ಮಂಡ್ಯ ಹೊರವಲಯದಲ್ಲಿ KSRTC ಬಸ್ ಪಲ್ಟಿಯಾಗಿ 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿದೆ. ನಿಂತಿದ್ದ ಕಂಟೈನರ್ ಗೆ ಬಸ್ ಡಿಕ್ಕಿ ಹೊಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಕಂಟೈನರ್ ಗೆ ಡಿಕ್ಕಿ ಹೊಡೆದು, ಬಸ್ ಪಲ್ಟಿಯಾಗಿದೆ.
ಬಸ್ ನಲ್ಲಿ ಕಾಲೇಜು ವಿದ್ಯಾರ್ಥಿಗಳು ಕೂಡ ಇದ್ದರು. ಡ್ರೈವರ್ ಸ್ಪೀಡಾಗಿ ಓಡಾಡುತ್ತಿದ್ದರು. ಸೆಂಟ್ ಜಾನ್ ಬಳಿ ಬಂದಾಕ್ಷಣಾ ಬಸ್ ಪಲ್ಟಿಯಾಗಿದೆ. ವೃದ್ಧರು ಕೂಡ ಈ ಬಸ್ ನಲ್ಲಿದ್ದರು. ಟರ್ನಿಂಗ್ ನಲ್ಲಿ ಸ್ಪೀಡ್ ಕಡಿಮೆ ಮಾಡಿಕೊಳ್ಳಬೇಕಿತ್ತು ಎಂದು ಬಸ್ ನಲ್ಲಿದ್ದ ವಿದ್ಯಾರ್ಥಿಗಳು ಹೇಳಿದ್ದಾರೆ.
ಡ್ರೈವರ್ ಫೋನಿನಲ್ಲಿ ಮಾತನಾಡಿಕೊಂಡು ಬರುತ್ತಿದ್ದರು. ಟರ್ನಿಂಗ್ ಬಂದಾಕ್ಷಣಾ ತಿರುಗಿಸಿಕೊಳ್ಳುವುದಕ್ಕೆ ಕಷ್ಟವಾಯ್ತು. ಸುಮಾರು ಬೂದನೂರಿನಿಂದ ಫೋನ್ ನಲ್ಲಿಯೇ ಮಾತನಾಡಿಕೊಂಡು ಬಂದ ಡ್ರೈವರ್ ಒಂದು ಕೈನಲ್ಲಿ ಫೋನ್, ಮತ್ತೊಂದು ಕೈನಲ್ಲಿ ಸ್ಟೇರಿಂಗ್ ಹಿಡಿದಿದ್ದರು ಎಂದು ಬಸ್ ನಲ್ಲಿದ್ದ ವಿದ್ಯಾರ್ಥಿ ಸಾಗರ್ ಎಂಬುವವರು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಮಾತನಾಡಿದ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಇವತ್ತು ಬೆಳಗ್ಗೆ ಎಕ್ಸ್ ಪ್ರೆಸ್ ನಿಂದ ಸರ್ವೀಸ್ ರೋಡ್ ಗೆ ಕುಣಿಗಲ್ ಡಿಪೋಗೆ ಸೇರಿದ ಒಂದು ಕೆಎಸ್ಆರ್ಟಿಸಿ ಬಸ್ ಸರ್ವೀಸ್ ರೋಡ್ ತೆಗೆದುಕೊಳ್ಳುತ್ತಿದ್ದಾಗಲೇ, ಪಕ್ಕದಲ್ಲಿ ನಿಂತಿದ್ದ ಒಂದು ಕ್ಯಾಟರಿಂಗ್ ವಾಹನಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಪಲ್ಟಿಯಾಗಿದೆ. ಬಸ್ ನಲ್ಲಿದ್ದ ಹದಿನೈದು ಇಪ್ಪತ್ತು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸದ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಒಳ್ಳೆಯ ಚಿಕಿತ್ಸೆ ಕೊಡಿಸಲು ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇವೆ. ವಿಡಿಯೋ ಕುಇಡ ಪರಿಶೀಲನೆ ಮಾಡಿದ್ದೇವೆ. ಜೋರಾಗಿ ಬರುತ್ತಿದ್ದ ಡ್ರೈವರ್ ಸರ್ವೀಸ್ ರೋಡ್ ಗೆ ತಕ್ಷಣ ತೆಗೆದುಕೊಂಡಾಗ ಬ್ಯಾಲೆನ್ಸ್ ತಪ್ಪಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದಿದ್ದಾರೆ.