
ಹಾಸನ: ಗುಬ್ಬಿ ಶ್ರೀನಿವಾಸ್ ಸದ್ಯ ಜೆಡಿಎಸ್ ನಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಅವರಿಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂಬಂತೆ ಕುಮಾರಸ್ವಾಮಿ ವಿಚಾರ ಬಂದಾಗೆಲ್ಲಾ ಹೇಳಿದ್ದಾರೆ. ಆದ್ರೆ ಇತ್ತಿಚೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಗುಬ್ಬಿ ಶ್ರೀನಿವಾಸ್ ಗೆ ಮತ್ತೆ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಇದೇ ವಿಚಾರಕ್ಕೆ ಈಗ ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.

ಜಿಲ್ಲೆಯ ಚನ್ನರಾಯಪಟ್ಟಣದ ವಡ್ಡರಹಳ್ಳಿಯಲ್ಲಿ ಮಾತನಾಡಿದ ಅವರು, ಗುಬ್ಬಿ ಕ್ಷೇತ್ರದಲ್ಲಿ ಕುಮಾರಸ್ವಾಮಿಯೇ ಅಲ್ಟಿಮೇಟ್ ಎಂದು ಯಾರಾದರು ಹೇಳಿದ್ದರೇ ಬಾಯಿ ತಪ್ಪಿ ಹೇಳಿರುತ್ತಾರೆ. ನನ್ನ ಅರಿವಿಲ್ಲದೆ ನಾನು ಯಾರಿಗೂ ಪವರ್ ಕೊಟ್ಟಿಲ್ಲ. ನಾನು ಈಗಾಗಲೇ ನಮ್ಮ ಅಭ್ಯರ್ಥಿ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ನಾಗರಾಜು ಎಂದು ಘೋಷಣೆಯಾಗಿದೆ. ಇಲ್ಲಿ ಯಾರೂ ಬೇರೆ ರೀತಿಯ ಹೇಳಿಕೆಗಳನ್ನು ನೀಡಿ ಕಾರ್ಯಕರ್ತರಿಗೆ ಗೊಂದಲ ಮೂಡಿಸುವುದು ಬೇಡ ಎಂದಿದ್ದಾರೆ.
ಈ ರೀತಿಯ ಹುಡುಗಾಟದ ಹೇಳಿಕೆಗಳನ್ನು ಕೊಡುವುದಲ್ಲ. ಆ ವ್ಯಕ್ತಿ ಪಕ್ಷದಿಂದ ದೂರ ಹೋಗಿ ಎರಡು ವರ್ಷಗಳೇ ಕಳೆದಿದೆ. ಆ ವ್ಯಕ್ತಿಯನ್ನು ಮತ್ತೆ ಪಕ್ಷಕ್ಕೆ ಬಾ ಅಂತ ಕರೆಯೋದಕ್ಕೆ ಅರ್ಜಿ ಹಾಕಿದ್ದೇವಾ..? ಇಲ್ಲಿ ಯಾವುದೇ ಗೊಂದಲವಿಲ್ಲ. ಗುಬ್ಬಿದಾಗಲಿ, ಮತ್ತೊಂದಾಗಲೀ, ಯಾವ ನಾಯಕರು ಗೊಂದಲ ಮಾಡಬಾರದು ಎಂದಿದ್ದಾರೆ.
GIPHY App Key not set. Please check settings