ಬೆಂಗಳೂರು: ಮೋದಿ ಆಗಮನ ಹಿನ್ನೆಲೆ ಬೆಂಗಳೂರು ರಸ್ತೆಗಳಿಗೆ ಡಾಂಬರ್ ಹಾಕಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿ ಕಾಲೇಜುಗಳಿಗೆ ರಜೆ ವಿಚಾರವಾಗಿ, ಸರ್ಕಾರದ ನಿರ್ಧಾರಕ್ಕೆ ಡಿಕೆಶಿವಕುಮಾರ್ ಕೆಂಡಾಮಂಡಲಾರಾಗಿದ್ದಾರೆ. ಕಾಲೇಜುಗಳಿಗೆ ಯಾಕೆ ರಜೆ ಕೊಡಬೇಕು?. ವಿದ್ಯಾರ್ಥಿಗಳು ಗಲಾಟೆ ಮಾಡ್ತಾರಾ?. ರೋಡಲ್ಲಿ ಏನು ಸೆಕ್ಯುರಿಟಿ ಕೊಡಬೇಕೋ ಕೊಡಿ. ರೋಡ್ ಶೋ ಮಾಡಿ ರಾಜಕೀಯ ಮಾಡಿ. ಆದರೆ ವಿದ್ಯಾರ್ಥಿಗಳನ್ನು ಯಾಕೆ ಅನುಮಾನದಿಂದ ನೋಡ್ತಿದ್ದೀರಾ? ನಮ್ಮ ವಿದ್ಯಾರ್ಥಿಗಳೇನು ಟೆರರಿಸ್ಟ್ ಗಳಾ?.
ಅಗ್ನಿಪಥ್ ಯೋಜನೆ ತಂದಿದ್ದೀರಾ ಆ ಮಕ್ಕಳು ಡಿಗ್ರಿ ಪಾಸ್ ಮಾಡಬಾರದಾ?. ಇಷ್ಟು ವರ್ಷ ದೇಶವನ್ನು ಎಂಥೆಂತ ಸಂದರ್ಭಗಳಲ್ಲಿ ರಕ್ಷಣೆ ಮಾಡಿದ್ದಾರಲ್ಲ. ಮಂತ್ರಿಗಳು ಅವರ ಮಕ್ಕಳನ್ನು ಅಗ್ನಿ ಪಥ್ ಯೋಜನೆಗೆ ಕಳಿಸಲಿ ನೋಡೋಣ. ಮಂತ್ರಿಗಳ ಮಕ್ಕಳು ಇಂಜಿನಿಯರ್ ಆಗಬೇಕು ಡಾಕ್ಟರ್ ಆಗಬೇಕು. ಆದರೆ ಬಡವರ ಮಕ್ಕಳು ಮಾತ್ರ ಸೆಕ್ಯುರಿಟಿ ಗಾರ್ಡ್ಸ್ ಗಳಾಗಬೇಕಾ?. ಮೋದಿ ಬರುತ್ತಿರುವುದು ಜನಕ್ಕೆ ಅನುಕೂಲ ಅಲ್ಲ, ನಾಯಕರ ಅನುಕೂಲಕ್ಕೆ ಕಾರ್ಯಕ್ರಮ ಎಂದಿದ್ದಾರೆ.
ಇದು ಜನರಿಗೆ ಅನುಕೂಲ ಅಲ್ಲ, ಅವರ ನಾಯಕರಿಗೆ ಅನುಕೂಲ. ರಾಮಲಿಂಗರೆಡ್ಡಿ ಕೇಳಿದ್ದಾರೆ ಪ್ರಧಾನಿಗಳು 40% ಕಮಿಷನ್ ಆರೋಪಕ್ಕೆ ಉತ್ತರ ಕೊಡಬೇಕು ಎಂದು. ರಾಮಲಿಂಗರೆಡ್ಡಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಪ್ರಧಾನಿ ಮೋದಿ ೪೦% ಸರ್ಕಾರ ಅಂದಿದ್ದಕ್ಕೆ ಉತ್ತರ ಕೊಡಲಿ.ನಮ್ಮ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಕೇಳಿದ ಪ್ರಶ್ನೆ ಗಳಿಗೆ ಮೋದಿ ಉತ್ತರ ಕೊಡಲಿ.
ಡಿಕೆಶಿ ಹಿಂದು ವಿರೋಧಿ ಎಂಬ ಬಿಜೆಪಿ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿ, ನನ್ನ ಕ್ಷೇತ್ರದಲ್ಲಿ 300-400 ದೇವಸ್ಥಾನಗಳನ್ನ ಜೀರ್ಣೋದ್ಧಾರ ಮಾಡಿಸಿದ್ದೇನೆ. ಬೇಕಾದರೆ ಬಂದು ನೋಡಲಿ. ನಾನೊಬ್ಬ ಹಿಂದು, ಎಲ್ಲ ಧರ್ಮಕ್ಕೂ ಗೌರವ ಕೊಡಬೇಕು. ನಾವು ಯಾರಬೇಕಾದರೂ ಅಧಿಕಾರ ಕೊಡ್ತೇವೆ ಇವರಿಗೆ ಏನಾಗಬೇಕು. ಇವರ ಪಾರ್ಟಿಗೆ ಏನಾಗಬೇಕು,ಅವರಿಗೆ ನಮ್ಮ ಯುವಕರ ಬಗ್ಗೆ ಭಯವಿದೆ. ಸಂಘಟನೆಗಳ ಬಗ್ಗೆ ಭಯವಿದೆ ಎಂದಿದ್ದಾರೆ.