ಹೆಚ್.ಡಿ.ದೇವೇಗೌಡ ಚುನಾವಣಾ ರಾಜಕೀಯ ಅಂತ್ಯ?

1 Min Read

ಹಾಲಿ ರಾಜ್ಯಸಭಾ ಸದಸ್ಯರಾಗಿರುವ 92 ವರ್ಷದ ದೇವೇಗೌಡ ಸದಸ್ಯತ್ವ ಜೂನ್‌ನಲ್ಲಿ ಅಂತ್ಯಗೊಳ್ಳಲಿದೆ. ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾದ 4 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳಲಿದೆ. ಮೂವರು ಸದಸ್ಯರನ್ನು ಆಯ್ಕೆ ಮಾಡುವಷ್ಟು ಸಂಖ್ಯಾಬಲವನ್ನು ಕಾಂಗ್ರೆಸ್ ಹೊಂದಿದೆ. ಆದರೆ ದೇವೇಗೌಡರ ಮರುಆಯ್ಕೆಯ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ, ಹೆಚ್.ಡಿ.ದೇವೇಗೌಡ ಸೇರಿ ನಾಲ್ವರ ಸದಸ್ಯತ್ವ ಜೂನ್‌ನಲ್ಲಿ ಅಂತ್ಯವಾಗಲಿದೆ. ರಾಜ್ಯಸಭೆ ವಿಪಕ್ಷನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪುನರಾಯ್ಕೆ ಮಾಡುವಷ್ಟು ಶಾಸಕರ ಬಲ ಕಾಂಗ್ರೆಸ್ ಪಕ್ಷದಲ್ಲಿದೆ. ಆದರೆ ದೇವೆಗೌಡರನ್ನು ರಾಜ್ಯಸಭೆಗೆ ಮರು ಆಯ್ಕೆ ಮಾಡುವಷ್ಟು ಸಂಖ್ಯಾಬಲವನ್ನು ಪಕ್ಷ ಹೊಂದಿಲ್ಲ.

2019ರ ಲೋಕಸಭೆ ಚುಣಾವಣೆಯಲ್ಲಿ ತುಮಕೂರಿನಲ್ಲಿ ಸೋತಿದ್ದ ಹೆಚ್.ಡಿ.ದೇವೇಗೌಡರನ್ನು ರಾಜ್ಯಸಭೆಗೆ ಕರ್ನಾಟಕ ವಿಧಾನಸಭೆಯಿಂದ ಆಯ್ಕೆ ಮಾಡಲಾಯಿತು. ಆಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸೂಚನೆಯಂತೆ ಕರ್ನಾಟಕದ ಕಾಂಗ್ರೆಸ್ ಶಾಸಕರು ದೇವೇಗೌಡ ಪರವಾಗಿ ಮತದಾನ ಮಾಡಿದ್ದರು.
ಆದರೆ ಈಗ ರಾಜ್ಯದ ರಾಜಕೀಯ ಚಿತ್ರಣ ಬದಲಾಗಿದೆ. ಜೆಡಿಎಸ್ ಪಕ್ಷ ವಿಧಾನಸಭೆಯಲ್ಲಿ ಹೊಂದಿರುವುದು ಕೇವಲ 18 ಶಾಸಕರ ಬಲ. ಅಲ್ಲದೇ ಜೆಡಿಎಸ್ ಪಕ್ಷ ಎನ್‌ಡಿಎ ಮೈತ್ರಿಕೂಟ ಸೇರಿ, ಬಿಜೆಪಿ ಬೆಂಬಲಿಸಿರುವ ಕಾರಣ ಕಾಂಗ್ರೆಸ್ ಪಕ್ಷ ಜೆಡಿಎಸ್ ಬೆಂಬಲಿಸುವುದಿಲ್ಲ. ಆದ್ದರಿಂದ ದೇವೇಗೌಡರ ರಾಜ್ಯಸಭೆ ಮರು ಆಯ್ಕೆ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಬಿಜೆಪಿ ಬೆಂಬಲ ನೀಡಿದರೆ ಮಾತ್ರ ರಾಜ್ಯಸಭೆಗೆ ದೇವೇಗೌಡರು ಮರು ಆಯ್ಕೆ ಆಗಬಹುದು. ಇಲ್ಲವಾದಲ್ಲಿ ಚುನಾವಣಾ ರಾಜಕೀಯ ಅಂತ್ಯವಾಗಲಿದೆ.

Share This Article
Enable Notifications OK No thanks