ಮೊಟ್ಟೆ ನಮ್ಮ ದೇಹಕ್ಕೆ ತುಂಬಾ ಮುಖ್ಯ. ಸಾಕಷ್ಟು ಪ್ರೋಟೀನ್ ಅಂಶ ಈ ಮೊಟ್ಟೆಯಲ್ಲಿರುತ್ತೆ. ಹೀಗಾಗಿ ಮೊಟ್ಟೆ ತಿನ್ನುವುದಕ್ಕೆ ವೈದ್ಯರು ಕೂಡ ಸಲಹೆ ನೀಡುತ್ತಾರೆ. ಆದರೆ ಮೊಟ್ಟೆ ತಿನ್ನೋದು ಓಕೆ ಅದರ ಒಳಗಿನ ಎಲ್ಲೋ ಭಾಗದ್ದೇ ಎಲ್ಲರಿಗೂ ಟೆನ್ಶನ್. ತಿನ್ನುವುದಾ..? ಬೇಡವಾ ಎಂಬ ಪ್ರಶ್ನೆ. ಅದಕ್ಕೆ ಉತ್ತರ ಇಲ್ಲಿದೆ.
ಸಾಕಷ್ಟು ಜನ ಮೊಟ್ಟೆಯ ಹಳದಿ ಭಾಗವನ್ನು ತಿನ್ನಲ್ಲ. ಒಬ್ಬೊಬ್ಬರು ಒಂದೊಂದು ರೀತಯ ಯೋಚನೆ ಹೋಂದಿದ್ದಾರೆ. ಹಳದಿ ಭಾಗ ತಿಂದರೆ ಕೊಬ್ಬು ಜಾಸ್ತಿ ಅಂತ ಒಬ್ಬರು ಅಂದ್ರೆ, ಇನ್ನೊಬ್ಬರು ತೂಕ ಹೆಚ್ಚಾಗುತ್ತೆ ಎಂಬ ಕಾರಣಕ್ಕೆ ಅದನ್ನು ದೂರವಿಟ್ಟು ವೈಟ್ ಭಾಗ ಮಾತ್ರ ತಿಂತಾರೆ.
* ಮೊಟ್ಟೆಯ ಹಳದಿ ಭಾಗವು ವಿಟಮಿನ್ ಎ, ಡಿ, ಇ, ಬಿ-12 ಮತ್ತು ಕೆ ಜೊತೆಗೆ ಮಿನೆರಲ್ ಗಳಿಂದ ಸಮೃದ್ಧವಾಗಿದೆ.
* ಒಂದು ಮೊಟ್ಟೆಯಲ್ಲಿ 186 ಮಿಲಿಗ್ರಾಂ ಕೊಲೆಸ್ಟ್ರಾಲ್ ಇರುತ್ತದೆ. ಆದರೆ ಮನುಷ್ಯನಿಗೆ ಒಂದು ದಿನಕ್ಕೆಬೇಕಿರುವುದು 300 ಗ್ರಾಂ ಕೊಲೆಸ್ಟ್ರಾಲ್ ಮಾತ್ರ.
* ಮೊಟ್ಟೆಯಲ್ಲಿನ ಕೊಲೆಸ್ಟ್ರಾಲ್, ರಕ್ತದಲ್ಲಿನ ಕೊಲೆಸ್ಟ್ರಾಲ್ ಮೇಲೆ ಯಾವುದೇ ರೀತಿಯ ಪರಿಣಾಮವನ್ನು ಬೀರುವುದಿಲ್ಲ ಎಂದು ಅಧ್ಯಯನ ಹೇಳುತ್ತದೆ.
* ಹೀಗಾಗಿ ಯಾವುದೇ ಆತಂಕವಿಲ್ಲದೆ ದಿನಕ್ಕೆ 2 – 3 ಮೊಟ್ಟೆಯನ್ನು ಸಂಪೂರ್ಣವಾಗಿ ತಿನ್ನಬಹುದು.