ಹಾಸನ: ರಾಜ್ಯ ರಾಜಕಾರಣದಲ್ಲಿ ಪ್ರಚಾರ ಕಾರ್ಯ ಜೋರಾಗಿದೆ. ಜೆಡಿಎಸ್ ನಲ್ಲಿ ಇದೀಗ ಭವಾನಿ ರೇವಣ್ಣ ಫುಲ್ ಆಕ್ಟೀವ್ ಆಗಿದ್ದಾರೆ. ಜನರ ಬಳಿ ಹೋಗಿ ಮತಬೇಟೆ ಶುರು ಮಾಡಿಕೊಂಡಿದ್ದಾರೆ. ಈ ಬಾರಿ ಅವರ ಸ್ಪರ್ಧೆ ಪ್ರೀತಂ ಗೌಡ ವಿರುದ್ಧ ಎಂಬ ಕುರುಹು ನೀಡಿದ್ದಾರೆ. ಹಾಸನದಲ್ಲಿ ಈ ಬಾರಿ ಹೈವೋಲ್ಟೇಜ್ ಚುನಾವಣೆ ನಡೆಯೋದು ಗ್ಯಾರಂಟಿ.
ಸದ್ಯ ಹಾಸನದಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಪ್ರೀತಂಗೌಡ ಬಿಜೆಪಿಯಿಂದ ಗೆದ್ದಿದ್ದಾರೆ. ಆದ್ರೆ ಹಾಸನದಲ್ಲಿ ಯಾವಾಗಲೂ ಜೆಡಿಎಸ್ ಹಾಗೂ ಬಿಜೆಪಿ ನಡುವೆ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಇಬ್ಬರ ನಡುವೆ ಮಾತಿನ ಸಮರ ನಡೆಯುತ್ತಲೇ ಇರುತ್ತದೆ. ಹೀಗಾಗಿ ಈ ಬಾರಿ ಪ್ರೀತಂ ಗೌಡರನ್ನು ಸೋಲಿಸಲು ಭವಾನಿ ರೇವಣ್ಣ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.
ಕೇತನಹಳ್ಳಿಯಲ್ಲಿ ಭವಾನಿ ರೇವಣ್ಣ ಮಾತನಾಡುವಾಗ, ಈ ವಿಚಾರ ತಿಳಿಸಿದ್ದಾರೆ. ಕಳೆದ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಾಗಿದೆ. ಹೀಗಾಗಿ ಸರಿಯಾಗಿ ಏನು ಆಗಿಲ್ಲ. ಕೆಲಸ ಹಾಗೇ ಉಳಿದುಕೊಂಡು ಬಿಟ್ಟಿದೆ. ಆದರೆ ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಮಾತನಾಡಿಕೊಂಡು ನಿರ್ಣಯ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರೆ. ಅದಕ್ಕೂ ಮುನ್ನ ಊರಿನ ಪರಿಚಯ ಇದ್ದರೆ ಕೆಲಸ ಮಾಡಲು ನನಗೂ ಸುಲಭ. ಆ ಭಗವಂತನ ಆಶೀರ್ವಾದ ಇರಲಿ ಎಂದು ಬಯಸುತ್ತೇನೆ ಎಂದಿದ್ದಾರೆ.