ಸಿದ್ದರಾಮಯ್ಯ ಸರ್ಕಾರದಲ್ಲಿ ಈಗಾಗಲೇ ಸಚಿವರೆಲ್ಲಾ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸಚಿವ ಸ್ಥಾನ ಸಿಗದೆ ಇದ್ದ ಕಾರಣ ಹಕವರು ಅಸಮಾಧಾನ ಹೊರ ಹಾಕಿದ್ದಾರೆ. ಅದರಲ್ಲಿ ಬಿಕೆ ಹರಿಪ್ರಸಾದ್ ಕೂಡ ಒಬ್ಬರಾಗಿದ್ದಾರೆ. ಸಚಿವ ಸ್ಥಾನ ನೀಡದೆ ಇದ್ದ ಕಾರಣಕ್ಕೆ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗಿತ್ತು. ಆ ಬಗ್ಗೆ ಸ್ವತಃ ಬಿಕೆ ಹರಿಪ್ರಸಾದ್ ಅವರೇ ಉತ್ತರ ನೀಡಿದ್ದಾರೆ.
ಮೇಲ್ಮನೆ ಉಪಾಧ್ಯಕ್ಷರನ್ನು, ಸಭಾ ನಾಯಕರನ್ನು ಸಚಿವರನ್ನಾಗಿ ಮಾಡುವುದು ಸಂಪ್ರದಾಯ, ಪದ್ಧತಿ ಹಿಂದಿನಿಂದಲೂ ಇತ್ತು. ಆದರೆ ಸಿಎಂ ಸಿದ್ದರಾಮಯ್ಯ ಆ ಸಂಪ್ರದಾಯವನ್ನು ಮುರಿದಿದ್ದಾರೆ. ನಾನೆಂದು ಸಚಿವ ಸ್ಥಾನ ಬೇಕೆಂದು ಕೇಳಲಿಲ್ಲ. ಸಂಸತ್ ನಲ್ಲಿ ಸಭಾನಾಯಕರನ್ನಾಗಿ ಯಾರನ್ನು ಮಾಡಬೇಕೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನೇ ಕೇಳಿ. ಕೆಲವೊಂದು ವಿಚಾರಗಳು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹಬ್ಬುತ್ತವೆ.
ರಾಜೀನಾಮೆ ಕೊಡುವ ವಿಚಾರವೂ ಅಷ್ಟೇ. ನಾನು ಎಂದು ರಾಜೀನಾಮೆ ಕೊಡ್ತೀನಿ ಅಂತ ಹೇಳಿಲ್ಲ. ಅದೆಲ್ಲಾ ವಾಟ್ಸಾಪ್ ಯೂನಿವರ್ಸಿಟಿಯಿಂದ ಬಂದ ವಿಷಯವಾಗಿದೆ. ಸೋನಿಯಾ ಗಾಂಧಿ ಅವರು ನಂಗೊಂದು ಜವಬ್ದಾರಿ ನೀಡಿ ಪರಿಷತ್ ಸದಸ್ಯ ಸ್ಥಾನದ ಜವಬ್ದಾರಿ ನೀಡಿದ್ದಾರೆ. ಸಚಿವ ಸ್ಥಾನ ಇಲ್ಲದೇ ಇದ್ದರೂ ಪರಿಷತ್ ನ ಸಾಮಾನ್ಯ ಸದಸ್ಯನಾಗಿ ಕೆಲಸ ಮಾಡುತ್ತೇನೆ. ರಾಜೀನಾಮೆ ನೀಡುವುದಾದರೂ ಸೋನಿಯಾ ಗಾಂಧಿ ಮತ್ತು ಸಭಾಪತಿಯವರಿಗೆ ನೀಡುತ್ತೇನೆ ಎಂದು ರಾಜೀನಾಮೆ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.