ಬಿಜೆಪಿಯ ಪ್ರತಿಷ್ಠೆಯ ರಾಜ್ಯವಾಗಿರುವ ಗುಜರಾತ್ ಈ ಬಾರಿಯು ಬಿಜೆಪಿಯ ವಶವಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಎರಡು ಹಂತದ ಚುನಾವಣೆ ಮುಗಿದಿದ್ದು, ಡಿಸೆಂಬರ್ 8ರಂದು ಫಲಿತಾಂಶ ಹೊರ ಬೀಳಲಿದೆ. 7ನೇ ಬಾರಿಯೂ ಬಿಜೆಪಿಯೇ ಅಧಿಕಾರ ಹಿಡಿಯಲಿದೆ ಎಂಬುದು ಹಲವು ಸಮೀಕ್ಷೆಗಳ ಲೆಕ್ಕಚಾರವಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯ ಜಟಾಪಟಿಯ ನಡುವೆ ಈ ಬಾರಿ ಎಎಪಿ ಪಕ್ಷ ಕೂಡ ಜೋರು ಸ್ಪರ್ಧೆ ಒಡ್ಡಿತ್ತು. ಆದ್ರೆ ರಿಪಬ್ಲಿಕ್, ಜೀ ನ್ಯೂಸ್, ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಎಎಪಿ ತುಂಬಾ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. ಗುಜರಾತ್ ಚುನಾವಣೆ ಕರ್ನಾಟಕದ ಚುನಾವನೆ ಮೇಲೂ ಪರಿಣಾಮ ಬೀರುವ ಸಾಕಷ್ಟು ಸಾಧ್ಯತೆಗಳು ಇದೆ.
ಅದು ಹೇಗೆಂದರೆ, ಬಿಜೆಪಿ ಪಕ್ಷ ಗುಜರಾತ್ ನಲ್ಲಿ ಮೇಲುಗೈ ಸಾಧಿಸಿದರೆ ನೆಕ್ಸ್ಟ್ ಕರ್ನಾಟಕದಲ್ಲೂ ಬಿಜೆಪಿ ಗೆಲ್ಲುವ ಸಾಧ್ಯತೆ ತೀರಾ ಸಮೀಪವಾದಂತೆ ಆಗುತ್ತದೆ. ಆ ಕಾರಣದಿಂದ ತಮ್ಮ ವರ್ಚಸ್ಸು ಉಳಿಸಿಕೊಳ್ಳಲು ಅವಧಿ ಪೂರ್ವ ಚುನಾವಣೆಯೂ ಫಿಕ್ಸ್ ಆಗಬಹುದು. ಗುಜರಾತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಲಿನ ಸ್ಟಾಟರ್ಜಿಯನ್ನೇ ಕರ್ನಾಟಕದಲ್ಲೂ ಅಪ್ಲೈ ಮಾಡಲಾಗುತ್ತದೆ. ಇನ್ನು ಕಾಂಗ್ರೆಸ್ ಬಂದರೆ ಖರ್ಗೆ ಅವರ ನಾಯಕತ್ವಕ್ಕೆ ಪ್ರಬಲ ಆಯಾಮ ಸಿಕ್ಕಂತಾಗುತ್ತದೆ.