ದೇವಸ್ಥಾನಕ್ಕೆ ಭೇಟಿ ನೀಡಿದಾಗ, ಕಾರ್ಯಕ್ರಮಗಳಿಗೆ ತೆರಳಿದಾಗ ಅನೇಕ ಜನರ ಮಧ್ಯ ಅನೇಕರ ಚಪ್ಪಲಿಗಳು ಕಾಣೆಯಾಗುವುದು ಸಾಮಾನ್ಯ ಸಮಸ್ಯೆ.ನಮ್ಮ ಪಾದರಕ್ಷೆಗಳು ಕಳುವಾದರೆ ನಾವು ಚಿಂತಿಸಬೇಕೇ ಅಥವಾ ಸಂತೋಷಪಡಬೇಕೇ?
ಹಿಂದೂ ನಂಬಿಕೆಗಳ ಪ್ರಕಾರ, ದೇವಸ್ಥಾನದಲ್ಲಿ ಚಪ್ಪಲಿಗಳು ಕಳೆದು ಹೋದ ನಂತರ ಅವು ಅವರ ದಾರಿದ್ರ್ಯವನ್ನು ಕಳೆಯುತ್ತದೆ ಎಂದು ನಂಬುತ್ತಾರೆ. ಕೆಲವರು ಪಾದರಕ್ಷೆಗಳು ಕಳೆದು ಹೋದಾಗ, ಅವುಗಳ ಜೊತೆಗೆ ನಕರಾತ್ಮಕ ಶಕ್ತಿಗಳು ಕೂಡಾ ಮಾಯವಾಗುತ್ತವೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ಪಾದಗಳು ಮತ್ತು ಪಾದರಕ್ಷೆಗಳು ಶನಿ ಗ್ರಹಕ್ಕೆ ಸಂಬಂಧಿಸಿವೆ. ಆದರಿಂದ ದೇವಾಲಯದಲ್ಲಿ ಚಪ್ಪಲಿ ಕಳೆದುಕೊಂಡ ನಂತರ ನಿಮ್ಮ ಶನಿಯ ದೋಷಗಳ ತೀವ್ರತೆ ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.ಶನಿವಾರದಂದು ಚಪ್ಪಲಿ ಕಳೆದುಕೊಳ್ಳುವುದನ್ನು ಒಳ್ಳೆಯ ಶಕುನ ಎಂದುಕೊಳ್ಳುತ್ತಾರೆ.
ನಮ್ಮ ದೇಹದ ಭಾಗಗಳು ಗ್ರಹಗಳಿಂದ ಪ್ರಭಾವವಾಗಿರುತ್ತೆ. ಶನಿ ಚರ್ಮ ಮತ್ತು ಪಾದರಕ್ಷೆಯಲ್ಲಿ ವಾಸಿಸುತ್ತಾನೆ. ಹೀಗೆ ಚಪ್ಪಲಿ ಕಳುವಾದ್ರೆ ನಿಮ್ಮ ಸಮಸ್ಯೆಗಳು ದೂರವಾಯ್ತು ಎಂದು ಜ್ಯೋತಿಷ್ಯ ಹೇಳುತ್ತದೆ. ಶನಿ ದೇವರನ್ನು ತೃಪ್ತಿಪಡಿಸಲು ಚಪ್ಪಲಿಯನ್ನು ದಾನ ಮಾಡುವುದು ಶುಭಕರ ಎಂದು ಕೆಲವು ನಂಬಿಕೆಗಳಿವೆ. ಚಪ್ಪಲಿ ಚರ್ಮದಿಂದ ತಯಾರಾಗಿದ್ದು, ಇದು ಶನಿ ದೇವನಿಗೆ ಸಂಬಂಧಿಸಿದ ವಸ್ತುಗಳಲ್ಲಿ ಒಂದು. ಶನಿ ದೋಷ ಶಮನಕ್ಕಾಗಿ ಅಗತ್ಯವಿರುವವರಿಗೆ ಚಪ್ಪಲಿ ದಾನ ಮಾಡುವುದು ಲಾಭಕರವೆಂದು ಹೇಳಲಾಗುತ್ತದೆ.




