿಯವರೆಗೆ ಹೇಗೆ ನಡೆಯುತ್ತಿದೆಯೋ ಅದೇ ರೀತಿ ನಡೆದುಕೊಂಡು ಹೋಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರದಲ್ಲಿ ಬಿಟ್ಟರೆ ಬೇರೆ ಯಾವ ಜಿಲ್ಲೆಯಲ್ಲೂ ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ನಿರ್ಬಂಧ ಹೇರುವ ನಿರ್ಧಾರ ಅತ್ಯಂತ ಗಂಭೀರವಾಗಿ ಪರಿಗಣಿಸಿಲ್ಲ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now