Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಗಂಡ – ಹೆಂಡತಿ ಜಗಳದಿಂದ ಮಗುವಿನ ಕೊಲೆಯಾಯ್ತಾ..? : ಸ್ಟಾರ್ಟ್ ಅಪ್ ಕಂಪನಿ ಸಿಇಓ ಕೇಸ್ ಗೆ ಬಿಗ್ ಟ್ವಿಸ್ಟ್

---Advertisement---

 

 

ಬೆಂಗಳೂರು: ಗೋವಾದ ಹೊಟೇಲ್ ಒಂದರಲ್ಲಿ ತಂಗಿದ್ದ ಸ್ಟಾರ್ಟ್ ಅಪ್ ಕಂಪನಿಯ ಸಿಇಒ ಸುಚನಾ ಸೇಠ್ ತನ್ನ ಮಗುವನ್ನೇ ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ. ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆಲ್ಲಾ ಗಂಡ-ಹೆಂಡತಿಯ ಜಗಳವೇ ಮಗುವಿನ ಕೊಲೆಗೆ ಕಾರಣವಾಯ್ತು ಎನ್ನಲಾಗುತ್ತಿದೆ.

ಸುಚೇನಾ ಸೇಠ್ ಮೂಲತಃ ಪಶ್ಚಿಮ ಬಂಗಾಳದವರು. ಬೆಂಗಳೂರಿಗೆ ಬಂದ ಸುಚೇನಾ, ಸ್ಟಾರ್ಟಪ್ ಕಂಪನಿ ಆರಂಭಿಸಿದರು. 2008-09ರಲ್ಲಿ ತಮಿಳುನಾಡು ಮೂಲದ ಟೆಕ್ಕಿ ವೆಂಕಟರಮಣ ಅವರ ಜೊತೆಗೆ ಮದುವೆಯಾಗಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಪತಿಯಿಂದ ದೂರವಾಗಿದ್ದರು. ಡಿವೋರ್ಸ್ ಪಡೆದ ಬಳಿಕ ಗಂಡ-ಹೆಂಡತಿ ದೂರವಾಗಿದ್ದರು. ಇದರ ನಡುವೆ ಮಗುವನ್ನು ನೋಡಲು ಕೋರ್ಟ್ ಅನುಮತಿ ನೀಡಿತ್ತು.

ಪ್ರತಿ ಭಾನುವಾರ ಭೇಟಿಗೆ ಹಾಗೂ ವಿಡಿಯೋ ಕಾಲ್ ಗೆ ಅವಕಾಶ ನೀಡಲಾಗಿತ್ತು. ಅದರಂತೆ ಸುಚೇನಾ ಪತಿ, ವಿಡಿಯೋ ಕಾಲ್ ಮಾಡುವ ಮೂಲಕ ಮಗುವಿನ ಜೊತೆಗೆ ಸಂಪರ್ಕದಲ್ಲಿದ್ದರು. ಗಂಡನ ಮೇಲಿನ ಕೋಪದಿಂದ ಮಗುವನ್ನು ಕೊಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ ಪೊಲೀಸರು. ಇನ್ನು ನಾಲ್ಕು ವರ್ಷದ ಮಗುವನ್ನು ಕೊಂದ ಸುಚೇನಾ ಸೇಠ್, ತಾವೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರಂತೆ.

ಈ ಸಂಬಂಧ ಈಗಾಗಲೇ ಚಿತ್ರದುರ್ಗ ಪೊಲೀಸರು ಸುಚೇನಾ ಸೇಠ್ ಅವರನ್ನು ಬಂಧಿಸಿದ್ದಾರೆ. ಮಗುವಿನ ಮೃತದೇಹವನ್ನು ಹಿರಿಯೂರಿನ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಮಗುವಿನ ಕೊರಳಿನ ಭಾಗದಲ್ಲಿ ನರಗಳು ಊದಿಕೊಂಡಿದ್ದು, ಮಗುವನ್ನು ಕತ್ತು ಇಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ‌.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...