ಬೆಂಗಳೂರು: ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ವಾಪಾಸ್ ತೆಗೆದುಕೊಂಡಿಲ್ಲ. ಕಾಂಗ್ರೆಸ್ ಜೊತೆಗಿನ ಸಂಧಾನ ಇನ್ನು ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಶಾಸಕರು ಎಲ್ಲಿಯೂ ಹೋಗದಂತೆ ಸೂಚಿಸಿದ್ದು, ಒಂದೇ ಹೊಟೇಲ್ ನಲ್ಲಿ ವಾಸ್ತವ್ಯ ಹೂಡುವಂತೆ ಸೂಚಿಸಿದ್ದಾರೆ.
ನಾಳೆ ರಾಜ್ಯ ಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ಹಲವು ಶಾಸಕರು ಹೊಟೇಲ್ ವಾಸ್ತವ್ಯ ಹೂಡಿದ್ದಾರೆ. ಇದರ ಜೊತೆಗೆ ಗೌರಶಂಕರ್ ಕೂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಜೂನ್ 6 ರಂದು ಕುಟುಂಬದ ಸಮೇತ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಪ್ರವಾಸಕ್ಕೆಂದು ತೆರಳಿದ್ದರು. ಇಂದು ಸಂಜೆ ಬೆಂಗಳೂರಿಗೆ ಬಂದು ಇಳಿಯಲಿದ್ದು, ನೇರ ರೆಸಾರ್ಟ್ ಗೆ ಹೋಗಲಿದ್ದಾರೆ ಎಂಬ ಮಾತಿದೆ.
ಚುನಾವಣೆ ಮುಗಿಯುವ ತನಕ ಎಲ್ಲರೂ ಒಟ್ಟಾಗಿ ಇರಬೇಕೆಂಬ ಜೆಡಿಎಸ್ ವರಿಷ್ಠರ ಸೂಚನೆ ಮೇರೆಗೆ ಗೌರಿ ಶಂಕರ್ ಕೂಡ ಹೊಟೇಲ್ ಗೆ ತೆರಳಲಿದ್ದಾರೆ ಎನ್ನಲಾಗಿದೆ.