ಶುಭ ಕಾರ್ಯಗಳನ್ನು ಮಾಡಬಾರದು ಎಂಬ ನಂಬಿಕೆ ಬಲವಾಗಿದೆ. ಇದೇ ಕಾರಣಕ್ಕೆ ಅಮವಾಸ್ಯೆಯಂದು ಮಗು ಜನಿಸಿದರೆ ಪೋಷಕರು ಶುಭವೊ ಅಥವಾ ಅಶುಭವೊ ಎಂದು ಗೊಂದಲಕ್ಕೊಳಗಾಗುತ್ತಾರೆ.ಜ್ಯೋತಿಷ್ಯ ಶಾಸ್ತ್ರ ಈ ಕುರಿತು ಏನು ಹೇಳುತ್ತದೆ ?
ಅಮವಾಸ್ಯೆಯಂದು ಜನಿಸುವುದು ಅಶುಭ ಎಂಬುದು ತಪ್ಪು ಕಲ್ಪನೆ. ವೇದಗಳಲ್ಲಾಗಲಿ ಅಥವಾ ಪುರಾಣಗಳಲ್ಲಾಗಲಿ ಈ ದಿನದ ಜನನವನ್ನು ಕೆಟ್ಟದ್ದು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ. ಬದಲಿಗೆ, ಈ ದಿನ ಹುಟ್ಟಿದವರು ವಿಶೇಷ ಗುಣಲಕ್ಷಣಗಳನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಅಮವಾಸ್ಯೆಯಲ್ಲಿ ಜನಿಸಿದ ಅನೇಕರು ಜೀವನದಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನು ಗಳಿಸುತ್ತಾರೆ
ಅಮಾವಾಸ್ಯೆಯಂದು ಜನಿಸಿದವರು ನಿಧಾನವಾಗಿ ಕೆಲಸ – ಕಾರ್ಯಗಳನ್ನು ಆರಂಭಿಸುತ್ತಾರೆ. ಯಾವುದೇ ಕೆಲಸವನ್ನು ಮಾಡಿದರೂ ಅದನ್ನು ಸರಿಯಾದ ರೀತಿಯಲ್ಲಿ ನಿಯಮ ಬದ್ಧವಾಗಿ ಮಾಡುವುದು ಇವರ ಉದ್ದೇಶವಾಗಿರುತ್ತದೆ. ಯಾವ ವ್ಯಕ್ತಿಗಳ ಮೇಲಾದರೂ ಹೆಚ್ಚು ಸಿಟ್ಟಿನಲ್ಲಿದ್ದಾಗ ಈ ವ್ಯಕ್ತಿಗಳಿಗೆ ಒಳ್ಳೇಯದು ಯಾವುದು, ಕೆಟ್ಟದ್ದು ಯಾವುದು ಎಂಬುದೇ ತಿಳಿಯುವುದಿಲ್ಲ. ಸಿಟ್ಟಿನಲ್ಲಿ ಮನಸ್ಸಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ.ಅಮವಾಸ್ಯೆಯಂದು ಜನಿಸಿದ ಮಗು ಭವಿಷ್ಯದಲ್ಲಿ ಶಿಕ್ಷಣ, ಪ್ರೀತಿ ಮತ್ತು ಹಣಕಾಸಿನ ವಿಚಾರದಲ್ಲಿ ಒಂದಿಷ್ಟು ಹೋರಾಟವನ್ನು ಮಾಡುತ್ತದೆ.


